Friday, March 9, 2018

ತಂತ್ರಜ್ಞ ತ್ರಿಪದಿಗಳು-೨೭೭ ಕತ್ತಲ ಸುರಂಗ


ತಂತ್ರಜ್ಞ ತ್ರಿಪದಿಗಳು-೨೭೭ ಕತ್ತಲ ಸುರಂಗ

ತತ್ತರಿಸಿ ಬೆದರುವೆಯ ಕತ್ತಲ ಸುರಂಗದಲಿ?
ಹತ್ತೆಣಿಸುವಷ್ಟರಲಿ ರೈಲು ಬೆಳಕಿನ ಬೀಡು!
ಕತ್ತಲ ಸುರಂಗ ಬಾಳಲ್ಲು! ತಂತ್ರಜ್ಞ.

TechnoWise Tripods-277 DARK TUNNEL

Do you get frightened when your train enters a dark tunnel?
After a short while, the train comes out from darkness into bright light!
In life too, you come across dark tunnels! O! TechnoWise!





Wednesday, March 7, 2018

ತಂತ್ರಜ್ಞ ತ್ರಿಪದಿಗಳು-೨೭೬ ಧನ್ಯ


ತಂತ್ರಜ್ಞ ತ್ರಿಪದಿಗಳು-೨೭೬ ಧನ್ಯ

ಬರಿಗೈಲೆ ಬಂದ ನೀ, ಮರಳಿದರು ಬರಿಗೈಲೆ,
ಕಿರುನೆನಪು ಮನದಲ್ಲಿ-ತುಸುಜಾಗ ಹೃದಯದಲಿ
ಇರಿಸಿದರೆ ಪರರು, ನೀ ಧನ್ಯ! ತಂತ್ರಜ್ಞ.
TechnoWise Tripods-276 BLESSED

You come here bringing nothing, and return taking nothing;
But, if others keep sweet remembrances in their Mind, and a small place in their Heart,
Then, be assured that you're really blessed! O! TechnoWise!





Tuesday, March 6, 2018

ತಂತ್ರಜ್ಞ ತ್ರಿಪದಿಗಳು-೨೭೫ ಆಗು


ತಂತ್ರಜ್ಞ ತ್ರಿಪದಿಗಳು-೨೭೫ ಆಗು!
ನೆಲದಿ ಹುಗಿಯಲು ಬೀಜ, ಜಲದಿ ಮುಳುಗಿಸೆ ಮೀನು,
ಬಲೆಗೆ ಬೀಳಿಸೆ ಗಾಳಿ, ಬಾನಿಗೆಸೆಯಲು ಗರುಡ,
ಗೆಲಲು ಬಾಳಲಿ ಆಗು, ಆಗು! ತಂತ್ರಜ್ಞ.
TechnoWise Tripods-275 BECOME!
Become a seed when buried, and a fish when in deep waters,
Become the air when caught in the net, and an eagle when thrown to sky,
Always become and become to win the battle of life! O! TechnoWise!



ತಂತ್ರಜ್ಞ ತ್ರಿಪದಿಗಳು-೨೭೪ ತುತ್ತೂರಿ


ತಂತ್ರಜ್ಞ ತ್ರಿಪದಿಗಳು-೨೭೪ ತುತ್ತೂರಿ

ಇರಲು ದೀಪಕೆ ಬೆಳಕು, ಪರಿಚಯದ ನುಡಿ ಬೇಕೆ?
ವರಕಾರ್ಯ ಗೈದಿರಲು ಡಂಗುರದ ಧ್ವನಿಯೇಕೆ?
ಹಿರಿಕಜ್ಜ ಅವರ ತುತ್ತೂರಿ! ತಂತ್ರಜ್ಞ.

TechnoWise Tripods-274 TRUMPET

A lighted lamp doesn't require any introduction!
Great achievers needn't boast about their deeds!
Their work is their trumpet! O TechnoWise!

Saturday, March 3, 2018

ತಂತ್ರಜ್ಞ ತ್ರಿಪದಿಗಳು-273 ಆಸೆ - ತೃಪ್ತಿ


ತಂತ್ರಜ್ಞ ತ್ರಿಪದಿಗಳು-273 ಆಸೆ - ತೃಪ್ತಿ
ಹಲವಾರು ಆಸೆಗಳು ಅಳವು ಮೀರಿ ದುಬಾರಿ!
ನಲಿವು ತೃಪ್ತಿಯ ತರುವ ಕೆಲವೊಂದು ಬಹು ಅಗ್ಗ-
ಒಲವು, ನಗು, ಮಧುರ ಸಂಬಂಧ! ತಂತ್ರಜ್ಞ.
TechnoWise Tripods-273 DESIRE - SATISFACTION
Many of our desires are expensive and beyond our reach!
But some that really satisfy and make us happy are totally free-
Love, Laughter, and good relations! O! TechnoWise!


Friday, March 2, 2018

ತಂತ್ರಜ್ಞ ತ್ರಿಪದಿಗಳು-272 ಮುಷ್ಟಿಕಾಳಗದ ಕಣ


ತಂತ್ರಜ್ಞ ತ್ರಿಪದಿಗಳು-272 ಮುಷ್ಟಿಕಾಳಗದ ಕಣ
ಬಾಳು ದಿಟದಲಿ ಮುಷ್ಟಿಕಾಳಗದ ಕಣದಂತೆ!
ಬೀಳಲೊಬ್ಬನು ಕೆಳಗೆ ಸೋತನೆನ್ನುವುದಿಲ್ಲ!
ಮೇಲೇಳದಿರೆ ಮಾತ್ರ ಸೋಲು! ತಂತ್ರಜ್ಞ.
TechnoWise Tripods-272 BOXING RING
Life is verily like a boxing ring! O! TechnoWise!
Defeat isn't declarerd when you fall down!
When you're unable to rise up, you're declared as defeated!

Thursday, March 1, 2018

ತಂತ್ರಜ್ಞ ತ್ರಿಪದಿಗಳು-೨೭೧ ಉಚಿತ-ಅಮೂಲ್ಯ


ತಂತ್ರಜ್ಞ ತ್ರಿಪದಿಗಳು-೨೭೧ ಉಚಿತ-ಅಮೂಲ್ಯ
ನಮಗೆ ಬಂದಿದೆ ಉಚಿತ, ಅಮೂಲ್ಯ ಅನುಪಮವಿದು;
ನಮಗೆ ಸೇರದ, ಸಂಗ್ರಹಕೆ ಸಿಗದ, ಉಪಯುಕ್ತ
"ಸಮಯ" ಕಳೆದರೆ ಸಿಗದು ಮತ್ತೆ! ತಂತ್ರಜ್ಞ.
TechnoWise Tripods-271 FREE-PRICELESS
We got it free, but it's verily priceless;
We can't own it nor keep it, but we can use it, O! TechnoWise!
We can never get it back, once we lose this "TIME".