ತಂತ್ರಜ್ಞ ತ್ರಿಪದಿಗಳು-೬೬೩ ಒಳಬೆಳಕು!
ಅನ್ಯರಿಗು ಕೊಡಬಲ್ಲೆ ನಿನ್ನಲಿರೆ ಖುಶಿ ಶಾಂತಿ!
ಬನ್ನವನೆ ಕೊಡುವೆ ನೀ, ಇರಲು ಚಿಂತೆಯ ಭ್ರಾಂತಿ!
ನಿನ್ನೊಳಗೆ ಹೆಚ್ಚಿಸಿಕೊ ಕಾಂತಿ! ತಂತ್ರಜ್ಞ!
TechnoWise Tripods-663 INNER GLOW!
If you have peace and joy inside, you can give them to others!
But if you are full of worries and delusions, only hardships you'll give to others!
Enhance your inner glow! O! TechnoWise!
ತಂತ್ರಜ್ಞ ತ್ರಿಪದಿಗಳು-೬೬೨ ಭಾರಿ ಭಾರದ ಹಮ್ಮು!
ಹೊರಗೋಡುವುದು ಶಾಂತಿ ಹರುಷ, ಒಳಗಿರೆ ಹಮ್ಮು!
ಹೊರಗಿರಲು ಹಮ್ಮು, ಆಗಮನ ನೆಮ್ಮದಿ ನಲಿವು!
ಭಾರಿ ಗಾತ್ರದ ಭಾರ ಹಮ್ಮು! ತಂತ್ರಜ್ಞ!
TechnoWise Tripods-662 LARGE and HEAVY EGO!
Peace and Happiness run away while the Ego resides inside!
Comfort and Tranquility enter when the Ego remains outside!
Very Large and Heavy is this Ego! O! TechnoWise!
ತಂತ್ರಜ್ಞ ತ್ರಿಪದಿಗಳು-೬೬೧ ಸಮಯ ನಿರ್ವಹಣೆ!
ಅಮುಖ್ಯ ವಿಚಾರಕ್ಕೆ ಸಮಯ ನಿನಗಿದೆ ಬಹಳ!
ಗಮನಾರ್ಹ ಕಾರ್ಯಕ್ಕೆ ಸಮಯ ಸಿಗುವಿದೆ ವಿರಳ!
ಸಮಯನಿರ್ವಹಣೆ ಹಣೆಬರಹ! ತಂತ್ರಜ್ಞ!
TechnoWise Tripods-661 TIME MANAGEMENT!
Plenty of time you have for things unimportant and small!
But for things very important and vital, no time at all!
Time Management is your Destiny! O! TechnoWise!
ತಂತ್ರಜ್ಞ ತ್ರಿಪದಿಗಳು-೬೬೦ ಸುವರ್ಣಾವಕಾಶ!
ಹುಟ್ಟು-ಸಾವಿನ ನಡುವೆ ಪುಟ್ಟ ಎಡೆ ಈ ಕೋಶ!
ಪುಟ್ಟ ಎಡೆಯಲಿ ಅಡಗಿ ದೊಡ್ಡದಿದೆ ಅವಕಾಶ!
ಕೊಟ್ಟು, ಪಡೆ ಪ್ರೀತಿ ಸಂದೇಶ! ತಂತ್ರಜ್ಞ!
TechnoWise Tripods-660 GOLDEN OPPORTUNITY!
In a small gap between birth and death, is this sheath of Life!
But lies hidden in this small gap is a Golden Opportunity!
Give, and Get messages of Love! O! TechnoWise!
ತಂತ್ರಜ್ಞ ತ್ರಿಪದಿಗಳು-೬೫೯ ಜಾಣ! - ಜ್ಞಾನಿ!
ಮಂದ ದೃಷ್ಟಿಯ ಜ್ಞಾನಿ, ಒಂದನ್ನು ಬಿಡಿಸಿ ನೂ
ರೊಂದು ಸಮಸ್ಯೆಯ ತರಲು, ಪೂರ್ಣದೃಷ್ಟಿಯ ಜಾಣ
ಚಂದದಲಿ ಕೊಡುವ ಪರಿಹಾರ! ತಂತ್ರಜ್ಞ!
TechnoWise Tripods-659 WISE! - OTHERWISE!
While solving one problem, a dull-eyed knowledgeable person creates hundreds new!
Whereas a wise-man with holistic view,
Gives a solution most perfect! O! TechnoWise!
ತಂತ್ರಜ್ಞ ತ್ರಿಪದಿಗಳು-೬೫೮ ಬೀಜ-ವೃಕ್ಷ ಆವರ್ತ!
ಬೀಜ ವಿಕಸಿಸೆ ವೃಕ್ಷರಾಜನಾಗಿ ಮಹತ್ವ!
ಬೀಜ ಸಂಕುಚಿತಗೊಂಡಿರುವ ವೃಕ್ಷದ ಸತ್ವ!
ಈ ಜಗವು ಆವರ್ತಮಯವು! ತಂತ್ರಜ್ಞ!
TechnoWise Tripods-658 SEED-TREE CYCLE!
The seed continues to evolve and become the king among trees!
The tree, in return, gives birth to the seed which is its essence!
This world is cyclical! O! TechnoWise!
ತಂತ್ರಜ್ಞ ತ್ರಿಪದಿಗಳು-೬೫೭ ಮನಸ್ಸು - ಪ್ರಜ್ಞೆ
"ಅಲ್ಲಿ", "ಇಲ್ಲಿ"ಗಳೆಂದು ಎಲ್ಲ ಮನಸಿಗೆ ಭಿನ್ನ!
ತಲ್ಲಣದ ಮನಕೀಗ "ನಿನ್ನೆ", "ನಾಳೆ"ಯು ಭಿನ್ನ!
ಎಲ್ಲವೂ ಪ್ರಜ್ಞೆಗೆ "ಇಲ್ಲೀಗ" ತಂತ್ರಜ್ಞ!
TechnoWise Tripods-657 MIND - CONSCIOUSNESS
"There", "Here" are all different for the Mind!
For an anxious Mind "now", "yesterday" and "tomorrow" are all different!
But Consciousness is all about "here-now"! O! TechnoWise!
ತಂತ್ರಜ್ಞ ತ್ರಿಪದಿಗಳು-೬೫೬ ಪರಮಾಣು-ಅನಾವರಣ ನೃತ್ಯ!
ಪರಮಾಣುವಿನ ಅನಾವರಣ ಪ್ರದರ್ಶನದಿ
ಪರಕಣವು ಪ್ರೋಟಾನು ಕ್ವಾರ್ಕು ಎಲೆಕ್ಟ್ರಾನಾಗಿ
ಬರಿಯ ಕ್ವಾಂಟಂ ಶೂನ್ಯ! ಕೊನೆಗೆ! ತಂತ್ರಜ್ಞ!
TechnoWise Tripods-656 STRIPTEASE DANCE OF ATOM!
On the striptease dance of the solid atom, shedding the veils, as it went on...
There appeared Neutrons Protons Electrons Quarks and so on...
Until the last veil- and lo! behold! no actor and nothing, but quantum vacuum! O! TechnoWise
ತಂತ್ರಜ್ಞ ತ್ರಿಪದಿಗಳು-೬೫೫ ಆಲೋಚನೆಗಳು!
ಆಲೋಚನೆಯ ದೀರ್ಘ ಸಾಲು ಬರುತಿರೆ ನರಕ!
ಆಲೋಚನೆಯು ನಿಂತು, ಸಾಲು ಕರಗಲು ನಾಕ!
ಕೈಲಾಸವದು ಶೂನ್ಯ ಮನಸು! ತಂತ್ರಜ್ಞ!
TechnoWise Tripods-655 THOUGHTS!
A veritable Hell when there is a long line of thoughts!
A heaven indeed when the long line of thoughts dissolves!
An empty mind is a divine abode! O! TechnoWise!
ತಂತ್ರಜ್ಞ ತ್ರಿಪದಿಗಳು-೬೫೪ ಒಳಬೆಳಕಿನ ಬೆಲೂನು!
ಬಾನಲೆಲ್ಲಾ ಬೆಳಕು! ಪ್ರಾಣಿಗಳಲೂ ಬೆಳಕು!
ಮನೋಮಯ ಕೋಶಕೇಂದ್ರದಲಿ ಅರಿವಿನ ಬೆಳಕು!
ನೀನು ಒಳಬೆಳಕಿನ ಬೆಲೂನು! ತಂತ್ರಜ್ಞ!
TechnoWise Tripods-654 BALLOON OF INNER LIGHT!
The sky is full of Light! and so also all the living beings!
There is a Light of awareness at the center of the mental sheath!
You are a balloon of inner Light! O! TechnoWise!
ತಂತ್ರಜ್ಞ ತ್ರಿಪದಿಗಳು-೬೫೩ ವಿಜ್ಞಾನ! - ತಂತ್ರಜ್ಞಾನ!
ಹಿಂದಿದ್ದ ವಿಜ್ಞಾನ ಇಂದು ತಂತ್ರಜ್ಞಾನ!
ಮುಂದೆ ಮನುಕುಲದ ಏರಿಳಿತಕದು ಸೋಪಾನ!
ಚಂದನಡೆ ಮೇಲೆ! ಕೆಳಗಲ್ಲ! ತಂತ್ರಜ್ಞ!
TechnoWise Tripods-653 SCIENCE! - TECHNOLOGY
Yesterday's Science is Today's Technology!
And Tomorrow's steps for the mankind to ascend or to descend!
A good move is to step up! and not to step down! O! TechnoWise!
ತಂತ್ರಜ್ಞ ತ್ರಿಪದಿಗಳು-೬೫೧ ನಾಲಗೆ! ಮತ್ತು ಮನಸ್ಸು!
ಮರದಿಂದ ಮರ- ನಿರಂತರ ನೆಗೆವ ಕಪಿಮನವ
ಮೀರಿ ವೇಗದಿ ನಾಲಗೆಯ ಖಡ್ಗ ಬೀಸುವುದ
ಕರೆಯುವರು ಜನ ಕೋಪವೆಂದು! ತಂತ್ರಜ್ಞ!
TechnoWise Tripods-651 TONGUE! and MIND!
If the sword-like tongue moves faster than
The jumping of the monkey-like mind,
They call it Anger! O! TechnoWise!
ತಂತ್ರಜ್ಞ ತ್ರಿಪದಿಗಳು-೬೫೦ ಅಕ್ಷಯಪಾತ್ರೆ!
ವೃಕ್ಷಸಂಕುಲ ಫಲಿತು ಲಕ್ಷ ಬೀಜಗಳಾಗಿ
ಭಕ್ಷ್ಯಭೋಜ್ಯಗಳಾಗಿ ಜೀವಕುಲ ಪೋಷಿಸುವ
ಅಕ್ಷಯದ ಪಾತ್ರೆಯಿದು ಭೂಮಿ! ತಂತ್ರಜ್ಞ!
TechnoWise Tripods-650 CORNUCOPIA!
Thousands of plants and trees bear crops and seeds of innumerable types,
That provide life-supporting food for all varieties of life!
The bowel of earth is a cornucopia, an inexhaustible bowl of dainty! O! TechnoWise!
ತಂತ್ರಜ್ಞ ತ್ರಿಪದಿಗಳು-೬೪೯ ಮನೋಭಕ್ಷಕ ವ್ಯಾಘ್ರ!!!
ನೆನೆದಾಗ ನಡುಗಿಸುತ, ಮಣಿಸಿ ಬಲಭೀಮರನು,
ಜನರು ಜೀವಂತವಿರುವಾಗ ದಹಿಸುತ ತಿನುವ,
ಮನೋಭಕ್ಷಕ ವ್ಯಾಘ್ರ ಚಿಂತೆ!!! ತಂತ್ರಜ್ಞ!
TechnoWise Tripods-649 THE MIND-EATING TIGER!!!
Frightening when remembered, defeating the bodily powerful,
Burning and eating people when they are alive,
A mind-eating tiger is the worry! O! TechnoWise!
ತಂತ್ರಜ್ಞ ತ್ರಿಪದಿಗಳು-೬೪೮ ಸೊನ್ನೆಗಳು ಮತ್ತು ಒಂದು!
ಮುಂದಿರುವ ಸೊನ್ನೆಗಳ ಹೊಂದಿದ್ದು ಏಳೆಂಟು,
ಮಂದಿ ಕರೆಯಲು ನಿನ್ನ ಮಿಲಿಯಾಧಿಪತಿಯೆಂದು,
ಹಿಂದೆ ಬೇಕಿದೆ ಮುಖ್ಯ ಒಂದು! ತಂತ್ರಜ್ಞ!
TechnoWise Tripods-648 ZEROs and ONE!
You already have seven or eight zeros in the front!
But in order to be called by the people as a Millionaire,
You just need one at the back of all the zeros! O! TechnoWise!
ತಂತ್ರಜ್ಞ ತ್ರಿಪದಿಗಳು-೬೪೭ ಹರುಷಪಡು ದಾರಿಯುದ್ದಕ್ಕು!
ಗುರಿ ಸೇರಿದಾಗಲೇ ಹರ್ಷಿಸುವೆನೆನ್ನದಿರು!
ಗುರಿಮಿಲನ ನಿಷ್ಖಚಿತ! ಗುರಿಯಾನ ಬಹು ಖಚಿತ!
ಹರುಷಪಡು ದಾರಿಯುದ್ದಕ್ಕು! ತಂತ್ರಜ್ಞ!y
TechnoWise Tripods-647 BE HAPPY THROUGHOUT!
Don't say you'll be happy only when you reach the goal!
Reaching the goal is uncertain! But journey to the goal is most certain!
So be happy throughout the journey! O! TechnoWise!
ತಂತ್ರಜ್ಞ ತ್ರಿಪದಿಗಳು-೬೪೬ ಯಂತ್ರ! - ಷಡ್ಯಂತ್ರ!
ತಂತ್ರಾಂಶ ಪಥದಲ್ಲೆ ಯಂತ್ರರಥ ಸಾಗುವುದು!
ಮಂತ್ರಗಳ ಮಹತ್ವ, ಕುತಂತ್ರಗಳ ನರನರಿವ!
ಯಂತ್ರಕ್ಕೆ ವಿದೂರ ಷಡ್ಯಂತ್ರ! ತಂತ್ರಜ್ಞ!
TechnoWise Tripods-646 MACHINE - PLOTS
As guided by the software path, the hardware chariot of the machine moves!
Man who knows the nobility mantras, can also indulge in dirty conspiracies!
The machine is devoid of wicked plots! O! TechnoWise!
ತಂತ್ರಜ್ಞ ತ್ರಿಪದಿಗಳು-೬೪೫ ಶಾಸ್ತ್ರ! ಮತ್ತು ಶಸ್ತ್ರ!
ಪುಟ್ಟ ಅಣು, ತಾರೆಗಳ ಗುಟ್ಟನರಸುವ ಶಾಸ್ತ್ರ!
ಕೆಟ್ಟ ವೈರಾಣು ಪರಮಾಣುಗಳ ಶಸ್ತ್ರಾಸ್ತ್ರ!
ಕೆಟ್ಟುದೊಳಿತಿಗು ಮನಸು ಶಕ್ತ! ತಂತ್ರಜ್ಞ!
TechnoWise Tripods-645 SCIENCE! and WEAPONRY!
Science seeks the truth behind micro particles and macro stars!
It will also make life threatening biological and nuclear weapons!
For doing both evil and good, the mind is capable! O! TechnoWise!
ತಂತ್ರಜ್ಞ ತ್ರಿಪದಿಗಳು-೬೪೪ ಮುತ್ತು ಈ ಹೊತ್ತು!
ಸತ್ತ ಕ್ಷಣಗಳ ನೆನೆದು ಹೊತ್ತು ನೀ ಕಳೆಯದಿರು!
ಅತ್ತು ನಾಳೆಯ ನೆನೆದು ಚಿಂತೆಯಲಿ ಬಾಡದಿರು!
ಮುತ್ತು ಈ ಹೊತ್ತಿನ ಇವತ್ತು! ತಂತ್ರಜ್ಞ!
TechnoWise Tripods-644 PRESENT TIME - A PEARLY PRESENT!
Don't waste your precious time engrossed in the dead yesterdays!
Don't be afflicted by the fire of worry thinking about the unborn tomorrows!
A pearly present is the present Time! O! TechnoWise!
ತಂತ್ರಜ್ಞ ತ್ರಿಪದಿಗಳು-೬೪೩ ಕೇಶರಾಶಿಯ ಅಂದ!
ಕೇಶ ಪ್ರತಿಯೊಂದಂದ, ಕೇಶರಾಶಿಯಲಿರಲು!
ಹೇಸಿಕೆಯ ತರಿಸುವುದು ಪಾಯಸದಿ ಬಿದ್ದಿರಲು!
ರಾಶಿಯಲಿ ಒಂದಾಗೆ ಅಂದ! ತಂತ್ರಜ್ಞ!
TechnoWise Tripods-643 BEAUTIFUL HAIR!
Every hair on the head is pretty if it is a part of the braid of hair!
Even if it is a pretty hair, disgusting if found inside the sweet porridge!
It is beautiful only if you blend harmoniously with the Team! O! TechnoWise!
ತಂತ್ರಜ್ಞ ತ್ರಿಪದಿಗಳು-೬೪೨ ಜೀವಂತ ಪರಿಸರ
ಶರಧಿ, ನದಿ ಜೀವಂತ; ಧರಣಿ, ನಭ ಜೀವಂತ;
ಚರಾಚರ ಜೀವಕುಲ ಜೀವಂತ; -ಇರುವುದಕೆ
ಪರಿಸರವು ಬೇಕು ಜೀವಂತ! ತಂತ್ರಜ್ಞ!
TechnoWise Tripods-642 LIVING GAIA ENVIRONMENT
For keeping alive all the seas and the rivers, the earth and the sky
Along with the movable and immovable life forms of million types
Essential is to nurture nature and keep Gaia Environment alive! O! TechnoWise!
ತಂತ್ರಜ್ಞ ತ್ರಿಪದಿಗಳು-೬೪೧ ರಾಮನೇ ಇಲ್ಲದ ಅಯೋಧ್ಯೆ!
ಕ್ಷೇಮವಿಲ್ಲದ ದೇಹ, ಪ್ರೇಮವಿಲ್ಲದ ಸ್ನೇಹ
ನೇಮವಿಲ್ಲದ ಗೈಮೆ, ಮೌಲ್ಯವಿಲ್ಲದ ವಿದ್ಯೆ-
ರಾಮನೇ ಇಲ್ಲದ ಅಯೋಧ್ಯೆ! ತಂತ್ರಜ್ಞ!
TechnoWise Tripods-641 AYODHYA WITHOUT RAMA
A body without health, a friendship without love
And work without rules, and education without Values-
Are like the city Ayodhya without its king Rama! O! TechnoWise!
ತಂತ್ರಜ್ಞ ತ್ರಿಪದಿಗಳು-೬೪೦ ಜ್ವಾಲಾಮುಖಿ!
ನಿದ್ರಿಸಲು ಶಾಂತಮುಖಿ, ಎದ್ದಾಗ ಪ್ರಳಯಶಿಖಿ
ಅದ್ದಿ ಲಾವಾರಸದಿ ಕುದಿವ ಜ್ವಾಲಾಮುಖಿಯು
ಕದ್ದು ಅಡಗಿದೆಯೆ ಮನದೊಳಗೆ? ತಂತ್ರಜ್ಞ!
TechnoWise Tripods-640 VOLCANO!
Peaceful while asleep, but a tongue of fire while awake
The simmering volcano scorches everything with flowing lava!
Is it hiding inside everyone's mind? O! TechnoWise!
ತಂತ್ರಜ್ಞ ತ್ರಿಪದಿಗಳು-೬೩೮ ಮುತ್ತಿನಂತಹ ಹಲ್ಲುಗಳು...
ಹಲ್ಲು ಮುತ್ತಂತೆ ಬಾಯಲ್ಲಿರಲು ಬಲು ಚಂದ!
ಹಲ್ಲು ಕಲ್ಲಿಗು ಕಡೆಯು ಬಿದ್ದಾಗ ಬಾಯಿಂದ!
ಎಲ್ಲಿ ಸಹಜವೊ ಅಲ್ಲೆ ಚಂದ! ತಂತ್ರಜ್ಞ!
TechnoWise Tripods-638 PEARLY TEETH...
While inside the mouth, each tooth is beautiful like a pearl!
If it falls out of the mouth, inferior it is even to a pebble!
The presence of something, in its own natural place, is beautiful ! O! TechnoWise!