Wednesday, November 8, 2017

ತಂತ್ರಜ್ಞ ತ್ರಿಪದಿಗಳು-182 ನೀನೆ ಸಾರಥಿಯಾಗು

ತಂತ್ರಜ್ಞ ತ್ರಿಪದಿಗಳು-182 ನೀನೆ ಸಾರಥಿಯಾಗು
ಅವರು ನುಡಿಯಲು ಕೋಪ! ಇವರುನ್ನತಿಗೆ ತಾಪ!
ಅವರಿವರ ಕೈಗೆ ಕೊಡದಿರು ವಾಘೆ! ನೀ ನಿನ್ನ
ಭಾವರಥಕಾಗು ಸಾರಥಿಯು ತಂತ್ರಜ್ಞ.
 TechnoWise-182 BE A CHARIOTEER
They made you angry by their words, and he made you unhappy by his success!Don't give the reins of your sentimental horses to others! O TechnoWise!
You become the charioteer of your own chariot!


Tuesday, November 7, 2017

ತಂತ್ರಜ್ಞ ತ್ರಿಪದಿಗಳು-181 ಆನೆ ಬಂದಿದೆ! ಚಿರತೆ ಬಂದಿದೆ!




ತಂತ್ರಜ್ಞ ತ್ರಿಪದಿಗಳು-181 ಆನೆ ಬಂದಿದೆ! ಚಿರತೆ ಬಂದಿದೆ!
ಅರಸುತ್ತ ಮೈಸೂರು ಪುರದಿ ತಮ್ಮ ಅರಣ್ಯ,
ಚಿರತೆ ಕಾಡಾನೆಗಾಯಿತು ಬೆಳಕೆ ಕತ್ತಲೆಯು!
ಗುರಿ ಮುಂದೆ ಬೆಂಗ್ಳೂರು ದೆಹಲಿ ತಂತ್ರಜ್ಞ.
TechniWise-181 VISITORS ARE ELEPHANTS! AND LEOPARDS!
Searching for their ancestral forests in Mysore,
The leopards and wild elephants, blinded by the palacial lights,
Decided Bangalore and Delhi as destinations next.


Monday, November 6, 2017

ತಂತ್ರಜ್ಞ ತ್ರಿಪದಿಗಳು-180 ಮೊಬೈಲು ಬಂಧನ
ತೋಟ ವಿಹರಿಸುತಿದ್ದ, ಆಟದಲಿ ಪಟುವಿದ್ದ,
ಪಾಠದಲಿ ಮುಂದಿದ್ದ ರವಿಯಿಂದು ಮೋಬೈಲು
ಗೂಟದಲಿ ಆಗಿರುವ ಬಂದಿ! ತಂತ್ರಜ್ಞ.
TechnoWise-180 CAPTIVE IN MOBILE
Walker in parks! and champion in games!
Brilliant in studies, was Ravi in the past! But alas!
Today tied and captive to Mobile peg.





Sunday, November 5, 2017

ತಂತ್ರಜ್ಞ ತ್ರಿಪದಿಗಳು-179 ಅಳಿಲುಸೇವೆಯಲ್ಲ! ಹನುಮಸೇವೆ!

ತಂತ್ರಜ್ಞ ತ್ರಿಪದಿಗಳು-179 ಅಳಿಲುಸೇವೆಯಲ್ಲ! ಹನುಮಸೇವೆ!
ಒಳಗಿರುವ ಮೇರುಬಲ ಬಳಸಿ ಕಡಲನು ಹಾರು;
ಬಲುಭಾರ ಗಿರಿಯೆತ್ತು! ಭಾರತದಿ ಎತ್ತರಿಸು
ಅಳಿಲುಸೇವೆಯ ಹನುಮಸೇವೆ! ತಂತ್ರಜ್ಞ.
TechnoWise-179 NOT SQUIRREL-SERVICE, but HANUMAN-SERVICE
Jump over oceans using inner infinite strength;
Lift mountain-heavy weights, and for our India, treansform
Squirrel-service to the level of Hanuman-service.

Saturday, November 4, 2017

ತಂತ್ರಜ್ಞ ತ್ರಿಪದಿಗಳು-178 ಲಾವಾರಸ-ರೌದ್ರರಸ

ತಂತ್ರಜ್ಞ ತ್ರಿಪದಿಗಳು-178 ಲಾವಾರಸ-ರೌದ್ರರಸ
ದಾವಾಗ್ನಿ ಜ್ವಾಲೆ, ಭಯವೀವ ಸುಂಟರ ಗಾಳಿ,
ಸಾವು ಬದುಕಿನ ವ್ಯಾಘ್ರಬೇಟೆಯಲಿ ಅನುಭವಿಸು
ಲಾವಾರಸದಿ ರೌದ್ರರಸವ ತಂತ್ರಜ್ಞ.
TechnoWise-178  LAVA FLOW-GHASTLY EMOTION
In flames of forest fires, and fearsome tornedoes,
And in fatal tiger fights, and seething lava flows
You feel the ghastly emotional Rasa, O! TechnoWise!


Friday, November 3, 2017

ತಂತ್ರಜ್ಞ ತ್ರಿಪದಿಗಳು-177 ಹರುಷವದೇಕೆ? ಅಳಲೇಕೆ?

ತಂತ್ರಜ್ಞ ತ್ರಿಪದಿಗಳು-177 ಹರುಷವದೇಕೆ? ಅಳಲೇಕೆ?
ಹುಟ್ಟಾಯಿತೆಂದು ಕೈತಟ್ಟಿ ಹರುಷವದೇಕೆ?
ಚಟ್ಟದಲಿ ಮಲಗಿರುವುದನು ಕಂಡು ಅಳಲೇಕೆ?
ಹುಟ್ಟು ಸಾವದು ಪರರಿಗೆಂದೆ? ತಂತ್ರಜ್ಞ!
TechnoWise 177- Why rejoice? Why grieve?
Why is it that we rejoice at birth
And grieve at a funeral?
Is it because we are not the person concerned?
- Mark Twain

Thursday, November 2, 2017

ತಂತ್ರಜ್ಞ ತ್ರಿಪದಿಗಳು-176 ಕುಂಡಕುಬ್ಜತೆ

ತಂತ್ರಜ್ಙ ತ್ತಿಪದಿಗಳು-೧೭೬ಕುಂಡಕುಬ್ಜತೆ
ಎತ್ತರಕೆ ಬೆಳೆಯುತ್ತ ಬಿತ್ತರಿಸಿ ಕೊಂಬೆಗಳ
ಹತ್ತು ಹಕ್ಕಿಗಳೊಡನೆ ಕುಂಡಕುಬ್ಜತೆ ಮೀರಿ
ಮತ್ತಷ್ಟು ಬೆಳೆಯಬಹುದಿತ್ತು ತಂತ್ರಜ್ಙ.
TechnoWise-176 Bonsai 
Growing higher and higher, spreading branches wider and wider
Being the resting place for myriad birds, overcoming the limits of a Bonsai,
There were many possibilities to grow lushly O! TechnoWise!