ತಂತ್ರಜ್ಞ ತ್ರಿಪದಿಗಳು-೩೨೨ ಇಂದಿನೀ ಕ್ಷಣ
ಇಂದಿರುವ ಕಾಲವೇ ಚಂದ ಹೋಲಿಸೆ ನೀನು
ಹಿಂದಿದ್ದ ಮತ್ತೆ ಮುಂಬರುವ ಕಾಲಗಳೊಡನೆ,
ಇಂದಿನೀ ಕ್ಷಣ ಸ್ವರ್ಣ ದತ್ತಿ! ತಂತ್ರಜ್ಞ.
TechnoWise tripods-322 PRESENT MOMENT
In comparison with the Past and the Future times,
The present time is much more beautiful!
The Present Moment is an invaluable present! O! TechnoWise!
ತಂತ್ರಜ್ಞ ತ್ರಿಪದಿಗಳು-೩೨೧ ಮನವಿರಲಿ ಕನ್ನಡಿಯಂತೆ
ಚೆನ್ನಗಿರೆ ಅತಿಪ್ರೀತಿ! ಚೆನ್ನಗಿರದಿರೆ ದ್ವೇಷ!
ಬನ್ನಿ! ಹೋಗಿರಿ! ಎನದೆ, ಒಪ್ಪಿ ಸರಿ ಬಿಂಬಿಸುವ
ಕನ್ನಡಿಯ ಪರಿಯೆ ಮನವಿರಲಿ! ತಂತ್ರಜ್ಞ.
TechnoWise Tripods-321 A MIRROR-LIKE MIND
No inordinate love for beautiful people, and no hatred for ugly ones,
Without asking anyone to come near or to go away, a mirror accepts all and reflects truly!
May your mind be like a Mirror! O! TechnoWise!
ತಂತ್ರಜ್ಞ ತ್ರಿಪದಿಗಳು-೩೨೦ ಮನವ ಗೆಲ್ಲಲು
ನೆಲಕೆ ಬೀಳಲು, ಏಳೆ, ನೆಲದ ನೆರವೇ ಬೇಕು!
ಜಲಕೆ ಬೀಳಲು, ಬದುಕೆ, ಜಲದಲೀಜಲೆ ಬೇಕು!
ಬಲಿಸಿ ಮನ, ಮನವನೇ ಗೆಲ್ಲು! ತಂತ್ರಜ್ಞ.
TechnoWise Tripods-320 CONQUERING THE MIND
When you fall down, you take the support of ground and get up!
When thrown into water, you take the help of water to reach a bank safely!
Likewise, strengthen the mind to conquer the mind! O! TechnoWise!
ತಂತ್ರಜ್ಞ ತ್ರಿಪದಿಗಳು-೩೧೯ ನಿನ್ನ ಕನಸಿಗೆ ದ್ವಾರ
ನಿನಗೆ ಕಾಣಿಸದೇನು ಕನಸು-ನನಸಿನ ದ್ವಾರ?
ಮನಸುಮತಿಗಳ ಕೂಡಿ ನೀ ಕೆತ್ತಬೇಕದನು!
ನನಸು ನಿನ್ನದು, ಶಿಲ್ಪಿ ನೀನೆ! ತಂತ್ರಜ್ಞ.
TechnoWise Tripods-319 A DOORWAY TO YOUR DREAMS
Don't you see the doorway to your dreams?
You've to create it with your mind and intellect in unison!
You're the sculptor of your success! O! TechnoWise!
ತಂತ್ರಜ್ಞ ತ್ರಿಪದಿಗಳು-೩೧೮ ಹೃದಯದಲಿ ಬೀಜ ಬಿತ್ತನೆ
ಹೃದಯ ಕೃಷಿಯೋಗ್ಯ ನೆಲ, ಬದುಕಿನ ಜಗತ್ತಿನಲಿ!
ಒದಗಿರುವ ಬೀಜಗಳೆ ಪ್ರೀತಿ! ದಯೆ! ಹಗೆ! ಕ್ರೌರ್ಯ!
ಚದುರ ನೀ ಸರಿ ಬೀಜ ಬಿತ್ತು! ತಂತ್ರಜ್ಞ.
TechnoWise Tripods-318 SOWING IN THE HEART
Heart is a fertile soil in the world of life!
The seeds available are Love! Compassion! animosity! and cruelty!
Like a wise farmer, select proper seeds for sowing! O! TechnoWise!
ತಂತ್ರಜ್ಞ ತ್ರಿಪದಿಗಳು-೩೧೭ ಬೆಳಕು-ನೆರಳು
ಹಿರಿಸಮಸ್ಯೆಯ ದೀರ್ಘ ನೆರಳೆಂದು ಬೆದರದಿರು!
ಪರಮಜ್ಯೋತಿಯ ಇರವ ನೆರಳು ಸೂಚಿಸುತಿಹುದು!
ಇರದು ತಡ ಬೆಳಕಿನುತ್ತರಕೆ! ತಂತ್ರಜ್ಞ.
TechnoWise Tripods-317 LIGHT-SHADOW
Never fear the long shadows of your problems!
A shadow is an indicator of divine light shining somewhere!
Very soon will emerge the light of solution! O! TechnoWise!
ತಂತ್ರಜ್ಞ ತ್ರಿಪದಿಗಳು-೩೧೬ ಜೀವನಚಿತ್ರ
ಬರೆದ ಗೆರೆಯನು ಬಳಿಕ ಒರಸಲಾಸ್ಪದವಿರದು!
ಗೆರೆಗೆರೆಯ ಎಳೆದೆಳೆದ ಕಲೆಯೆ ಜೀವನಚಿತ್ರ!
ಬರೆಯೊ ಎಚ್ಚರದಿ ಚೆಲುಚಿತ್ರ! ತಂತ್ರಜ್ಞ.
TechnoWise Tripods-316 PICTURE OF LIFE
Life is a picture sketched by drawing lines;
And a line once drawn can never be erased!
With lot of care, draw a beautiful picture of life! O! TechnoWise!