ತಂತ್ರಜ್ಞ ತ್ರಿಪದಿಗಳು-೨೯೯ ಚಂದದ ನಖಕೇಶ, ಮನಸು
ಒಂದಿಷ್ಟು ಜೀವಾಂಶ ಹೊಂದಿರದ ನಖಕೇಶ
ದಂದಕ್ಕೆ ತುಡಿವ ನೀ, ಜೀವಪೋಷಕ ಮನದ
ಅಂದಚಂದಕೆ ಶ್ರಮಿಸೆಯೇಕೆ? ತಂತ್ರಜ್ಞ.
TechnoWise Tripods-299 BEAUTIFUL HAIR , NAILS & MIND
You, who do so much for beautifying the lifeless hair and nails,
Why not stive to make and keep the mind beautiful?
It's the mind that sustains and elevates life! O! TechnoWise!
ತಂತ್ರಜ್ಞ ತ್ರಿಪದಿಗಳು-೨೯೮ ತಪ್ಪು-ಒಪ್ಪು
ಬೆಪ್ಪ ನೀ ಹೆದರಿದರೆ, ತಪ್ಪಾಗಬಹುದೆಂದು!
ಒಪ್ಪ ನೆನೆದರೆ ಸ್ಫೂರ್ತಿ! ನೆನೆ ನೆನೆಯೆ ತಪ್ಪನ್ನೆ,
ಉಪ್ಪುಪ್ಪು ಅಡಿಗೆ ಕೆಟ್ಟಂತೆ! ತಂತ್ರಜ್ಞ.
TechnoWise Tripods-298 RIGHT - WRONG
Dumb headed you're, being afraid of what can go Wrong!
Always be inspired about what can go Right!
Thinking only about failures is like over-salting the food! O! TechnoWise!
ತಂತ್ರಜ್ಞ ತ್ರಿಪದಿಗಳು-೨೯೭ ಬಾಳು ಬೈಸಿಕಲ್ ಸವಾರಿ
ಈಸಿ ಜೈಸಲು ಜಗದಿ, ಬೈಸಿಕಲ್ಲಿನ ರೀತಿ
ಲೇಸಾದ ತೋಲನಕೆ ಮುಂದೆ ಚಾಲನೆ ಬೇಕು!
ಘಾಸಿ ದಿಟ! ಇದ್ದಲ್ಲೆ ನಿಲಲು! ತಂತ್ರಜ್ಞ.
TechnoWise Tripods-297 LIFE IS LIKE CYCLING
Living and winning in life is like riding a bicycle!
You must move continuously in order to keep your balance!
Otherwise, you'll fall down and get hurt! O! TechnoWise!
ತಂತ್ರಜ್ಞ ತ್ರಿಪದಿಗಳು-೨೯೬ ನಿರ್ಧಾರಗಳು
ಸರಿಯ ನಿರ್ಣಯದಿಂದ ಎರಡುಮಡಿ ವಿಶ್ವಾಸ!
ಕೊರೆಯ ನಿರ್ಣಯಕೆ ಇಮ್ಮಡಿ ಜೀವನಾನುಭವ!
ಅರಿವಿನೊಡನಿರಲಿ ನಿರ್ಧಾರ! ತಂತ್ರಜ್ಞ.
TechnoWise Tripods-296 DECISIONS
Confidence doubles with every correct decision,
And a wrong decision doubles experiential learning;
Be making wisdom-based decisions! O! TechnoWise!
ತಂತ್ರಜ್ಞ ತ್ರಿಪದಿಗಳು-೨೯೫ ಕೊನೆಯ ಗುರಿ: ಆನಂದ
ಹೊಟ್ಟೆಬಟ್ಟೆಯ ಸೊಗಕೆ, ಎತ್ತರದ ಇರವರಿವು,
ಬಿತ್ತರದ ಮನ್ನಣೆಗೆ, ಪ್ರಣಯಕ್ಕೆ ಹೆಣಗುವುದು
ತುತ್ತತುದಿ ಗುರಿಯೆ ಆನಂದ! ತಂತ್ರಜ್ಞ.
TechnoWise Tripods-295 FINAL AIM: HAPPINESS
For good food, beautiful clothes, big house, and vast knowledge,
For recognition and love people toil! O! TechnoWise!
All with the final aim of Happiness!
ತಂತ್ರಜ್ಞ ತ್ರಿಪದಿಗಳು-೨೯೪ ಪರಾನುಭೂತಿ
ನಿನ್ನ ತಪ್ಪನು ನೀನು ಖಿನ್ನನಾಗಿಯೆ ಹಳಿದು,
ನಿನ್ನ ಮೆಚ್ಚುವ ಪರಿಯೆ, ದ್ವೇಷಿಸುತ ಪಾಪವನು
ಮನ್ನಣೆಯನಿಡು ಪಾಪಿಯತ್ತ! ತಂತ್ರಜ್ಞ.
TechnoWise Tripods-294 EMPATHY
As you disapprove your own wrong doings,
And still love yourself, likewise hate the sins of the sinners,
But love the sinners! O! TechnoWise.
ತಂತ್ರಜ್ಞ ತ್ರಿಪದಿಗಳು-೨೯೨ ಸಂಭಾಷಣೆಯ ಸೊಗಸು
ಹೇಳು ಆಸಕ್ತಿಯಲಿ, ಕೇಳುವವ ನಲಿವಂತೆ;
ಕೇಳು ತನ್ಮಯನಾಗಿ, ಹೇಳುವವನೊಲಿವಂತೆ;
ಹೇಳಿಕೇಳುವುದಾಗ ಸೊಗಸು! ತಂತ್ರಜ್ಞ.
TechnoWise Tripods-292 DELIGHTFUL DIALOGUES
Speak in such a way that the listener enjoys listening to you;
Listen in such a way that the speaker loves to talk to you;
In such a case, speaking and listening become delightful! O! TechnoWise!