Wednesday, November 22, 2017

ತಂತ್ರಜ್ಞ ತ್ರಿಪದಿಗಳು-196 ಚಂದ್ರಶೇಖರ ಆಜಾ಼ದ್‌


ತಂತ್ರಜ್ಞ ತ್ರಿಪದಿಗಳು-196 ಚಂದ್ರಶೇಖರ ಆಜಾ಼ದ್‌
ಪರರು ಮೀರದೆ ನಿನ್ನ, ಮೀರು ನಿನ್ನನೆ ನೀನು!
ವರುಷದಲಿ ಪ್ರತಿದಿನವು ನಿನ್ನ ನೀ ಜಯಿಸುವುದು
ಪರಮ ಪರುಷಾರ್ಥಸಾಧನೆಯು ತಂತ್ರಜ್ಞ.
TechnoWise-196 CHANDRASHEKARA AZAD
Don't see others doing better than you!
Beat your own records every day,
Success is a fight between you and yourself.
         



Tuesday, November 21, 2017

ತಂತ್ರಜ್ಞ ತ್ರಿಪದಿಗಳು-೧೯೫ ಆಳದಲಿ ಸತ್ವ-ಆಕಾಶದಲ್ಲವಕಾಶ

      

ತಂತ್ರಜ್ಞ ತ್ರಿಪದಿಗಳು-೧೯೫ ಆಳದಲಿ ಸತ್ವ-ಆಕಾಶದಲ್ಲವಕಾಶ
ಆಳಕಿಳಿ ನೆಲದೊಳಗೆ, ನೀಳ ಬೆಳೆ ನಭದ ಕಡೆ;
ಆಳದಲಿ ಸತ್ವ, ಆಕಾಶದಲ್ಲವಕಾಶ;
ಏಳು ಮೇಲಕೆ ದೇವದಾರು! ತಂತ್ರಜ್ಞ.
TechnoWise Tripods-195 ENERGY IN DEPTH - SPACE IN THE SKY
Go deep into the earth, and grow tall skywards;
There's energy in the depth, and space in the sky! O TechnoWise!
Grow tall like a deodar tree!
      

Monday, November 20, 2017

      

ತಂತ್ರಜ್ಞ ತ್ರಿಪದಿಗಳು-೧೯೪ ಒಳಚೆಲುವ ನೀನರಿಯೆ
ಪಂಚವರ್ಣದ ಗಿಳಿಗಳಂಚೆ ನವಿಲುಗಳೆಲ್ಲ
ಮಿಂಚಿ ಸೊಗಸುವ ತಮ್ಮ ಚೆಲುವನರಿಯದ ರೀತಿ
ಕೊಂಚವೂ ಅರಿಯೆ ಒಳ ಚೆಲುವ ತಂತ್ರಜ್ಞ.
TechnoWise Tripods-194 CANN'T SEE INNER BEAUTY
As the colorful parrots and peacocks and snow-white swans
Cann't see how truly beautiful they are, O TechnoWise!
So also people cann't see their true inner beauty!

Saturday, November 18, 2017

ತಂತ್ರಜ್ಞ ತ್ರಿಪದಿಗಳು-೧೯೩ ಪಳಗಿಸುವೆ ವ್ಯಾಘ್ರ ಮದಗಜವ

      

ತಂತ್ರಜ್ಞ ತ್ರಿಪದಿಗಳು-೧೯೩ ಪಳಗಿಸುವೆ ವ್ಯಾಘ್ರ ಮದಗಜವ
ಹಮ್ಮೆನುವ ವ್ಯಾಘ್ರ! ಮೈ ಝುಮ್ಮೆನುವ ಮದಗಜವ
ಸುಮ್ಮನಾಗಿಸಿ ಪಳಗಿಸುತ ಆಟವಾಡಿಸುವೆ!
ಹಮ್ಮನ್ನು ಪಳಗಿಸೆಯ! ಒಳಗೆ! ತಂತ್ರಜ್ಞ.
TechnoWise Tripods-193 TAMING ROARING TIGERS
Being an expert in taming and playing
With roaring tigers and wild tuskers! O TechnoWise!
Cann't you tame this inner EGO?

ತಂತ್ರಜ್ಞ ತ್ರಿಪದಿಗಳು-೧೯೨ ಆಯಾತ-ನಿರ್ಯಾತ

      

ತಂತ್ರಜ್ಞ ತ್ರಿಪದಿಗಳು-೧೯೨ ಆಯಾತ-ನಿರ್ಯಾತ
ಸುರಲೋಕದಾಯಾತ ಬಲಿಸು ಹರುಷೋತ್ಸಾಹ!
ನರಕಕ್ಕೆ ನಿರ್ಯಾತ ಕೊಡು ಚಿಂತೆ ಭಯ ಕ್ರೋಧ!
ನರಕ-ನಾಕಕೆ ಮನಸು ದ್ವಾರ ತಂತ್ರಜ್ಞ.
TechnoWise Tripods-192 IMPORT - EXPORT
Increase imports of enthusiasm and joy from heaven!
Export worry, fear and anger to hell! O TechnoWise!
For both heaven and hell, mind is the only port of entry!
     



Friday, November 17, 2017

ತಂತ್ರಜ್ಞ ತ್ರಿಪದಿಗಳು-191 ಸ್ವರ್ಗಕಲ್ಪಿತ-ಭೂಮಿರಚಿತ

       
     
ತಂತ್ರಜ್ಞ ತ್ರಿಪದಿಗಳು-191 ಸ್ವರ್ಗಕಲ್ಪಿತ-ಭೂಮಿರಚಿತ
ಹಿಗ್ಗಿ ನಗಲೊಂದು ಕ್ಷಣ, ಹಿಗ್ಗೆ ರೋಗನಿರೋಧ;
ತಗ್ಗುವುದು ಪ್ರತಿರೋಧ ನಿಮಿಷರೋಷಕೆ- ದೇಹ
ಸ್ವರ್ಗಕಲ್ಪಿತ ಭೂಮಿರಚಿತ ತಂತ್ರಜ್ಞ.
TechnoWise-191 DESIGNED IN HEAVEN & MADE IN EARTH
One minute of laughter strengthens the immune system for the whole day!
And one minute of anger weakens the immune system for five hours! O TechnoWise!
This marvellous body is designed in heaven! and made in earth!
      


Thursday, November 16, 2017

ತಂತ್ರಜ್ಞ ತ್ರಿಪದಿಗಳು-190 ಸ್ವಾತಂತ್ರ್ಯ ಆಯ್ಕೆಯಲಿ

     

ತಂತ್ರಜ್ಞ ತ್ರಿಪದಿಗಳು-190 ಸ್ವಾತಂತ್ರ್ಯ ಆಯ್ಕೆಯಲಿ
ಮನ ಬಯಸಿದಾಯ್ಕೆಯಲಿ ನಿನಗೆ ಸ್ವಾತಂತ್ರ್ಯವಿದೆ!
ಎಣಿಸದಿರು ಆಯ್ಕೆಪರಿಣಾಮ ತಪ್ಪಿಸಿಕೊಳಲು
ನಿನಗಿರುವುದೆಂದು ಸ್ವಾತಂತ್ರ್ಯ! ತಂತ್ರಜ್ಞ.
TechnoWise-190 FREEDOM OF CHOICE
You are free to make a choice as your mind wishes!
But never ever think you are free! O TechnoWise!
From the consequences of your choice!