Sunday, May 31, 2020

ತಂತ್ರಜ್ಞ ತ್ರಿಪದಿಗಳು-೬೩೭ ಕಣ್ಣೀರ ಮಳೆ!!!


ತಂತ್ರಜ್ಞ ತ್ರಿಪದಿಗಳು-೬೩೭ ಕಣ್ಣೀರ ಮಳೆ!!!
ಆನನವ ಕರಿಹುಬ್ಬ ಬಾನೊಡೆಯ ಗಂಟಿಕ್ಕಿ,
ಕಾಣಿಸುತ ಕಣ್ಮಿಂಚು ಗುಡುಗಿರಲು- ಸುರಿಸಿದಳು
ಬಾನೊಡತಿ ಮಳೆಯ ಕಣ್ಣೀರ! ತಂತ್ರಜ್ಞ!
TechnoWise Tripods-637 TEARS OF RAIN!!!
When the king of the sky frowns contorting the dark face and the eyebrows,
And thunders abuses with thunder-bolt in the eyes,
The queen of the sky sheds incessant tears of rain! O! TechnoWise!




Saturday, May 30, 2020

ತಂತ್ರಜ್ಞ ತ್ರಿಪದಿಗಳು-೬೩೬ ಕಾಡಾನೆ!


ತಂತ್ರಜ್ಞ ತ್ರಿಪದಿಗಳು-೬೩೬ ಕಾಡಾನೆ!
ಕಾಡಾನೆ ಧಾಳಿಯಿಡೆ ಪಾಡೇನು ಪುರಜನರ?
ನೋಡು ಪಳಗಿಸೆ ಅದುವೆ ಸಾಧು ದಸರಾ ಆನೆ!
ಕಾಡಾನೆ ಪರಿ ಮನಸು ನಿನ್ನ! ತಂತ್ರಜ್ಞ!
TechnoWise Tripods-636 WILD  TUSKER!
What is the fate of the people if a wild tusker attacks a township?
But if you tame it diligently, it becomes as mild as a Dasara elephant!
Your mind is a wild tusker! O! TechnoWise!


Thursday, May 28, 2020

ತಂತ್ರಜ್ಞ ತ್ರಿಪದಿಗಳು-೬೩೫ ಬರಲಿ ಮಾತಾದರೂ ಮಧುರ!


ತಂತ್ರಜ್ಞ ತ್ರಿಪದಿಗಳು-೬೩೫ ಬರಲಿ ಮಾತಾದರೂ ಮಧುರ!
ನರಶರೀರಗಳಿಂದ ಹೊರಬರುವ ಸ್ವೇದ ಜಲ
ಸರುವವೂ ಉಚ್ಛಿಷ್ಟವಿರಲು, ನಾಲಗೆಯಿಂದ
ಬರಲಿ ಮಾತಾದರೂ ಮಧುರ! ತಂತ್ರಜ್ಞ!
TechnoWise Tripods-635 AT  LEAST  PLEASANT WORDS!
While all excretions from the human body 
Like sweat and the rest are abhorrent, let at least
The words coming out from the tongue be pleasant! O! TechnoWise!


Wednesday, May 27, 2020

ತಂತ್ರಜ್ಞ ತ್ರಿಪದಿಗಳು-೬೩೪ ಅಹಂ ಬ್ರಹ್ಮಾಸ್ಮಿ!


ತಂತ್ರಜ್ಞ ತ್ರಿಪದಿಗಳು-೬೩೪ ಅಹಂ ಬ್ರಹ್ಮಾಸ್ಮಿ!
ಯಾವುದನು ಧರ್ಮಗಳು "ದೇವ"ರೆಂದೆನ್ನುವುದೊ,
ಯಾವುದನು ಅಧ್ಯಾತ್ಮ "ಪ್ರಜ್ಞೆ"ಯೆಂದೆನ್ನುವುದೊ,
ನಾವು ಕರೆವೆವು ಅದನೆ "ನಾನು"! ತಂತ್ರಜ್ಞ!
TechnoWise Tripod-634 Tat Tvam Asi!
The one which the Religions call as "God",
And that which Spirituality calls as "Consciousness", 
That we call as "I"! O! TechnoWise!


Tuesday, May 26, 2020

ತಂತ್ರಜ್ಞ ತ್ರಿಪದಿಗಳು-೬೩೩ ಒತ್ತಿ ಬ್ರೇಕ್‌!!!


ತಂತ್ರಜ್ಞ ತ್ರಿಪದಿಗಳು-೬೩೩ ಒತ್ತಿ   ಬ್ರೇಕ್‌!!!
ಹತ್ತುವುದೊ ಕಟ್ಟುವುದೊ ಬಿತ್ತುವುದೊ ಕಲಿಯುವುದೊ
ಒತ್ತಡದ ಮನದಿಂದ ಮಾಡುವುದು- ವಾಹನದಿ
ಒತ್ತಿ ಬ್ರೇಕ್‌ ಜಗ ಸುತ್ತುವಂತೆ! ತಂತ್ರಜ್ಞ!
TechnoWise Tripods-633 BREAKS   ON!!!
Whether it is climbing, building, sowing, or learning
Doing it with a stressed mind is like driving a car
Around the world with breaks on! O! TechnoWise!


Monday, May 25, 2020

ತಂತ್ರಜ್ಞ ತ್ರಿಪದಿಗಳು-೬೩೨ ಹಾರುತಿದೆ ಕಾಲ!


ತಂತ್ರಜ್ಞ ತ್ರಿಪದಿಗಳು-೬೩೨ ಹಾರುತಿದೆ ಕಾಲ!
ಹಾರುತಿದೆ ದಿಟ ಕಾಲ! ಹಾರಿದರು ನಿಮಿಷಗಳ
ತೋರಿಸಿಯೆ ಹಾರುತಿದೆ! ಹರುಷ ಪಡೆಯಲು ಕೊಡಲು
ಜಾರಿಹೋಗುವ ಮುನ್ನ ಬಳಸು! ತಂತ್ರಜ್ಞ!
TechnoWise Tripods-632 TIME FLIES FAST!
It is true that time flies really fast, yet while flying,
As it shows the minutes, catch them before they escape
And use them for getting and giving Happiness! O! TechnoWise!


Sunday, May 24, 2020

ತಂತ್ರಜ್ಞ ತ್ರಿಪದಿಗಳು-೬೩೧ ವರ್ತಮಾನವೇ ಬಹುಮಾನ!


ತಂತ್ರಜ್ಞ ತ್ರಿಪದಿಗಳು-೬೩೧ ವರ್ತಮಾನವೇ ಬಹುಮಾನ!
ಪರಿಹಾರ ಭಾಗ ನೀ, ಇರೆ ವರ್ತಮಾನದಲಿ!
ಇರೆ ಭವಿಷ್ಯದಿ ಗತದಿ, ನೀ ಸಮಸ್ಯೆಯ ಭಾಗ!
ವರ್ತಮಾನವೇ ಬಹುಮಾನ! ತಂತ್ರಜ್ಞ!
TechnoWise Tripods-631 THE PRESENT IS A VALUABLE PRESENT!
You become a part of the solution when you are grounded in the Present!
You are a part of the problem if you are in the Future or the Past!
The Present time is really a valuable Present! O! TechnoWise!


Saturday, May 23, 2020

ತಂತ್ರಜ್ಞ ತ್ರಿಪದಿಗಳು-೬೩೦ ಮಾತಾಪಿತರು ಮತ್ತು ಮಕ್ಕಳು!


ತಂತ್ರಜ್ಞ ತ್ರಿಪದಿಗಳು-೬೩೦ ಮಾತಾಪಿತರು ಮತ್ತು ಮಕ್ಕಳು!
ಮಾತೆಪಿತರೇ ಕಣ್ಣು ಜಾತರಿಗೆ ಬಾಲ್ಯದಲಿ!
ಹೆತ್ತವರು ಕಣ್ಮುಚ್ಚಿ ಕುಳಿತಾಗ ಸುತರ ಗತಿ?
ಧೃತರಾಷ್ಟ್ರ ಗಾಂಧಾರಿ ಕತೆಯು! ತಂತ್ರಜ್ಞ!
TechnoWise Tripods-630 PARENTS and CHILDREN!
Parents are the eyes for the children at young age!
If the parents turn a blind eye to whatever the children do,
Result will be the fate of Dhritarastra and Gandhari! O! TechnoWise!



Friday, May 22, 2020

ತಂತ್ರಜ್ಞ ತ್ರಿಪದಿಗಳು-೬೨೯ ಕಳಚಿ ಹಳೆಯ ಪೊರೆ!


ತಂತ್ರಜ್ಞ ತ್ರಿಪದಿಗಳು-೬೨೯ ಕಳಚಿ ಹಳೆಯ ಪೊರೆ!
ಹಾವು ಹಳೆ ಪೊರೆ ಕಳಚಿ, ನವ ಪೊರೆಯ ಪಡೆವಂತೆ
ನೋವುಗಳ ಹಳೆ ಪೊರೆಯ ಕಳಚಿ, ಹೊಸ ಪೊರೆಯೊಡನೆ
ನಾವು ನಡೆಯಲು ಬೇಕು ಮುಂದೆ! ತಂತ್ರಜ್ಞ!
TechnoWise Tripods-629 SHEDDING OLD SKIN
Like a snake shedding old skin and begetting a new one,
Shedding the old skin of all the pains and tribulations,
We should walk ahead for a bright future! O! TechnoWise!



Thursday, May 21, 2020

ತಂತ್ರಜ್ಞ ತ್ರಿಪದಿಗಳು-೬೨೮ ಏಕತೆ! ಮತ್ತು ಅನನ್ಯತೆ!


ತಂತ್ರಜ್ಞ ತ್ರಿಪದಿಗಳು-೬೨೮ ಏಕತೆ! ಮತ್ತು ಅನನ್ಯತೆ!
ಧ್ಯಾನಿಸಲು ಪ್ರಜ್ಞೆಯಲಿ ಕಾಣುವುದು ಏಕತ್ವ!
ಅನನ್ಯತೆ ಅನೇಕತೆ ಮಾನಸಿಕ ಮಟ್ಟದಲಿ!
ಅನನ್ಯ ನಕ್ಷತ್ರ! ನಭವೇಕ! ತಂತ್ರಜ್ಞ!
TechnoWise Tripods-628 ONENESS!  and UNIQUENESS!
When you meditate, you are conscious of the Oneness of all!
And at the level of the mind, you perceive Uniqueness! and Variety! 
All the stars are Unique, but there is Oneness in the sky! O! TechnoWise!




Wednesday, May 20, 2020

ತಂತ್ರಜ್ಞ ತ್ರಿಪದಿಗಳು-೬೨೭ ಅರಿವು ಸಮರಕ್ಕಲ್ಲ- ಸಮರಸಕೆ!


ತಂತ್ರಜ್ಞ ತ್ರಿಪದಿಗಳು-೬೨೭ ಅರಿವು ಸಮರಕ್ಕಲ್ಲ- ಸಮರಸಕೆ!
ದಮನಕಲ್ಲದೆ ಕಷ್ಟ ಶಮನಕಾಗಲಿ ಬಂಧು-
ಅಮಿತ ರೀತಿಯ ತಂತ್ರಜ್ಞಾನ ಶಕ್ತಿಯ ಸಿಂಧು!
ಸಮರಕಲ್ಲರಿವು- ಸಮರಸಕೆ! ತಂತ್ರಜ್ಞ!
TechnoWise Tripods-627 KNOWLEDGE IS FOR HARMONY, not ACRIMONY!
Not for oppression of people, but for suppression of hardships,
That various types of technological power become available!
Knowledge is for harmony and not for acrimony! O! TechnoWise!




Tuesday, May 19, 2020

ತಂತ್ರಜ್ಞ ತ್ರಿಪದಿಗಳು-೬೨೬ ದ್ವಿ-ವಿಷವು ದ್ವೇಷ!


ತಂತ್ರಜ್ಞ ತ್ರಿಪದಿಗಳು-೬೨೬ ದ್ವಿ-ವಿಷವು  ದ್ವೇಷ!
ದ್ವೇಷಕ್ರಿಯೆ ದಿಟದಿ ದ್ವಿ-ವಿಷವು ನಿಸ್ಸಂದೇಹ!
ದ್ವೇಷದಲಿ ಗುರಿಕಾರ ಗುರಿಗಳೆರಡೂ ಧ್ವಂಸ!
ದ್ವೇಷಗಳ ಸಂಕೇತ ನಾಶ! ತಂತ್ರಜ್ಞ!
TechnoWise Tripods-626 HATRED
Hatred really is a twin-poison!
Hatred destroys both the subject and the object!
The symbol of hatred is destruction! O! TechnoWise!



Saturday, May 16, 2020

ತಂತ್ರಜ್ಞ ತ್ರಿಪದಿಗಳು-೬೨೫ ಮೃಗತನವ ಮೀರಿ!


ತಂತ್ರಜ್ಞ ತ್ರಿಪದಿಗಳು-೬೨೫ ಮೃಗತನವ ಮೀರಿ!
ಜಲದಿ ತಿಮಿಯನು, ಗಗನದಲಿ ಗರುಡನನು ಮೀರಿ,
ನೆಲದಿ ವೇಗಾಶ್ವವನು ಮೀರಿರುವ ನರನಿಂದು,
ಕಲಿಯಲಿದೆ ಮೃಗತನವ ಮೀರಿ! ತಂತ್ರಜ್ಞ!
TechnoWise Tripods-625 SURPASSING THE ANIMAL NATURE!
Surpassing the whales in water, and eagles in the sky,
And surpassing the race horses on land, man has to learn
How to surpass his animal nature! O! TechnoWise!

Friday, May 15, 2020

ತಂತ್ರಜ್ಞ ತ್ರಿಪದಿಗಳು-೬೨೪ ಆಶಾವಾದ! - ನಿರಾಶಾವಾದ!


ತಂತ್ರಜ್ಞ ತ್ರಿಪದಿಗಳು-೬೨೪ ಆಶಾವಾದ! - ನಿರಾಶಾವಾದ!
ಆಶಾವಾದಿ ಮನದಲ್ಲಿ ವಿಷವೆಲ್ಲ ಪೀಯೂಷ!
ಔಷಧಿಯ ಫಲ ವಿಫಲ ಇರೆ ನಿರಾಶಾವಾದ!
ವಿಷವು ಪೀಯೂಷವೂ ಮನದಿ! ತಂತ್ರಜ್ಞ!
TechnoWise Tripods-624 OPTIMISM! - PESSIMISM!
All the poisons become nectars in the minds of Optimists!
Whereas even medicines become ineffective in Pessimists!
It is in the mind that all poisons and nectars exist! O! TechnoWise!


Thursday, May 14, 2020

ತಂತ್ರಜ್ಞ ತ್ರಿಪದಿಗಳು-೬೨೩ ನಗುವಿನ ವಿಕಾಸ!




ತಂತ್ರಜ್ಞ ತ್ರಿಪದಿಗಳು-೬೨೩ ನಗುವಿನ ವಿಕಾಸ!
ಮುಗುಳುನಗು- ಗೊಳ್ಳೆಂದು ನಗುವಾಗಿ- ಹೊಟ್ಟೆಯಲಿ
ನಗುವಾಗಿ- ಹರ್ಷಬಾಷ್ಪವದಾಗಿ- ವಿಕಸಿಸಲಿ!
ಮೃಗಕಿರದ ನಗು ನರಗೆ ವರವು! ತಂತ್ರಜ್ಞ!
TechnoWise Tripods-623 EVOLUTION OF SMILE!
Let the sweet smile become a loud laughter!
And let it turn into a belly laughter, and finally tears of happiness!
Laughter is a great boon to mankind which the animals lack! O! TechnoWise!




Wednesday, May 13, 2020

ತಂತ್ರಜ್ಞ ತ್ರಿಪದಿಗಳು-೬೨೨ ಗೃಹ-ಗ್ರಹ .. ಸ್ಥಳೀಯ-ಜಾಗತಿಕ


ತಂತ್ರಜ್ಞ ತ್ರಿಪದಿಗಳು-೬೨೨ ಗೃಹ-ಗ್ರಹ .. ಸ್ಥಳೀಯ-ಜಾಗತಿಕ
ಗ್ರಹದ ಸಚ್ಚಿಂತನೆಯು ಗೃಹಗಳಿಗೆ ಬರುತಿರಲಿ!
ಗೃಹದೆಲ್ಲ ಸತ್ಕಾರ್ಯ ಗ್ರಹದತ್ತ ವ್ಯಾಪಿಸಲಿ!
ಅಹರ್ನಿಶಿ ಇಂತಿರೆ ಸುಭಿಕ್ಷ! ತಂತ್ರಜ್ಞ!
TechnoWise Tripods-622 LOCAL and GLOBAL
When good thoughts reach from the global level to the local,
And good actions spread out from the local level to the global,
Welfare occurs locally and globally! O! TechnoWise!



Tuesday, May 12, 2020

ತಂತ್ರಜ್ಞ ತ್ರಿಪದಿಗಳು-೬೨೧ ಸುಮುಹೂರ್ತ!


ತಂತ್ರಜ್ಞ ತ್ರಿಪದಿಗಳು-೬೨೧ ಸುಮುಹೂರ್ತ!
ಮುಹೂರ್ತ ನೋಡದೆ ಜನನ! ಮುಹೂರ್ತ ನೋಡದೆ ಮರಣ!
ಮುಹೂರ್ತ ನೋಡುವೆ ನಡುವೆ ಕಾರ್ಯ ಪ್ರತಿಯೊಂದಕ್ಕು!
ಮಹಿಯ ಶುಭಕೆಲ್ಲ ಸುಮುಹೂರ್ತ! ತಂತ್ರಜ್ಞ!
TechnoWise Tripods-621 RIGHT TIME!
Birth takes place without waiting for the right time, and also death!
But you are in search of the right time for all works between birth and death!
For all good deeds on earth, all time is the right time! O! TechnoWise!



Monday, May 11, 2020

ತಂತ್ರಜ್ಞ ತ್ರಿಪದಿಗಳು-೬೨೦ ಶುಭದಿನ!


ತಂತ್ರಜ್ಞ ತ್ರಿಪದಿಗಳು-೬೨೦ ಶುಭದಿನ!
ಹೊಣೆಗಾರ ನೀನಿರುವೆ ದಿನದ ಶುಭ ಅಶುಭಕ್ಕೆ!
ದಿನವೆಲ್ಲ ಶುಭಕಾಲ ನೀ ನಿಯಂತ್ರಿಸೆ ದಿನವ!
ದಿನ ನಿಯಂತ್ರಿಸೆ ನಿನ್ನ ಅಶುಭ! ತಂತ್ರಜ್ಞ!
TechnoWise Tripods-620 AUSPICIOUS  DAY!
Responsible you are for for the auspiciousness of the day!
The entire day is auspicious if you control the day!
If the day controls you, it is inauspicious! O! TechnoWise!




Sunday, May 10, 2020

ತಂತ್ರಜ್ಞ ತ್ರಿಪದಿಗಳು-೬೧೯ ಮಾತೆ!


ತಂತ್ರಜ್ಞ ತ್ರಿಪದಿಗಳು-೬೧೯ ಮಾತೆ!
ಸೃಷ್ಟಿಶಕ್ತಿಯ ಮನುಜ ವ್ಯಷ್ಟಿರೂಪವು ಮಾತೆ!
ಸ್ಪಷ್ಟ ಸಾಕಾರ ಅಸ್ಪಷ್ಟ ದೇವರಿಗಾಕೆ!
ಇಷ್ಟದೇವತೆ ಮಾತೆ ಮನೆಗೆ! ತಂತ್ರಜ್ಞ!
TechnoWise Tripods-619 MOTHER!
Mother is the human representation of the creative power of the universe!
She is the explicit embodiment of the formless and vague God!
Mother is the favourite deity of home! O! TechnoWise!


Saturday, May 9, 2020

ತಂತ್ರಜ್ಞ ತ್ರಿಪದಿಗಳು-೬೧೮ ಭೂಮ್ಯೋದಯ: ನೀಲಸೌಂದರ್ಯ!


ತಂತ್ರಜ್ಞ ತ್ರಿಪದಿಗಳು-೬೧೮ ಭೂಮ್ಯೋದಯ: ನೀಲಸೌಂದರ್ಯ!
ಕಾಮ್ಯ ಚಂದ್ರೋದಯವು! ರಮ್ಯ ಸೂರ್ಯೋದಯವು!
ಸೋಮರವಿಗಳ ರಜತ ಸ್ವರ್ಣವರ್ಣಕು ಮಿಗಿಲು
ಭೂಮಿತಾಯಿಯ ನೀಲವರ್ಣ! ತಂತ್ರಜ್ಞ!
TechnoWise Tripods-618 BLUISH-BEAUTY of EARTH-RISE!
Alluring and romantic is moon-rise! Delightful and desirable is sun-rise!
More than the silver colour of the moon, and the golden colour of the sun
Is the beautiful bluish colour of mother earth! O! TechnoWise!



Friday, May 8, 2020

ತಂತ್ರಜ್ಞ ತ್ರಿಪದಿಗಳು-೬೧೭ ಭಗವಾನ್ ಬುದ್ಧ!


ತಂತ್ರಜ್ಞ ತ್ರಿಪದಿಗಳು-೬೧೭ ಭಗವಾನ್  ಬುದ್ಧ!
ಅರಿವಿನರಿವನು, ದುಃಖ ಪರಿಹರಿಸೆ ಮಾರ್ಗವನು
ವರ ವಿಪಶ್ಯನ ಧ್ಯಾನವನು, ಜೀವಪ್ರೀತಿಯನು
ಕರುಣೆ ಹರಡಿದ ಮಹಿಮ ಬುದ್ಧ! ತಂತ್ರಜ್ಞ!
TechnoWise Tripods-617 BHAGAVAN BUDHA!
Budha was an icon of Compassion and Love for all living beings!
He was the giver of the eight-fold path for the removal of sorrow!
And a great teacher of Awareness and Vipashyana meditation! O! TechnoWise!


Thursday, May 7, 2020

ತಂತ್ರಜ್ಞ ತ್ರಿಪದಿಗಳು-೬೧೬ ಪರಮಾಣು - ವೈರಾಣು!


ತಂತ್ರಜ್ಞ ತ್ರಿಪದಿಗಳು-೬೧೬ ಪರಮಾಣು - ವೈರಾಣು!
ಪರಮಾಣು ಸಿಡಿದಾಗ ಹೊರಗೆ ದೇಶವೆ ಭಗ್ನ!
ವೈರಾಣು ಬಡಿದಾಗ ಒಳಗೆ ದೇಹಕೆ ವಿಘ್ನ!
ಕಿರು ಅಣುವಿನಲು ಮಹತ್‌ ಶಕ್ತಿ! ತಂತ್ರಜ್ಞ!
TechnoWise Tripods-616 ATOM - VIRUS
When an atomic bomb is exploded, the outside world tumbles down!
When the Virus enters inside, the entire body trembles with pain!
Even a Micro has Macro Powers! O! TechnoWise!



Wednesday, May 6, 2020

ತಂತ್ರಜ್ಞ ತ್ರಿಪದಿಗಳು-೬೧೫ ಸತ್ಯಂ ಶಿವಂ ಸುಂದರಂ


ತಂತ್ರಜ್ಞ ತ್ರಿಪದಿಗಳು-೬೧೫ ಸತ್ಯಂ ಶಿವಂ ಸುಂದರಂ
ವಿಜ್ಞಾನಿ ಸತ್ಯವನು, ಪ್ರಜ್ಞಾನಿ ಶಿವನನ್ನು
ತಜ್ಞ ಕಲೆಗಾರ ಸೌಂದರ್ಯವನ್ನರಸುವರು!
ಪ್ರಜ್ಞೆ ಮೂರರ ಆದಿಮೂಲ! ತಂತ್ರಜ್ಞ!
TechnoWise Tripods-615 TRUTH GOD BEAUTY
A scientist searches for Truth of the universe, and a sage for God and Goodness
An expert artist searches for Beauty!
It's the Consciousness which is at the root of all the Three! O! TechnoWise!




Tuesday, May 5, 2020

ತಂತ್ರಜ್ಞ ತ್ರಿಪದಿಗಳು-೬೧೪ ಕೊನೆಯ ಕ್ಷಣಗಳ ಮೌಲ್ಯ!


ತಂತ್ರಜ್ಞ ತ್ರಿಪದಿಗಳು-೬೧೪ ಕೊನೆಯ ಕ್ಷಣಗಳ ಮೌಲ್ಯ!
ಕ್ಷಣಕ್ಷಣವಮೂಲ್ಯ ಸಾಧನೆಯೆಲ್ಲ ಹಂತದಲು!
ಕೊನೆಗೆಲ್ಲ ಬಣ್ಣವನು ಮಸಿ ನುಂಗಿದಂತೆ ಸ್ಥಿತಿ,
ಕೊನೆಯ ಕ್ಷಣ ತರಲು ಅಪಮೌಲ್ಯ! ತಂತ್ರಜ್ಞ!
TechnoWise Tripods-614 VALUE OF THE LAST MOMENTS!
Although the value of each moment in any endeavor of life is enormous,
Yet, if the last moment of the endeavor is devalued, then it is like
The final black paint covering all the pretty colours of the picture! O! TechnoWise!


Monday, May 4, 2020

ತಂತ್ರಜ್ಞ ತ್ರಿಪದಿಗಳು-೬೧೩ ಕೋವಿಡ್‌-೧೯ ದೆವ್ವ - ದೇವರು!


ತಂತ್ರಜ್ಞ ತ್ರಿಪದಿಗಳು-೬೧೩ ಕೋವಿಡ್‌-೧೯ ದೆವ್ವ - ದೇವರು!ದೆವ್ವವೆಂದಿತು ʼನಾನು ಕೋವಿಡಾಸ್ತ್ರವ ಬಳಸಿ
ಸರ್ವ ಗುಡಿ ಮುಚ್ಚಿಸಿದೆ!ʼ  ದೇವನೆಂದನು "ತೆರೆದೆ
ಬುವಿಯ ಮನೆಮನಗಳಲಿ ಗುಡಿಯ!" ತಂತ್ರಜ್ಞ!
TechnoWise Tripods-19 DEVIL & GOD!
When the Devil said that by wielding the weapon of COVID in the world,
He could shut down all places of worship, God smilingly said that he opened in the world,
Places of worship in every Home and Heart! O! TechnoWise!

Sunday, May 3, 2020

ತಂತ್ರಜ್ಞ ತ್ರಿಪದಿಗಳು-೬೧೨ ಮಾಯಾಜಾಲ!


ತಂತ್ರಜ್ಞ ತ್ರಿಪದಿಗಳು-೬೧೨ ಮಾಯಾಜಾಲ!
ಹಾವು ತಿಳಿಯುವ ವಿಶ್ವ, ನಾವು ಅರಿಯುವ ವಿಶ್ವ,
ಬಾವಲಿಯು ಕೇಳಿ ತಿಳಿಯುವ ವಿಶ್ವಗಳು ಭಿನ್ನ!
ಜೀವಿಗಳಿಗೀ ವಿಶ್ವ ಮಾಯೆ! ತಂತ್ರಜ್ಞ!
TechnoWise Tripods-612 WEB OF  QUALIA!
The world that a snake experiences and what we experience,
And what a bat hears and experiences are all very different!
For the living beings, this world is a mesh of Qualia! O! TechnoWise!