Saturday, March 17, 2018

ತಂತ್ರಜ್ಞ ತ್ರಿಪದಿಗಳು-೨೮೪ ಯುಗಾದಿ ಶುಭಾಶಯಗಳು


ತಂತ್ರಜ್ಞ ತ್ರಿಪದಿಗಳು-೨೮೪ ಯುಗಾದಿ ಶುಭಾಶಯಗಳು
ಜಗಕಧಿಕ ರವಿಶಕ್ತಿ ಸಿಗುವ ಪ್ರಪ್ರಥಮ ದಿನ;
ಸೊಗ-ದುಗುಡ, ಬೇವು-ಬೆಲ್ಲದ ಬಾಳು ನೆನೆವ ದಿನ;
ಬಗೆಯರಳಲಾದಿ ಈ ಯುಗಾದಿ! ತಂತ್ರಜ್ಞ.
TechnoWise Tripods-284 YUGADI GREETINGS
It's the first day of getting more energy from the sun!
It's a day to remember that joy and sorrow are duals like sweet jaggery and bitter neem;
Let Yugadi be the day of flowering of the mind! O! TechnoWise!








ತಂತ್ರಜ್ಞ ತ್ರಿಪದಿಗಳು-೨೮೩ ಬಾಲವನ ಕಲ್ಪತರು



ತಂತ್ರಜ್ಞ ತ್ರಿಪದಿಗಳು-೨೮೩ ಬಾಲವನ ಕಲ್ಪತರು

ಬಾಲರಿಗೆ ತೋರದಿರೆ ಹಾಲಿನಂಗಡಿ ದಾರಿ,
ಚಾಲನೆಯು ಸಹಜ ಆಲ್ಕೋಹಾಲು ದೊರೆವತ್ತ!
ಬಾಲವನ ಕಲ್ಪತರುವಾಗು! ತಂತ್ರಜ್ಞ.
TechnoWise Tripods-283 WISH FULFILLING TREE IN A CHILDREN PARK

If youngsters are not shown the path to a milk-booth,
They see highways leading to a liquor-booth everywhere!
Become a Wish-fulfilling tree in the children park! O! TechnoWise!




Thursday, March 15, 2018

ತಂತ್ರಜ್ಞ ತ್ರಿಪದಿಗಳು-೨೮೨ ಹಾಲಮ್ಮ! ಆಲ್ಕೋ ಹಾಲಮ್ಮ!


ತಂತ್ರಜ್ಞ ತ್ರಿಪದಿಗಳು-೨೮೨ ಹಾಲಮ್ಮ! ಆಲ್ಕೋ ಹಾಲಮ್ಮ!
ಕಾಲು ಸೋತರು ಅಲೆಯೆ ಹಾಲಮ್ಮ, ಆಲ್ಕೋ
-ಹಾಲಮ್ಮನೆಡೆಗೆ ಜನರೋಡುವರು ... ಮಾದಕತೆ
ಮೇಲೇನು ಮಾಧುರ‍್ಯಕಿಂತ? ತಂತ್ರಜ್ಞ!
TechnoWise Tripods-282 MILK-MAID! WINE-MAID!
As the milk-maid is walking till her feet are aching,
People rush in cars to the distant shop of the wine-maid!
Is intoxication more attractive than sweetness? O! TechnoWise!




Wednesday, March 14, 2018

ತಂತ್ರಜ್ಞ ತ್ರಿಪದಿಗಳು-೨೮೧ ನಿರೀಕ್ಷೆಗಳು


ತಂತ್ರಜ್ಞ ತ್ರಿಪದಿಗಳು-೨೮೧ ನಿರೀಕ್ಷೆಗಳು
ತಾಯಿತಂದೆಯು! ಎದೆಯ ನಾಯಕಿಯು! ಸಾಕಿರುವ
ನಾಯಿ ಸಹ! ನಿನ್ನೂಹೆಯಂತಿರದು ಸಂಪೂರ್ಣ!
ಹಾಯಾಗು! ಇರಲು ಅರ್ಧಾಂಶ! ತಂತ್ರಜ್ಞ.
TechnoWise Tripods-281 EXPECTATIONS!
Your parents! Spouse! Even your pet dog!
May not be fully as expected by you! O! TechnoWise!
Relax please, if they come up to the half way mark!
ತಂತ್ರಜ್ಞ ತ್ರಿಪದಿಗಳು-೨೮೧ ನಿರೀಕ್ಷೆಗಳು
ತಾಯಿತಂದೆಯು! ಎದೆಯ ನಾಯಕಿಯು! ಸಾಕಿರುವ
ನಾಯಿ ಸಹ! ನಿನ್ನೂಹೆಯಂತಿರದು ಸಂಪೂರ್ಣ!
ಹಾಯಾಗು! ಇರಲು ಅರ್ಧಾಂಶ! ತಂತ್ರಜ್ಞ.
TechnoWise Tripods-281 EXPECTATIONS!
Your parents! Spouse! Even your pet dog!
May not be fully as expected by you! O! TechnoWise!
Relax please, if they come up to the half way mark!


Tuesday, March 13, 2018

ತಂತ್ರಜ್ಞ ತ್ರಿಪದಿಗಳು-೨೮೦ ಮಾನಸಿಕ ನಿಲುವು


ತಂತ್ರಜ್ಞ ತ್ರಿಪದಿಗಳು-೨೮೦ ಮಾನಸಿಕ ನಿಲುವು
ಧನದ ಬೆಂಬಲಕಿಂತ ಮನದ ಮುಂಬಲ ಮುಖ್ಯ!
ತನುವಿನಾರೋಗ್ಯಕ್ಕೆ ಬಾಳಿನಲಿ ಭಾಗ್ಯಕ್ಕೆ
ಮನದ ನಿಲುವೇ ನಲಿವು! ಗೆಲುವು! ತಂತ್ರಜ್ಞ.
TechnoWise Tripods-280 MENTAL ATTITUDE
For bodily health and all the good fortunes in life,
More than the monetary support, mental succour is the high spot!
Mental attitude is pivotal for joy and success in life! O! TechnoWise!



Sunday, March 11, 2018

ತಂತ್ರಜ್ಞ ತ್ರಿಪದಿಗಳು-೨೭೯ ಕಲಿಯುಗದಿ ಕಲಿಕೆ


ತಂತ್ರಜ್ಞ ತ್ರಿಪದಿಗಳು-೨೭೯ ಕಲಿಯುಗದಿ ಕಲಿಕೆ

ಕಲಿಯುಗದಿ ಗುರುಸಹಿತ, ಕಲಿ! ಮತ್ತೆ ಗುರುರಹಿತ!
ಕಲಿ, ಧನಂಜಯ ಏಕಲವ್ಯರನು ಸಂಗಮಿಸಿ,
ನಲಿವು ಜತೆಯಿರೆ ಕಲಿಕೆ ಪೂರ್ಣ! ತಂತ್ರಜ್ಞ.
TechnoWise Tripods-279 LEARNING NOW!

In this era, learn with and without teacher!
Like Arjuna and Ekalavya of Mahabharata!
Learning with joy is wholesome! O! TechnoWise!


Saturday, March 10, 2018

ತಂತ್ರಜ್ಞ ತ್ರಿಪದಿಗಳು-೨೭೮ ಸುಗುಣ - ದುರ್ಗುಣ


ತಂತ್ರಜ್ಞ ತ್ರಿಪದಿಗಳು-೨೭೮ ಸುಗುಣ - ದುರ್ಗುಣ

ಎರಡು ಸಲ ದಿವಸದಲಿ ಸರಿಸಮಯ ತೋರಿಸುವ
ಸರಿಯಿರದ ಗಡಿಯಾರದಂತೆ ಕುಜನರ ಸುಗುಣ
ದಿರವು ದುರ್ಗುಣಗಣದ ನಡುವೆ ತಂತ್ರಜ್ಞ.
TechnoWise Tripods-278 GOOD - BAD

Like a clock in disrepair, showing correct time twice a day,
So also, some good qualities exist, O! TechnoWise!
Among the many bad qualities of bad people!