ತಂತ್ರಜ್ಞ ತ್ರಿಪದಿಗಳು-೪೮೭ ಹೊಣೆಯ ಮೂರ್ತಿ
ಆನೆ, ದಸರೋತ್ಸವದ ಆನೆಯಂತಿರದೆ, ಮದ
ದಾನೆಯಂತಾಗಿ ಜನಜಾತ್ರೆ ನಡು ನುಗ್ಗದಿರು!
ನೀನು ಹೊರುವುದು ಹೊಣೆಯ ಮೂರ್ತಿ! ತಂತ್ರಜ್ಞ.
TechnoWise Tripods-487 IDOL OF RESPONSIBILITY
Instead of being a royal elephant of Dasara festival,
Don't become a rogue elephant and trample the humans!
What you're carrying is an exquisite idol of responsibility! O! TechnoWise!
ತಂತ್ರಜ್ಞ ತ್ರಿಪದಿಗಳು-೪೮೬ ಜ್ಞಾನಿ - ಸತ್ಪ್ರಜೆ
ಆನೆದಂತದ ಮನೆಯ ಜ್ಞಾನಿಗಿಂತಲು ಮೊದಲು
ಏನು? ಹೇಗೆಂದು? ಪ್ರಶ್ನಿಸುವ ಸಂವೇದನೆಯ
ಮಾನವೀಯತೆಯ ಪ್ರಜೆ ಮುಖ್ಯ! ತಂತ್ರಜ್ಞ.
TechnoWise Tripods-486 PUNDITS - CITIZENS
More than the Pundits living in their ivory towers,
The country requires sensitive and humane citizens,
Asking questions of What? How? and When? O! TechnoWise!
ತಂತ್ರಜ್ಞ ತ್ರಿಪದಿಗಳು-೪೮೫ ಜ್ಞಾಪಕ... ಕಲ್ಪನೆ
ಜ್ಞಾಪಕವು ಹಳೆಬೇರು! ಕಲ್ಪನೆಯು ಹೊಸಚಿಗುರು!
ಜ್ಞಾಪಿಸುತ... ಕಲ್ಪಿಸುತ... ತಾಪಚಿಂತೆಗಳೇಕೆ?
ಶಾಪವಾಗಿಸಬೇಡ... ವರವ! ತಂತ್ರಜ್ಞ.
TechnoWise Tripods-485 MEMORY... IMAGINATION
Memories are like old roots! and Imaginations like new leaves!
Why become remorseful and worried using Memory and Imagination?
Don't transform boons into curses! O! TechnoWise!
ತಂತ್ರಜ್ಞ ತ್ರಿಪದಿಗಳು-484 ಎದೆಯಾಳದಲಿ ಜ್ಯೋತಿ
ನಡು ಅಡವಿಯಲಿ ಗಂಧ! ಕಡಲಾಳದಲಿ ಮುತ್ತು!
ಪೊಡವಿಯಾಳದಿ ವಜ್ರ! ಇದೆಲ್ಲದಕು ಮಿಗಿಲು
ಒಡಲ ಎದೆಯಾಳದಲಿ ಜ್ಯೋತಿ! ತಂತ್ರಜ್ಞ.
TechnoWise Tripods-484 LIGHT IN THE HEART
Sandal wood in the middle of the forest! Pearls inside deep ocean!
Dimonds deep down in the earth! More than all these is:
The Light in the heart! O! TechnoWise!
ತಂತ್ರಜ್ಞ ತ್ರಿಪದಿಗಳು-೪೮೩ ಅನುಕೂಲೆ ವಧು!
ಅನುಕೂಲೆ ವಧುವ ಜೀವನದಿ ಬಯಸುವೆಯೇನು?
ಅನುಕೂಲ ವರನು ನೀನಾದಾಗ, ಆಗುವಳು-
ಅನುಕೂಲೆ ನೀ ವರಿಸಿದವಳು! ತಂತ್ರಜ್ಞ.
TechnoWise Tripods-483 RIGHT BRIDE!
Do you desire to find the right bride to marry?
When you yourself become the right groom-
Whomever you marry, becomes the right bride! O! TechnoWise!
ತಂತ್ರಜ್ಞ ತ್ರಿಪದಿಗಳು-೪೮೨ ಪರೀಕ್ಷೆಯಲಿ ನಕಲು
ಶಾಲಾಪರೀಕ್ಷೆಗಳ ವೇಳೆ ಮಾಡಿದ ನಕಲು
ನಾಳೆ ಬಾಳಿನಲಿ ಮಾಡುವೆಯೇನು? ಸರ್ವರಿಗು
ಬಾಳ ಪತ್ರಿಕೆ ಪ್ರಶ್ನೆ ಭಿನ್ನ! ತಂತ್ರಜ್ಞ!
TechnoWise Tripods-482 COPYING IN EXAMINATION HALLS
As you do mass copying in examination halls,
Can you do copying in real life also?
Alas! All have different question papers in the tests of Life! O! TechnoWise!
ತಂತ್ರಜ್ಞ ತ್ರಿಪದಿಗಳು-೪೮೧ ದೃಷ್ಟಿ ಪರಿ ಸೃಷ್ಟಿ!
ವ್ಯಷ್ಟಿಜೀವನದಿ "ಅದೃಷ್ಟ", "ಅಪ್ರಜ್ಞೆ"ಯಿರೆ!
ಸೃಷ್ಟಿಸಲು "ಪ್ರಜ್ಞೆ"ಯಲಿ, ಗುರಿಯ "ಸಾಧನೆ" ಬಾಳು!
"ದೃಷ್ಟಿ ಪರಿ ಸೃಷ್ಟಿ"- ಇರೆ ಪ್ರಜ್ಞೆ! ತಂತ್ರಜ್ಞ.
TechnoWise Tripods-481 LIKE VISION IS CREATION!
The life, unconsciously created and happened, is Fate!
If consciously created, it is goal achievement!
Your vision becomes your creation , if conscious! O! TechnoWise!
ತಂತ್ರಜ್ಞ ತ್ರಿಪದಿಗಳು-೪೮೦ ಕ್ಷಮಿಸಿಬಿಡು-ಮಮತೆಯಿಡು
ಗಮನಿಸುವುದಕು ಮೊದಲೆ, ನಿಮಿಷದಲಿ ಸಿಡಿಲೆರಗಿ
ತಮವು ಮುತ್ತದು ನಾಳೆಯೆನುವ ಭರವಸೆಯೆಲ್ಲಿ?
ಕ್ಷಮಿಸಿಬಿಡು ಮಮತೆಯಿಡು ಇಂದೆ! ತಂತ್ರಜ್ಞ.
TechnoWise Tripod-480 FORGIVE and LOVE
In a split second a fatal lightning may strike and
The light of tomorrow may be engulfed by complete darkness!
So forgive and love today itself! O! TechnoWise!
ತಂತ್ರಜ್ಞ ತ್ರಿಪದಿಗಳು-೪೭೯ ವಿಶ್ವಾಸ
ತುಂಬು ವಿಶ್ವಾಸವದು ಇಂಬು ಶ್ವಾಸದ ಪರಿಯೆ!
ಸಂಬಂಧಗಳ ಬೆಸೆವ ಅಂಟು ಈ ವಿಶ್ವಾಸ!
ಸ್ತಂಭವಾಗಿಸು ಬಾಳ ಧ್ವಜಕೆ! ತಂತ್ರಜ್ಞ.
TechnoWise Tripods-479 TRUST
Trustfulness is a basis of life!
It is like a glue that makes all relationships!
Make it like a flag staff of your life! O! TechnoWise!
ತಂತ್ರಜ್ಞ ತ್ರಿಪದಿಗಳು-೪೭೮ ಎರಡು ಅಲಗಿನ ಖಡ್ಗ !
ತಾರಕದ ಒಂದಲಗು, ಮಾರಕದ ಇನ್ನೊಂದು!
ಭಾರಿ ಗಾತ್ರದ ಹರಿತ ತಂತ್ರಜ್ಞಾನದ ಖಡ್ಗ!
ಪೂರ ಎಚ್ಚರದಿಂದ ಬಳಸು! ತಂತ್ರಜ್ಞ!
TechnoWise Tripods-478 DOUBLE-EDGED SWORD
The sword of Technology has two sharp edges!
One is very resourceful and useful; and the other very sharp and fearful!
Use it with extreme care! O! TechnoWise!
ತಂತ್ರಜ್ಞ ತ್ರಿಪದಿಗಳು-೪೭೮ ಎರಡು ಅಲಗಿನ ಖಡ್ಗ !
ತಾರಕದ ಒಂದಲಗು, ಮಾರಕದ ಇನ್ನೊಂದು!
ಭಾರಿ ಗಾತ್ರದ ಹರಿತ ತಂತ್ರಜ್ಞಾನದ ಖಡ್ಗ!
ಪೂರ ಎಚ್ಚರದಿಂದ ಬಳಸು! ತಂತ್ರಜ್ಞ!
TechnoWise Tripods-478 DOUBLE-EDGED SWORD
The sword of Technology has two sharp edges!
One is very resourceful and useful; and the other very sharp and fearful!
Use it with extreme care! O! TechnoWise!
ತಂತ್ರಜ್ಞ ತ್ರಿಪದಿಗಳು-೪೭೭ ಸ್ವಾತಂತ್ರ್ಯ?
ಎಡಬಲಕೆ ಕೈಬೀಸೆ ಕೊಡುವ ಸ್ವಾತಂತ್ರ್ಯವದು
ಬಡಿಯೆ ಬಳಿ ನಿಂದವಗೆ, ಇಲ್ಲವೆಂಬುದನರಿಯೊ!
ನಡೆನುಡಿಗೆ ಮಿತದ ಸ್ವಾತಂತ್ರ್ಯ! ತಂತ್ರಜ್ಞ.
TechnoWise Tripods-477 FREEDOM ?
The freedom you have to swing your arms right or left,
Stops the very moment it hits a person standing nearby!
Your words and actions too have limitations of freedom! O! TechnoWise!
ತಂತ್ರಜ್ಞ ತ್ರಿಪದಿಗಳು-೪೭೬ ಆಸ್ತಿ
ತಿಳಿವು ಮನಸಿನ ಆಸ್ತಿ; ಬೆಳಕು ಬುದ್ಧಿಯ ಆಸ್ತಿ!
ಒಲವು ಹೃದಯದ ಆಸ್ತಿ; ಮೈತ್ರಿ ಜೀವನದಾಸ್ತಿ!
ನಲಿವು ಆತ್ಮದ ಮೂಲ ಆಸ್ತಿ! ತಂತ್ರಜ್ಞ.
TechnoWise Tripods-476 ASSET
Knowledge is the asset of the Mind; and Light is of the Intellect!
Love is the asset of the Heart; and Amity is of the Life!
Joy is the basic asset of the soul! O! TechnoWise.
ತಂತ್ರಜ್ಞ ತ್ರಿಪದಿಗಳು-೪೭೫ ಸಿಹಿಕಬ್ಬು
ಕತ್ತರಿಸಿ ಸೀಳಿದರು, ಒತ್ತೊತ್ತಿ ಜಜ್ಜಿದರು,
ಇತ್ತರೂ ಗಾಣಕ್ಕೆ, ಸಿಹಿರಸವೆ ಒಸರುವುದು!
ಉತ್ತಮರ ಜತೆ ಕಬ್ಬಿನಂತೆ! ತಂತ್ರಜ್ಞ.
TechnoWise Tripods-475 SUGARCANE
You break it, slit it, crush it, beat it, or squeeze it in the mill-
Still sweet juice only oozes out from it!
Relationship with the virtuous is like sugarcane! O! TechnoWise!
ತಂತ್ರಜ್ಞ ತ್ರಿಪದಿಗಳು-೪೭೪ ಸರಿದಾರಿ ಜಯಕೆ ರಹದಾರಿ!
ಸರಿಯಿರದ ಕಾರಣಕು, ಸರಿದಾರಿಯಿರೆ ವಿಜಯ!
ಸರಿ ಕಾರಣವದಿದ್ದು, ಕುಪಥವಿರೆ ಜಯ ನಾಸ್ತಿ!
ಸರಿದಾರಿ ಜಯಕೆ ರಹದಾರಿ! ತಂತ್ರಜ್ಞ.
TechnoWise Tripods-474 DOING RIGHT IS A PASSPORT!
Even if the reasons are wrong, doing right things will definitely bring victory!
Even if the reasons are right, not doing the right things, will make victory a mirage!
Doing right things is always a passport for success! O! TechnoWise!
ತಂತ್ರಜ್ಞ ತ್ರಿಪದಿಗಳು-೪೭೩ ನಂಬಿಕೆಯ ಕಪಿಮುಷ್ಟಿ!
ಕೆಡುಕು ಮತ್ತೊಳಿತುಗಳ ನಡುವೆ ಜಗಳವೆ ಜಗದಿ?
ಎಡಬಲದ ಮತಕುಲದ ದ್ವೇಷವಿಷಕಾರಣವು
ಹಿಡಿದ ನಂಬಿಕೆಯ ಕಪಿಮುಷ್ಟಿ! ತಂತ್ರಜ್ಞ.
TechnoWise Tripods-473 MONKEY GRIP OF BELIEF!
Is it the fight between good and evil in this world?
The reason for the animosity between the Left and the Right, Religion and Caste is:
The monkey grip of Belief! O! TechnoWise!
ತಂತ್ರಜ್ಞ ತ್ರಿಪದಿಗಳು-೪೭೨ ತಪ್ಪುಗಳು
ತಪ್ಪು ಮಾಡಿರೆ ಹಿಂದೆ, ಕಪ್ಪಾಗದಿರಲಿ ಮೊಗ!
ಒಪ್ಪಿ ಪರಿಸ್ಥಿತಿಯ ಚಿಂತಿಸು ಮುಂದೆ ಸರಿದಾರಿ!
ಒಪ್ಪವಿಡು ಇಂದು ಸ್ವಸ್ಥಿತಿಯ! ತಂತ್ರಜ್ಞ.
TechnoWise Tripods-472 MISTAKES
If you have made a mistake yesterday, don't be blue today!
Accept where you are, and think of tomorrow's course of action!
Keep your inner nature serene today! O! TechnoWise!
ತಂತ್ರಜ್ಞ ತ್ರಿಪದಿಗಳು-೪೭೧ ಪರಿವರ್ತನೆ
ಪರರ ಸಮ್ಮತಿಗೆಂದೆ ಪರಿವರ್ತನೆಯು ಸಲ್ಲ!
ಪರಿಕಿಸಿಯೆ ಪರರರೊಡನೆ ನಿನ್ನ ನೀ ನಿರ್ಧರಿಸು!
ಪರಿವರ್ತನೆಯು ಯಾರಿಗೆಂದು! ತಂತ್ರಜ್ಞ.
TechnoWise Tripods-471 CHANGE
Never change yourself for being accepted by others!
Examine closely your own self with others and decide,
Who really requires a change! O! TechnoWise.
ತಂತ್ರಜ್ಞ ತ್ರಿಪದಿಗಳು-೪೭೦ ಪುರುಸೊತ್ತು
ಮನ ಹರುಷದಿಂದಿರಲು ಧನರಾಶಿ ಬೇಕಿಲ್ಲ!
ಜನರು ಮರಗಿಡ ಗಿರಿಯು ಪುಷ್ಪಕಾಶಿಯೆ ಸಾಕು!
ಅನುಭವಿಸೆ ಬೇಕು ಪುರುಸೊತ್ತು! ತಂತ್ರಜ್ಞ.
TechnoWise Tripods-470 LEISURE TIME
You don't need lots of money for a happy state of mind!
The divine company of good people, trees, plants, forests and flowers are enough!
But to enjoy, most important is leisure time! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೯ ಇಂದು - ಮುಂದು
ಮುಂದಾಗುವುದಕೆಲ್ಲ ಇಂದಿನದೆ ಅಡಿಪಾಯ!
ಚಂದ ಶಿಸ್ತಿರಲಿಂದು, ಮುಂದೆ ಪ್ರಭೆ ಪೂರ್ಣೇಂದು!
ಇಂದು ಸ್ವಚ್ಛಂದ? ಗೋವಿಂದ!!! ತಂತ್ರಜ್ಞ.
TechnoWise Tripods-469 PRESENT and FUTURE
The present moment lays the foundation for the future!
If the present is looked after well, the future will be like the full moon!
God only should help them in future, who are unrestrained in the present! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೮ ಮರಿದುಂಬಿಯಾಗು
ಪರಿಗಣಿಸು ಸ್ಫೂರ್ತಿಯನು ತರುವ ಮಹನೀಯರನು!
ಮರೆತುಬಿಡು ಕಿರಿಕಿರಿಯ ಕೊಡುವ ಕಿರುಕುಳಗಳನು!
ಮರಿದುಂಬಿಯಾಗು ರಸವನದಿ! ತಂತ್ರಜ್ಞ.
TechnoWise Tripods-468 BE A HONEY-BEE
Consider all those people who encourage and inspire you!
Forget those small-minded ones who annoy and discourage you!
Be a young bee and drink nectar in the flower garden! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೭ ಶಿಲ್ಪಿ ನೀ!
ಆದಿಮನುಜನದಲ್ಲ, ಮಾಧವನ ಶಿಲ್ಪಿ ನೀ!
ಸಾಧಿಸುವ ಶ್ರಮವಿರಲಿ, ಗುರಿ ಮುಂದೆ- ಗುರು ಹಿಂದೆ-
ಬಾಧಕವ ಮಟ್ಟಿ, ಮೇಲೇರು ತಂತ್ರಜ್ಞ.
TechnoWise Tripods-467 SCULPTOR, YOU ARE
Toiling hard to succeed with a goal in the front and a Guru at the back,
Be a sculptor of a divine man and not a cave man!
Make all the setbacks as stepping stones! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೬ ಭೂದೇವಿ, ಜೀವವೈವಿಧ್ಯಮಯಿ
ಓಡಾಡುವ ಮೃಗಕುಲ, ಹಾಡುವ ವಿಹಂಗಕುಲ,
ಕಾಡಿನಲಿ ತರುಲತೆಯ ಜೀವವೈವಿಧ್ಯವಿರೆ
ಷೋಡಶಾಲಂಕಾರೆ ವಸುಧೆ! ತಂತ್ರಜ್ಞ.
TechnoWise Tripods-466 BEAUTY OF BIODIVERSITY
With playful animals and singing birds,
With trees and creepers of great Biodiversity,
Mother earth is pretty wearing sixteen ornaments! O! TechnoWise!