ಬದುಕಿಗೆ ಸಂಬಂಧಿಸಿದ ಒಂದು ವಿಶೇಷ ಘಟನೆ(ಕಿರುಗತೆ), ಅದು ಬೀರುವ ಬೆಳಕು, ಇವುಗಳಿಗೆ ಸಂಬಂಧಿಸಿದ ಒಂದು ತಂತ್ರಜ್ಞ ತ್ರಿಪದಿ(ಚುಟುಕು) ಇವು ಇಲ್ಲಿ ಪ್ರತಿ ವಾರವೂ ಮೂಡಿಬರುತ್ತವೆ. ಇವು ಅಂಕಣ(ಕಿರುಲೇಖನ)ಗಳಾಗಿ ಕಸ್ತೂರಿ, ಮಂಜುವಾಣಿ, ಕನ್ನಡ ಟೈಮ್ಸ್, ವಿವೇಕಪ್ರಭಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ/ಆಗುತ್ತಿವೆ.
"ಅಚ್ಚಗನ್ನಡದ ನುಡಿವಣಿ" ಪುಟವು ಅಚ್ಚಗನ್ನಡದಲ್ಲೇ ೩ ಕೃತಿಗಳನ್ನು (ಅಚ್ಚಗನ್ನಡ ನುಡಿಕೋಶ, ಕಾಲೂರ ಚೆಲುವೆ, ನುಡಿವಣಿಗಳು) ಬರೆದ ನಮ್ಮ ತಂದೆ ಕೊಳಂಬೆ ಪುಟ್ಟಣ್ಣಗೌಡರ "ನುಡಿವಣಿಗಳು" ಪುಸ್ತಕದಿಂದ ಆಯ್ದವು.
ಓದಲು ದಯವಿಟ್ಟು ಕ್ಲಿಕ್ ಮಾಡಿ: ಸಂಪುಟ-೧ / ಸಂಪುಟ-೨ / ಅಚ್ಚಗನ್ನಡದ ನುಡಿವಣಿ
ತಂತ್ರಜ್ಞ ತ್ರಿಪದಿಗಳು-೫೨೬ ಕಲಿಕಾ ಸೇತು ಅರಿತಿರದವನು ಪ್ರಾಜ್ಞ, ನುರಿತಿರದವನು ತಜ್ಞ, ಕಿರುಶಿಷ್ಯ ವಿಶ್ವಗುರುವಾದ ಅದ್ಭುತ ಸಾಧ್ಯ ವರ ಕಲಿಕೆಸೇತುವನು ದಾಟೆ! ತಂತ್ರಜ್ಞ! TechnoWise Tripods-526 BRIDGE OF LEARNING The miracle of an ignorant becoming a Pundit, a novice becoming an Expert, A meek student becoming a world-Guru are all possible, When they cross the magical bridge of learning! O! TechnoWise!
ತಂತ್ರಜ್ಞ ತ್ರಿಪದಿಗಳು-೫೨೫ ಪರಿಸರವೆ ಪುರುಷಾರ್ಥ! ಧರ್ಮ ರಕ್ಷಿಸುವವನ ಧರ್ಮ ರಕ್ಷಿಸುವಂತೆ, ಪರಿಸರವ ಕಾಯುವರ, ಕಾಯುವುದು ಪರಿಸರವು! ಪರಿಸರವೆ ಪರಮ ಪುರುಷಾರ್ಥ! ತಂತ್ರಜ್ಞ! TechnoWise Tripods-525 ENVIRONMENT- VALUE SUPREME! As Dharma protects those who protect Dharma, Environment also protects those who protect Environment! Environment is your Value Supreme! O! TechnoWise!
ತಂತ್ರಜ್ಞ ತ್ರಿಪದಿಗಳು-೫೨೪ ಮನದ ಮಾಯೆ! ಕೋಗಿಲೆಯ ದನಿಯಿಂಪೆ? ಕಾಗೆ ಬಣ್ಣವು ಕಪ್ಪೆ? ಹಾಗಲಕೆ ಕಹಿರುಚಿಯೆ? ಹೂಗಳಿಗೆ ಕಂಪಿದೆಯೆ? ಹಾಗೆ ತೋರಿಕೆ ಮನದ ಮಾಯೆ! ತಂತ್ರಜ್ಞ! TechnoWise Tripods-524 QUALIA OF THE MIND Is cuckoo's note melodious and crow's colour black? Is the taste of bitter-gourd really bitter and flowers have fragrance? Everything is an illusion, a qualia of the mind! O! TechnoWise!