ಬದುಕಿಗೆ ಸಂಬಂಧಿಸಿದ ಒಂದು ವಿಶೇಷ ಘಟನೆ(ಕಿರುಗತೆ), ಅದು ಬೀರುವ ಬೆಳಕು, ಇವುಗಳಿಗೆ ಸಂಬಂಧಿಸಿದ ಒಂದು ತಂತ್ರಜ್ಞ ತ್ರಿಪದಿ(ಚುಟುಕು) ಇವು ಇಲ್ಲಿ ಪ್ರತಿ ವಾರವೂ ಮೂಡಿಬರುತ್ತವೆ. ಇವು ಅಂಕಣ(ಕಿರುಲೇಖನ)ಗಳಾಗಿ ಕಸ್ತೂರಿ, ಮಂಜುವಾಣಿ, ಕನ್ನಡ ಟೈಮ್ಸ್, ವಿವೇಕಪ್ರಭಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ/ಆಗುತ್ತಿವೆ.
"ಅಚ್ಚಗನ್ನಡದ ನುಡಿವಣಿ" ಪುಟವು ಅಚ್ಚಗನ್ನಡದಲ್ಲೇ ೩ ಕೃತಿಗಳನ್ನು (ಅಚ್ಚಗನ್ನಡ ನುಡಿಕೋಶ, ಕಾಲೂರ ಚೆಲುವೆ, ನುಡಿವಣಿಗಳು) ಬರೆದ ನಮ್ಮ ತಂದೆ ಕೊಳಂಬೆ ಪುಟ್ಟಣ್ಣಗೌಡರ "ನುಡಿವಣಿಗಳು" ಪುಸ್ತಕದಿಂದ ಆಯ್ದವು.
ಓದಲು ದಯವಿಟ್ಟು ಕ್ಲಿಕ್ ಮಾಡಿ: ಸಂಪುಟ-೧ / ಸಂಪುಟ-೨ / ಅಚ್ಚಗನ್ನಡದ ನುಡಿವಣಿ
ತಂತ್ರಜ್ಞ ತ್ರಿಪದಿಗಳು-೪೯೩ ದುಃಖ ಮಕ್ಕಳನು ಹಿರಿಯರನು ಪಕ್ಕದಲ್ಲಿರುವರನು ಮಿಕ್ಕವರನೆಲ್ಲ ದೂರುವೆ ಚಿಂತೆ ಖೇದಕ್ಕೆ! ದುಃಖ ಹೊರಗಲ್ಲ, ಒಳಗಿಂದ! ತಂತ್ರಜ್ಞ. TechnoWise Tripods-493 MISERY The cause of your worries and blues You say are your children, elders, and all others! But the source of misery is not outside, but inside! O! TechnoWise.
ತಂತ್ರಜ್ಞ ತ್ರಿಪದಿಗಳು-೪೯೨ ನಿರ್ಧಾರಗಳು ಸಹಜ ಮನದಲಿ ಮಾಡು ಬಹು ಸಣ್ಣ ನಿರ್ಧಾರ! ಕಹಿಮದ್ದು ಪರಿಯ ನಿರ್ಧಾರ ಮತಿ ಬೆಳಕಿನಲಿ! ಸಿಹಿ ಕೊಡಲು ಮೀಟು ಎದೆ ವೀಣೆ! ತಂತ್ರಜ್ಞ! TechnoWise Tripods-492 DECISIONS Let small decisions take place at the level of the mind! Bitter medicine like decisions in the light of the intellect! For sweetening the life of the society, play on the Veena of the heart! O! TechnoWise!
ತಂತ್ರಜ್ಞ ತ್ರಿಪದಿಗಳು-೪೯೧ ಚಂದದಿಂದಿರು! ಇಂದಿನೀ ಕ್ಷಣ ಇರುವ, ಮುಂದೆ ಕ್ಷಣಭಂಗುರದ ಬಂದು ಹೋಗುವ ಬತ್ತಲೆಯ ಬಾಳಿನಲಿ ನೀನು ಚಂದದಿಂದಿರು! ಪರರನಿರಿಸು! ತಂತ್ರಜ್ಞ. TechnoWise Tripods-491 BE BEAUTIFUL! This life to which we come naked and depart naked, Exists at this very moment, and may cease to exist the very next moment! So stay beautiful and let others stay beautiful! O! TechnoWise!
ತಂತ್ರಜ್ಞ ತ್ರಿಪದಿಗಳು-೪೯೦ ಬೆಳಕಿಂಡಿ ಕಂಡುದನು ನಿನ್ನಲ್ಲಿ ಕಂಡಂತೆ ಹೇಳಿದರೆ, ಕೆಂಡದಂತಹ ಕೋಪ ಬರಿದಂಡ! ದಿಟದಿ ಬೆಳ ಕಿಂಡಿಯದು ಆತ್ಮಶೋಧನೆಗೆ! ತಂತ್ರಜ್ಞ. TechnoWise Tripods-490 VENTILATOR OF LIGHT It is of no use getting fiery-eyed and angry When someone finds faults with you and criticises! It is a ventilator of light for Self-examination! O! TechnoWise!
ತಂತ್ರಜ್ಞ ತ್ರಿಪದಿಗಳು-೪೮೯ ತಾಯಿ ಛಲದಿ ಕತ್ತರಿಸಿ ಹಲ್ಲಲಿ ಸೀರೆ ಹಾಸಿಗೆಯ ಒಲವಿಂದ ಗೂಡು ಮಾಡಿದೆ ಮುದ್ದು ಮಕ್ಕಳಿಗೆ! ಇಲಿಯೆ ಅದು? ಅಲ್ಲ, ಅದು ತಾಯಿ! ತಂತ್ರಜ್ಞ. TechnoWise Tripods-489 MOTHER Cutting and ripping open clothes and beds with sharp teeth persistently, She has made the softest and nicest nest for her darling younglings! Is she a mouse? No, she is a mother! O! TechnoWise!
ತಂತ್ರಜ್ಞ ತ್ರಿಪದಿಗಳು-೪೮೮ ಕಲಿ! ಕಲಿಕಾಲದಲಿ! ಹುಲಿಯೆ? ಹೆಬ್ಬುಲಿಯಾಗು! ಇಲಿಯೆ? ರಥ ಗಣಪನಿಗೆ! ಬಲಿಯೆ? ನೀನಾಗು ವಾಗ್ದಾನಿ ಬಲು ಎಚ್ಚರದಿ! ಕಲಿಯೆ? ಕಲಿಕಾಲದಲಿ ಕಲಿತು! ತಂತ್ರಜ್ಞ. TechnoWise Tripods-488 HERO IN THIS ERA! A tiger? Be a huge white tiger! A mouse? Be the mount of God Ganesha! Emperor Bali? Be a careful giver of promises! A Hero? Be a learner to learn in this Era! O! TechnoWise!