ತಂತ್ರಜ್ಞ ತ್ರಿಪದಿಗಳು-೨೫೭ ನೇರಪಥ-ವಕ್ರಪಥ
ಆರತಿಯ ಹಿಡಿದರೂ ನೇರಪಥ ನಿರ್ಜನವು;
ಜೋರು ನುಗ್ಗಾಟ ತಡೆಯಿರುವ ದುರ್ಮಾರ್ಗದಲಿ;
ಭಾರಿ ಸೆಳೆತವೆ ವಕ್ರ ಪಥಕೆ? ತಂತ್ರಜ್ಞ!
TechnoWise Tripods-257 RIGHT PATH - UNRIGHTEOUS PATH
Desolate is the right path in spite of welcoming with waving of lights;
But in closed unrighteous paths, there's thronging and commotion;
O! TechnoWise! Why are the evil paths so attractive?
ತಂತ್ರಜ್ಞ ತ್ರಿಪದಿಗಳು-೨೫೬ ಸೊತ್ತು-ತೊತ್ತು
ತೊತ್ತಾಗದಿರು ನೀನು ಸೊತ್ತುಗಳ ರಾಜ್ಯದಲಿ!
ತುತ್ತಾಗಿ ಒತ್ತಡಕೆ ದಾಸನಾಗದೆ, ನಿನ್ನ
ಸೊತ್ತುಗಳಿಗಾಗು ನೀ ಸ್ವಾಮಿ! ತಂತ್ರಜ್ಞ.
TechnoWise Tripods-257 SLAVE TO GADGETS
Don't be a slave in the kingdom of gadgets!
Without yielding to the intense pressure of slavery,
Be a Master of gadgets! O! TechnoWise!
ತಂತ್ರಜ್ಞ ತ್ರಿಪದಿಗಳು-೨೫೫ ಮಹಾ ಶಿವರಾತ್ರಿ
ಹೊರಗಣ್ಣಿಗಧಿಕತರ ತೆರೆಯುತ್ತ ಒಳಗಣ್ಣ,
ವರಶೂನ್ಯ ಗಳಿಸುತ್ತ, ಪ್ರೀತಿದಯೆ ತುಂಬುತ್ತ,
ಅರಿವ ಧ್ಯಾನಿಸುವ ಶಿವರಾತ್ರಿ ತಂತ್ರಜ್ಞ.
TechnoWise Tripods-255 MAHA SHIVARATHRI
Opening the inner eye wider than the outer eye,
Creating emptiness inside and filling it with love and compassion,
Shivarathri is the night of Knowing and Meditation, O! TechnoWise!
ತಂತ್ರಜ್ಞ ತ್ರಿಪದಿಗಳು-254 ಹೊರಘಮಲು ಒಳಬರಲು
ಹೊಟ್ಟೆಗೇ ಹಿಟ್ಟಿಲ್ಲ, ಜುಟ್ಟಿಗೇತಕೆ ಮೊಲ್ಲೆ?
ಹೊಟ್ಟುನುಡಿಯಿದು, ತಿಳಿಯೊ! ಹೊರಘಮಲು ಒಳಬರಲು
ದೃಷ್ಟಿಸುವೆ ಸತ್ಫಲದ ಪಥವ! ತಂತ್ರಜ್ಞ.
TechnoWise Tripods-254 FRAGRANCE INSIDE
When no bread to eat, what use is the jasmine on the head?
An empty slogan, perhaps!when the outside fragrance spreads inside,
The path to progress may become visible, O! TechnoWise!
ತಂತ್ರಜ್ಞ ತ್ರಿಪದಿಗಳು-೨೫೩ ಒಳಹೊರಗೆ
ಒಳಗೆ ತಣ್ಣಗೆಯಿರಲು ಇಳೆಯೆಲ್ಲ ತಂಗಾಳಿ;
ಝಳದ ಬಿಸಿಲಿರಲೊಳಗೆ ಹೊರಗೆಲ್ಲ ಬೆಂಗಾಡು;
ಒಳಬೆಳಕೆ ಬೆಳಗುವುದು ಹೊರಗೆ ತಂತ್ರಜ್ಞ.
TechnoWise Tripods-INSIDE... OUTSIDE
When it's cool inside, pleasant breeze outside;
Scorching desert outside, when it's hot inside;
It's the inner light that lights up the world outside! O! TechnoWise!
ತಂತ್ರಜ್ಞ ತ್ರಿಪದಿಗಳು-೨೫೨ ಚುನಾವಣೆ...ದೇವಾಲಯ
ಇರೆ ಚುನಾವಣೆ ಮುಂದೆ, ಬರೆ ಪರೀಕ್ಷೆಯು ಬಳಿಗೆ,
ಇರುವ ಗುಡಿ ಚರ್ಚು ಮಸಜೀದಿ ಭಕ್ತರು ಬಹಳ!
ಬರಲು ಫಲಿತಾಂಶ ಜನ ವಿರಳ! ತಂತ್ರಜ್ಞ.
TechnoWise Tripods-252 ELECTIONS... TEMPLES
When elections are near, and examinations fast approaching,
Devotees throng temples, churches, and mosques;
After the results, desolate are the places of worship, O! TechnoWise!
ತಂತ್ರಜ್ಞ ತ್ರಿಪದಿಗಳು-೨೪೯ ಹಾವು-ಹಗ್ಗ
ಹಾವೆಂದು ಹಗ್ಗವನು ಭಾವಿಸುವುದಜ್ಞಾನ!
ಹಾವ ಹಗ್ಗವೆನುತ್ತ ಹಿಡಿಯೆ ಅಜ್ಞಾನತರ!
ಹಾವೊ? ಹಗ್ಗವೊ? ಪ್ರಶ್ನೆ ಜ್ಞಾನ! ತಂತ್ರಜ್ಞ.
TechnoWise Tripods-249 SNAKE-ROPE
Mistaking a rope for a snake is ignorance!
Mistaking a snake for a rope is more ignorance!
Questioning whether a snake or a rope is knowledge! O! TechnoWise!