Wednesday, November 15, 2017

ತಂತ್ರಜ್ಞ ತ್ರಿಪದಿಗಳು-189 ಪಶ್ಚಾತ್ತಾಪ- ಆತಂಕ

ತಂತ್ರಜ್ಞ ತ್ರಿಪದಿಗಳು-189 ಪಶ್ಚಾತ್ತಾಪ- ಆತಂಕ
     

ಎಂದು ಪಶ್ಚಾತ್ತಾಪ ನಂದಿಸಿದೆ ಹಿಂದಿನದ?
ಮುಂದಿನದನೆಂದು ಬದಲಿಸಿದೆ ಮನದಾತಂಕ?
ಚಂದದುತ್ತರ "ಇಲ್ಲ"ವೆಂದು ತಂತ್ರಜ್ಞ.
TechnoWise Tripods-189 GUILT - ANXIETY
When has the feeling of guilt changed the past?
And how anxiety can change the future? O TechnoWise!
A neat answer always is "no".
     

Tuesday, November 14, 2017

ತಂತ್ರಜ್ಞ ತ್ರಿಪದಿಗಳು-188 ಹಳೆಯದನು ಬದಲಿಸು

            

ತಂತ್ರಜ್ಞ ತ್ರಿಪದಿಗಳು-188 ಹಳೆಯದನು ಬದಲಿಸು
ಹೆದರದಿರು ಹಳೆಯದನು ಬದಲಾಯಿಸಲು ನೀನು
ಒದಗಿರುವ ಒಂದುತ್ತರದ ಬದಲು ಬರಬಹುದು
ಮುದಕೊಡುವ ಉತ್ತಮೋತ್ತಮವು ತಂತ್ರಜ್ಞ.
TechnoWise-188 CHANGING THE OLD
Do not be afraid of changing the old;
You may lose something good that you have, O Technowise!
But you may gain something better or the best.
        


Monday, November 13, 2017

ತಂತ್ರಜ್ಞ ತ್ರಿಪದಿಗಳು-187 ಬೆಳಕು ಮತ್ತು ದನಿ


ತಂತ್ರಜ್ಞ ತ್ರಿಪದಿಗಳು-187 ಬೆಳಕು ಮತ್ತು ದನಿ
ಮನದ ಸಾವಿರದ ಯೋಚನೆದನಿಯ ಬದಿಗೊತ್ತು!
ತನಿಬೆಳಕು ಕೊಡುವ ಹೃದಯದ ದಾರಿಯಲಿ ಸಾಗು!
ದನಿಗಿಂತ ಬೆಳಕು ಬಹುಶಕ್ತ ತಂತ್ರಜ್ಞ.
TechnoWise Tripods-187 LIGHT AND SOUND
Brushing aside thousands of voices of thoughts,
Just go where the light of your heart leads, O Technowise!
Light is more powerful than voice!


Sunday, November 12, 2017

ತಂತ್ರಜ್ಞ ತ್ರಿಪದಿಗಳು-186 ಬೆಳಗಿಸುವೆ ಎಡಿಸನನಂತೆ


ತಂತ್ರಜ್ಞ ತ್ರಿಪದಿಗಳು-186 ಬೆಳಗಿಸುವೆ ಎಡಿಸನನಂತೆ
ಪರೀಕ್ಷಾಸಮಯದಲ್ಲಿರುವ ಮನದವಧಾನ
ವರುಷವಿಡಿ ಇರಿಸೆ, ಎಡಿಸನನಂತೆ ಬೆಳಗಿಸುವೆ
ಗುರುವಾಗಿ ನಿನ್ನ ಸ್ವಕ್ಷೇತ್ರ ತಂತ್ರಜ್ಞ.
TechnoWise Tripods-186 LIGHT UP LIKE EDISON
During your exams, what terrific focusing you have!
If you sustain it years and life long, you'll illumine, O Technowise!
Like Edison, your own field like a Guru.


Saturday, November 11, 2017

ತಂತ್ರಜ್ಞ ತ್ರಿಪದಿಗಳು-185 ಅಂದ ಸೌಗಂಧ


ತಂತ್ರಜ್ಞ ತ್ರಿಪದಿಗಳು-185 ಅಂದ ಸೌಗಂಧ
ಒಂದು ಗಂಟೆಯೆ ಮಾತ್ರ ಚಂದದೀ ಹೂವರಳಿ
ಮುಂದೆ ಮುಚ್ಚಿದರೇನು? ನಿಮಿಷ ವರುಷ ಅಮುಖ್ಯ!
ಅಂದ ಸೌಗಂಧ ಪ್ರಾಮುಖ್ಯ! ತಂತ್ರಜ್ಞ.
TechnoWise Tripods-185 BEAUTIFUL AND FRAGRANT
What if this flower blooms just for one hour
And then closes its petals? Year or hour isn't salient!
The existence should be beautiful and fragrant.

Friday, November 10, 2017

ತಂತ್ರಜ್ಞ ತ್ರಿಪದಿಗಳು-೧೮೪ ಬಳಸದ ಮೆದುಳು

ತಂತ್ರಜ್ಞ ತ್ರಿಪದಿಗಳು-೧೮೪ ಬಳಸದ ಮೆದುಳು


ಚಿತ್ತ ನಿಲುಗಡೆ ಮೆದುಳುಶಕ್ತಿ ಬಳಕೆಗಳಲ್ಲಿ
ಹತ್ತಕ್ಕು ಕಡಿಮೆ ಪ್ರತಿಶತದಲ್ಲಿ ಗೈಯೆ, ಚೆಲು
ಮುತ್ತು ಕಾಸಿಗೆ ಮಾರಿದಂತೆ! ತಂತ್ರಜ್ಞ.
TechnoWise-184 BRAIN UNUSED
In steadying the mind, and using the brain power
Remaining very low, less than ten percent 
Is like selling a pretty pearl for a paise.

Thursday, November 9, 2017


ತಂತ್ರಜ್ಞ ತ್ರಿಪದಿಗಳು-183 ಹಮ್ಮಿನ ನಿತ್ಯಯುದ್ಧ
ಕೋಳಿ ಕಾಳಗವಲ್ಲ, ಗೂಳಿ ಕಾಳಗವಲ್ಲ;
ಬಾಳಿನೊಳಿತಿಗೆ ಒಳಗೆ ಗೆಲ್ಲುತ್ತ ನೋಡುತಿರು
ಖೂಳ ಹಮ್ಮಿನ ನಿತ್ಯಯುದ್ಧ ತಂತ್ರಜ್ಞ.

TechnoWise-183 EGO-FIGHT
Not cock fight! and not even bull fight!
Wage and win your own fight with the heinous Ego
For your own benefit and others as well.