Friday, April 13, 2018

ತಂತ್ರಜ್ಞ ತ್ರಿಪದಿಗಳು-೩೦೬ ಭಾರತರತ್ನ TechnoWise Tripods-306 BharathaRatna


ತಂತ್ರಜ್ಞ ತ್ರಿಪದಿಗಳು-೩೦೬ ಭಾರತರತ್ನ
ಜ್ಞಾನಕ್ಕೆ ಹಾತೊರೆದ, ದೀನರಿಗೆ ದನಿಯಾದ
ಧ್ಯಾನಿಸುತ ಬೌದ್ಧವನು, ಸಂವಿಧಾನವ ಬರೆದು
ಮಾನವೀಯತೆ ಮೆರೆದ ಭೀಮ! ತಂತ್ರಜ್ಞ.
TechnoWise Tripods-306 BharathaRatna
Constant seeker of knowledge, and the voice of the downtrodden
An inspired scholar of Budhism, and the wise architect of the Constitution
Bhimji was a champion of humaneness! O! TechnoWise!

ತಂತ್ರಜ್ಞ ತ್ರಿಪದಿಗಳು-೩೦೫ ಒಳಿತು-ಕೆಡುಕು


ತಂತ್ರಜ್ಞ ತ್ರಿಪದಿಗಳು-೩೦೫ ಒಳಿತು-ಕೆಡುಕು
ಸುಗುಣವೊಂದೇ ರೀತಿ! ದುರ್ಗುಣವು ಹಲವು ಪರಿ!
ಜಗಳ ಹಗೆತನ ವಿವಿಧ! ಮೈತ್ರಿಪ್ರೀತಿಯದೊಂದೆ!
ಜಗದಿ ಕೆಡುಕಧಿಕ! ಒಳಿತಲ್ಪ! ತಂತ್ರಜ್ಞ.
TechnoWise Tripods-305 VIRTUE-VICE
Virtues are alike! but vices are very different!
Conflicts and feuds are plural! but amity and love are singular!
Is malice more than goodness in this world? O! TechnoWise!


Thursday, April 12, 2018

ತಂತ್ರಜ್ಞ ತ್ರಿಪದಿಗಳು-೩೦೪ ತಂತ್ರಜ್ಞಾನ- ಅಂತರ್ಜ್ಞಾನ


ತಂತ್ರಜ್ಞ ತ್ರಿಪದಿಗಳು-೩೦೪ ತಂತ್ರಜ್ಞಾನ- ಅಂತರ್ಜ್ಞಾನ
ತಂತ್ರಜ್ಞಾನದ ದೃಷ್ಟಿ ಮಂತ್ರಶಕ್ತಿಯ ಸೃಷ್ಟಿ!
ಯಂತ್ರಗಳ ನೆರವಿಂದ ದೇಹಮನಸಿಗೆ ಪುಷ್ಟಿ!
ಅಂತರ್ಜ್ಞಾನವು ಉದಿಸೆ ತುಷ್ಟಿ! ತಂತ್ರಜ್ಞ.
TechnoWise tripods-304 TECHNOLOGY - SPIRITUALITY
The technological vision is the creation of a world of magical powers!
The machines of wonder empower the body and the mind!
But alas! only the knowledge of the Self leads to happiness! O! TechnoWise!




Wednesday, April 11, 2018

ತಂತ್ರಜ್ಞ ತ್ರಿಪದಿಗಳು-೩೦೩ ಕ್ಷಮಿಸಿ ಮರೆತುಬಿಡು


ತಂತ್ರಜ್ಞ ತ್ರಿಪದಿಗಳು-೩೦೩ ಕ್ಷಮಿಸಿ ಮರೆತುಬಿಡು
ಕ್ಷಮೆಯಿತ್ತು ಪರಿಹರಿಸು ಶ್ರಮಿಸಿ ಭಾವದ ಸಿಕ್ಕು!
ಗಮನಿಸಿದ ದ್ವೇಷವಿಷವನು ಅಳಿಸಿ ಮರೆತುಬಿಡು!
ಕ್ಷಮಿಸಿ ಮರೆತಾಗ ಸುಕ್ಷೇಮ! ತಂತ್ರಜ್ಞ.
TechnoWise Tripods-303 FORGIVE & FORGET
Forgive and come out of the emotional tangles!
Erase the arising poisonous hostility and forget!
Forgiving and forgetting is the best policy! O! TechnoWise!


ತಂತ್ರಜ್ಞ ತ್ರಿಪದಿಗಳು-೩೦೨ ಲೇಸು




ತಂತ್ರಜ್ಞ ತ್ರಿಪದಿಗಳು-೩೦೨ ಲೇಸು
ಬರಿ ಓದುವುದಕಿಂತ ಬರೆದೋದುವುದು ಲೇಸು!
ಬರಿ ಆಡುವುದಕಿಂತ ಮಾಡಿ ಆಡಲು ಲೇಸು!
ಅರಿವು ಅನುಭವ ಕೊನೆಗೆ ಲೇಸು! ತಂತ್ರಜ್ಞ.
TechnoWise Tripods-302 THE BEST
Better to write and read than simply reading!
Better to do and talk than simply talking!
Wisdom and Experience are the best! O! TechnoWise!

Monday, April 9, 2018

ತಂತ್ರಜ್ಞ ತ್ರಿಪದಿಗಳು-೩೦೧ ಮಧುರಫಲ


ತಂತ್ರಜ್ಞ ತ್ರಿಪದಿಗಳು-೩೦೧ ಮಧುರಫಲ
ಕೊರತೆಯೇನಿರಲಿಲ್ಲ ಬರುವ ಮೊದಲಿಲ್ಲಿ ನೀ!
ತೆರಳಿದರು ಕೊರೆಯಿರದು! ಅರಿತು ಬೀಜವ ಬಿತ್ತು!
ಮರ ಬೆಳೆದು ಮಧುರಫಲ ಮುಂದೆ! ತಂತ್ರಜ್ಞ.
TechnoWise Tripods-301 SWEET FRUITS
Before you're born and after you're gone, nothing missing by your absence!
Realise this, and plant some seeds in the present! O! TechnoWise! 
May the sweet fruits be a valuable Present for the future! 



Sunday, April 8, 2018

ತಂತ್ರಜ್ಞ ತ್ರಿಪದಿಗಳು-೩೦೦ ಸದೃಶ ಗರಿ ಹಕ್ಕಿಗಳು


ತಂತ್ರಜ್ಞ ತ್ರಿಪದಿಗಳು-೩೦೦ ಸದೃಶ ಗರಿ ಹಕ್ಕಿಗಳು
ಒಡೆದು ಹೋಗುವುದಕಟ! ಅಡಗಿಸಲು ಸಾದೃಶ್ಯ, 
ಬೆಡಗಿಸಲು ಭಿನ್ನತೆಯ! ಸಾರು ನೀ ಸಾದೃಶ್ಯ!
ಒಡನಾಡಿ ಸದೃಶ ಗರಿ ಹಕ್ಕಿ! ತಂತ್ರಜ್ಞ.
TechnoWise Tripods-300 BIRDS OF THE SAME FEATHER
When similarities are suppressed and dissimilarities are highlighted,
Alas! disintegration occurs! So highlight the similarities!
Birds of the same feather flock together! O! TechnoWise!