ಬದುಕಿಗೆ ಸಂಬಂಧಿಸಿದ ಒಂದು ವಿಶೇಷ ಘಟನೆ(ಕಿರುಗತೆ), ಅದು ಬೀರುವ ಬೆಳಕು, ಇವುಗಳಿಗೆ ಸಂಬಂಧಿಸಿದ ಒಂದು ತಂತ್ರಜ್ಞ ತ್ರಿಪದಿ(ಚುಟುಕು) ಇವು ಇಲ್ಲಿ ಪ್ರತಿ ವಾರವೂ ಮೂಡಿಬರುತ್ತವೆ. ಇವು ಅಂಕಣ(ಕಿರುಲೇಖನ)ಗಳಾಗಿ ಕಸ್ತೂರಿ, ಮಂಜುವಾಣಿ, ಕನ್ನಡ ಟೈಮ್ಸ್, ವಿವೇಕಪ್ರಭಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ/ಆಗುತ್ತಿವೆ.
"ಅಚ್ಚಗನ್ನಡದ ನುಡಿವಣಿ" ಪುಟವು ಅಚ್ಚಗನ್ನಡದಲ್ಲೇ ೩ ಕೃತಿಗಳನ್ನು (ಅಚ್ಚಗನ್ನಡ ನುಡಿಕೋಶ, ಕಾಲೂರ ಚೆಲುವೆ, ನುಡಿವಣಿಗಳು) ಬರೆದ ನಮ್ಮ ತಂದೆ ಕೊಳಂಬೆ ಪುಟ್ಟಣ್ಣಗೌಡರ "ನುಡಿವಣಿಗಳು" ಪುಸ್ತಕದಿಂದ ಆಯ್ದವು.
ಓದಲು ದಯವಿಟ್ಟು ಕ್ಲಿಕ್ ಮಾಡಿ: ಸಂಪುಟ-೧ / ಸಂಪುಟ-೨ / ಅಚ್ಚಗನ್ನಡದ ನುಡಿವಣಿ
ತಂತ್ರಜ್ಞ ತ್ರಿಪದಿಗಳು-೫೩೨ ನಭದಿ ಸ್ವರ್ಗ? ನಾಕವಿದು ದಿಟದಿ ಈ ಲೋಕವೆಂಬುದ ಮರೆತು ಶೋಕಮಯ ನರಕವನು ಇಲ್ಲೆ ಸೃಷ್ಟಿಸಿ ನರನು ಏಕೆ ಹುಡುಕುವ ನಭದಿ ಸ್ವರ್ಗ? ತಂತ್ರಜ್ಞ. TechnoWise Tripods-532 HEAVEN IN THE SKY? Forgetting that this world is really a heaven, And creating a veritable hell in this world, Why do people search for heaven in the sky? O! TechnoWise!
ತಂತ್ರಜ್ಞ ತ್ರಿಪದಿಗಳು-೫೩೦ ಅಧ್ಯಾತ್ಮ- ಅಜ್ಞತೆಯು ಹೆಚ್ಚುಹೆಚ್ಚಲ್ಲಿ ಅಜ್ಞ ಅಜ್ಞನೆ ಆಗೆ ನಿಜದಿ ಹೆಚ್ಚೆಚ್ಚಲ್ಲಿ, ಅಜ್ಞತೆಯು ಕೊನೆಗೆ ಪ್ರತಿಯೊಂದರಲ್ಲಾಗುವುದೆ ಪ್ರಜ್ಞಾನುಭವದ ಅಧ್ಯಾತ್ಮ! ತಂತ್ರಜ್ಞ! TechnoWise Tripods-531 SPIRITUALITY- Knowing Less and Less Knowing less and less about more and more And finally knowing nothing about everything, Is the spirituality, the the experience of Consciousness! O! TechnoWise! ತಂತ್ರಜ್ಞ ತ್ರಿಪದಿಗಳು-೫೩೦ ಅಧ್ಯಾತ್ಮ- ಅಜ್ಞತೆಯು ಹೆಚ್ಚುಹೆಚ್ಚಲ್ಲಿ ಅಜ್ಞ ಅಜ್ಞನೆ ಆಗೆ ನಿಜದಿ ಹೆಚ್ಚೆಚ್ಚಲ್ಲಿ, ಅಜ್ಞತೆಯು ಕೊನೆಗೆ ಪ್ರತಿಯೊಂದರಲ್ಲಾಗುವುದೆ ಪ್ರಜ್ಞಾನುಭವದ ಅಧ್ಯಾತ್ಮ! ತಂತ್ರಜ್ಞ! TechnoWise Tripods-531 SPIRITUALITY- Knowing Less and Less Knowing less and less about more and more And finally knowing nothing about everything, Is the spirituality, the the experience of Consciousness! O! TechnoWise!
ತಂತ್ರಜ್ಞ ತ್ರಿಪದಿಗಳು-೫೩೦ ಅರಿವು- ಹೆಚ್ಚು ಇನ್ನೂ ಹೆಚ್ಚು ನುಚ್ಚು ನುಚ್ಚಿಸಿ ಅಣುವ, ಹೆಚ್ಚು ಇನ್ನೂ ಹೆಚ್ಚು ಅಚ್ಚರಿಯಲರಿಯೆ ಬ್ರಹ್ಮಾಂಡವನು ಶೂನ್ಯದಲಿ ಮೆಚ್ಚುಗೆಯ ಪಥವೆ ವಿಜ್ಞಾನ! ತಂತ್ರಜ್ಞ! TechnoWise Tripods-530 KNOWING MORE AND MORE Knowing more and more about less and less, And finally knowing everything about nothing Is the path of celebrated Science! O! TechnoWise!
ತಂತ್ರಜ್ಞ ತ್ರಿಪದಿಗಳು-೫೨೯ ಖಾಲಿ ಮನಸ್ಸು! ನಮ್ಮ ಖಾಲಿ ಮನಸ್ಸು ಕಮ್ಮಟವೆ ದೆವ್ವಕ್ಕೆ? ಸುಮ್ಮನೇ ಹೇಳುವರು ಧ್ಯಾನದಜ್ಞಾನಿಗಳು! ನೆಮ್ಮದಿಯ ಅದು ಬುದ್ಧಧಾಮ! ತಂತ್ರಜ್ಞ! TechnoWise Tripods-529 AN EMPTY MIND! Is an empty mind a devil's workshop? This's an empty talk of those unaware of meditation! It's a haven of peaceful Budha! O! TechnoWise!
ತಂತ್ರಜ್ಞ ತ್ರಿಪದಿಗಳು-528 ಸುಗ್ಗಿಯಲು ಕುಗ್ಗಿರುವೆಯೇಕೆ? ಸುಗ್ಗಿ ಬಂದಿದೆ ಮರಳಿ! ಮೊಗ್ಗು ನಗುತಿದೆ ಅರಳಿ! ಹಿಗ್ಗಿ ತಿರೆ ಸಂಭ್ರಮಿಸಿ ಹಬ್ಬವಾಚರಿಸುತಿರೆ, ಸುಗ್ಗಿಯಲು ಕುಗ್ಗಿರುವೆಯೇಕೆ? ತಂತ್ರಜ್ಞ! TechnoWise Tripods-528 LANGUISHING IN SPRINGTIME? Spring has arrived again! and the buds have blossomed and smiling! While the entire earth is jubilating in a festival mood, Why are you languishing even in Springtime? O! TechnoWise!
ತಂತ್ರಜ್ಞ ತ್ರಿಪದಿಗಳು-೫೨೭ ಭಾರ-ಜಾಣ್ಮೆ ಭಾರವೀ ಬಾಳಿನಲಿ ಯಾರಿಗಿಲ್ಲವು? ಹೇಳು! ಭಾರ ನಿರ್ವಹಣೆಯಲಿ ಜಾಣ್ಮೆ ನಿನಗಿರುವಾಗ ಗುರುಸಮಸ್ಯೆಯೆ ಅಲ್ಲ, ಭಾರ! ತಂತ್ರಜ್ಞ. TechnoWise Tripods-527 BURDEN-INGENUITY Who will not have budens in life? If you have the ingenuity how to manage them, Burdens aren't problems at all! O! TechnoWise!