Tuesday, April 24, 2018

ತಂತ್ರಜ್ಞ ತ್ರಿಪದಿಗಳು-೩೧೩ ಪರಿವರ್ತಿಸಿಕೊ ನಿನ್ನ!


ತಂತ್ರಜ್ಞ ತ್ರಿಪದಿಗಳು-೩೧೩ ಪರಿವರ್ತಿಸಿಕೊ ನಿನ್ನ!
ಪರಿಪರಿಯ ಕಟುನುಡಿಯ, ಸರಿಯಿರದ ವರ್ತನೆಯ
ಪರರು ತೋರಿಸಲವರ ಪರಿವರ್ತಿಸುವೆಯೆಂತು?
ಪರಿವರ್ತಿಸಿಕೊ ನಿನ್ನ ನೀನು! ತಂತ್ರಜ್ಞ.
TechnoWise Tripods-313 CHANGE YOURSELF
How can you change others, who
Talk ill of you and badly treat you?
Change yourself and how you react to it! O! TechnoWise!






ತಂತ್ರಜ್ಞ ತ್ರಿಪದಿಗಳು-312 ಅಂತರಂಗ ಸಿರಿ



ತಂತ್ರಜ್ಞ ತ್ರಿಪದಿಗಳು-312 ಅಂತರಂಗ ಸಿರಿ
ನಿನ್ನ ಮುಂದೇನಿಹುದೊ ನಿನ್ನ ಹಿಂದೇನಿಹುದೊ
ನಿನ್ನ ಸುತ್ತೇನಿಹುದೊ ಈಯೆಲ್ಲ ಸಿರಿಗಿಂತ
ನಿನ್ನಂತರಂಗ ಸಿರಿ ಮೇಲು ತಂತ್ರಜ್ಞ.
TechnoWise Tripods-312 Invaluable Inside
What is in front of you and what is behind you
And what is surrounding you is nothing
Compared to what is inside you! O! TechnoWise!


Sunday, April 22, 2018

ತಂತ್ರಜ್ಞ ತ್ರಿಪದಿಗಳು-೩೧೧ ರಸಕಾವ್ಯವೀ ಬಾಳು!


ತಂತ್ರಜ್ಞ ತ್ರಿಪದಿಗಳು-೩೧೧ ರಸಕಾವ್ಯವೀ  ಬಾಳು!
ಬರೆದ ಒಂದೊಂದು ಅಕ್ಷರ ಅಳಿಸಲೆಡೆಯಿರದ
ಬರೆಯುತ್ತ ಮುನ್ನಡೆವ ರಸಕಾವ್ಯವೀ ಬಾಳು!
ಹರುಷಾಂತ್ಯವಿರಲಿ ಕಾವ್ಯಕ್ಕೆ! ತಂತ್ರಜ್ಞ!
TechnoWise Tripods-311 LIFE, AN EPIC POEM!
Life is a beautiful epic poem! 
Where you can't change even one letter after writing!
Make this poetry have an happy ending! O! TechnoWise!






Saturday, April 21, 2018

ತಂತ್ರಜ್ಞ ತ್ರಿಪದಿಗಳು-೩೧೦ ನುಡಿ-ಭಾವ


ತಂತ್ರಜ್ಞ ತ್ರಿಪದಿಗಳು-೩೧೦ ನುಡಿ-ಭಾವ
ಒಡಗೂಡಿ ಬೆರೆಸದಿರು ನುಡಿಯೊಡನೆ ಭಾವವನು!
ಎಡೆಯಿಹುದು ಭಾವಗಳ ಬದಲಿಸಲು ನೂರು ಸಲ!
ನುಡಿ, ಬಿಟ್ಟ ಬಾಣ ಬಿಲ್ಲಿಂದ! ತಂತ್ರಜ್ಞ.
TechnoWise Tripods-310 WORDS - EMOTIONS
Don't mix your words with your emotions! O! Technowise!
You'll have many possibilities to change your emotions!
But spoken words are like an arrow discharded from the bow!


Monday, April 16, 2018

ತಂತ್ರಜ್ಞ ತ್ರಿಪದಿಗಳು-೩೦೯ ಹುಡುಕದಿರು ಸಂತೋಷ:


ತಂತ್ರಜ್ಞ ತ್ರಿಪದಿಗಳು-೩೦೯ ಹುಡುಕದಿರು ಸಂತೋಷ:
ನುಡಿಯಲ್ಲಿ ಮುದವಿರಲಿ, ನಡೆಯಲ್ಲಿ ಕಾಣಿಸಲಿ,
ಅಡಗಿರುವ ಮನನಭದಿ ಮುದದ ರವಿ ಉದಯಿಸಲಿ,
ಹುಡುಕದಿರು ಹೊರಗೆ ಮುದವಸ್ತು! ತಂತ್ರಜ್ಞ.
TechnoWise Tripods-309 SEEK NOT HAPPINESS:
May your speech and actions express happiness;
May the sunrise of happiness happen in the sky of your mind!
Don't seek happiness in external objects! O! TechnoWise!




ತಂತ್ರಜ್ಞ ತ್ರಿಪದಿಗಳು-೩೦೮ ಕೌರವ ಪಾಂಡವರ ಮತದಾನ:


ತಂತ್ರಜ್ಞ ತ್ರಿಪದಿಗಳು-೩೦೮ ಕೌರವ ಪಾಂಡವರ ಮತದಾನ:
ಕೌರವರು ಪಾಂಡವರು ನೂರೈದು ಜನರಿಂದ 
ಆರಿಸಲು ಮತದಾನ ನಡೆಯೆ, ಧರ್ಮಜ ಗೆಲುವ,
ಕೌರವರು ಆಗೆ ಪಾಂಡವರು! ತಂತ್ರಜ್ಞ.
TechnoWise Tripods-308 ELECTIONS - KAURAVAS & PANDAVAS:
When the voters are comprised of one hundred Kauravas and five Pandavas,
Virtuous Dharmaraja always wins, O! TechnoWise!
Only if all Kauravas become like Pandavas!  


Sunday, April 15, 2018

ತಂತ್ರಜ್ಞ ತ್ರಿಪದಿಗಳು-೩೦೭ ಚೆಲುವಿಗೆಂದೂ ನಾಶವಿಲ್ಲ!


ತಂತ್ರಜ್ಞ ತ್ರಿಪದಿಗಳು-೩೦೭ ಚೆಲುವಿಗೆಂದೂ ನಾಶವಿಲ್ಲ!
ಚೆಲುವು ಅನುಕ್ರಮವಾಗಿ ಚಲಿಸಿ ದೈಹಿಕದಿಂದ 
ಬಲಿತು ಯೋಚನೆಗಳಲಿ, ನೆಲೆಗೊಳಲಿ ಹೃದಯದಲಿ!
ಚೆಲುವಿಗೆಂದೂ ನಾಶವಿಲ್ಲ! ತಂತ್ರಜ್ಞ.
TechnoWise Tripods-307 BEAUTY IS NEVER LOST!
May beauty move sequentially from the level of face and body,
become mature in beautiful thoughts, and get well founded in the loving Heart!
Beauty is never lost! O! TechnoWise!