Tuesday, December 25, 2018

ತಂತ್ರಜ್ಞ ತ್ರಿಪದಿಗಳು-೪೬೪ ಕ್ರಿಸ್‌ಮಸ್‌ ಸಂದೇಶ TechnoWise Tripods-464 CHRISTMAS MESSAGE


ತಂತ್ರಜ್ಞ ತ್ರಿಪದಿಗಳು-೪೬೪ ಕ್ರಿಸ್‌ಮಸ್‌ ಸಂದೇಶ
ಎದೆಯೊಳಗೆ ಪ್ರೀತಿಮಧು, ಅದರೊಡನೆ ದಯೆಯಮೃತ!
ಬದುಕಿನಲಿ ಹರುಷ, ನಗು; ವಿಶ್ವದಲಿ ಭ್ರಾತೃತ್ವ!
ಇದನು ಕ್ರಿಸ್‌ಮಸ್‌ ಹಬ್ಬ ತರಲಿ! ತಂತ್ರಜ್ಞ!
TechnoWise Tripods-464 CHRISTMAS  MESSAGE
Honey of Love and nectar of Compassion in the Heart;
Joy and Smiles in Life; and sense of brotherhood in the World!
May Christmas shower all of them! O! TechnoWise!


Saturday, December 22, 2018

ತಂತ್ರಜ್ಞ ತ್ರಿಪದಿಗಳು-೪೬೩ ಆನೆ - ಇರುವೆ


ತಂತ್ರಜ್ಞ ತ್ರಿಪದಿಗಳು-೪೬೩ ಆನೆ - ಇರುವೆ
ಇರಲು ನೀನಾನೆ-  ಎಚ್ಚರದಿಂದ ಹೆಜ್ಜೆಯಿಡು!
ಇರುವೆಯಿರೆ-  ನೀನು ಮನಬಂದಂತೆ ಅಲೆದಾಡು!
ಗುರು, ನಾಯಕರು ಆನೆಯಂತೆ! ತಂತ್ರಜ್ಞ.
TechnoWise Tripods-463 ELEPHANT -  ANT
You will have to walk carefully, if you are an elephant;
You are free to move about as you like, if you are an ant!
Gurus and Leaders are like elephants! O! TechnoWise!



Friday, December 21, 2018

ತಂತ್ರಜ್ಞ ತ್ರಿಪದಿಗಳು-೪೬೨ ನಿರ್ಧಾರಗಳು: ಸರಿ? ತಪ್ಪು?


ತಂತ್ರಜ್ಞ ತ್ರಿಪದಿಗಳು-೪೬೨ ನಿರ್ಧಾರಗಳು: ಸರಿ?  ತಪ್ಪು?
ಕೆಟ್ಟ ನಿರ್ಧಾರಗಳು ಕೊಟ್ಟ ಅನುಭವ ಮುಂದೆ
ದಿಟ್ಟ ನಿರ್ಧಾರಗಳ ಕಟ್ಟಡದ ಅಡಿಗಟ್ಟು!
ಕೆಟ್ಟುದೊಳಿತಿನ ಮೆಟ್ಟುಗಲ್ಲು! ತಂತ್ರಜ್ಞ!
TechnoWise Tripods-462 DECISIONS: RIGHT?  WRONG?
The experience gained by the taking of wrong decisions,
Are the brick stones of the foundation of subsequent good decisions!
A failure is the stepping stone for success! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೨ ನಿರ್ಧಾರಗಳು: ಸರಿ?  ತಪ್ಪು?
ಕೆಟ್ಟ ನಿರ್ಧಾರಗಳು ಕೊಟ್ಟ ಅನುಭವ ಮುಂದೆ
ದಿಟ್ಟ ನಿರ್ಧಾರಗಳ ಕಟ್ಟಡದ ಅಡಿಗಟ್ಟು!
ಕೆಟ್ಟುದೊಳಿತಿನ ಮೆಟ್ಟುಗಲ್ಲು! ತಂತ್ರಜ್ಞ!
TechnoWise Tripods-462 DECISIONS: RIGHT?  WRONG?
The experience gained by the taking of wrong decisions,
Are the brick stones of the foundation of subsequent good decisions!
A failure is the stepping stone for success! O! TechnoWise!


Wednesday, December 19, 2018

ತಂತ್ರಜ್ಞ ತ್ರಿಪದಿಗಳು-೪೬೧ ಬುದ್ಧಿ - ಲದ್ದಿ


ತಂತ್ರಜ್ಞ ತ್ರಿಪದಿಗಳು-೪೬೧ ಬುದ್ಧಿ - ಲದ್ದಿ
ಗಮನಿಸುವ ಗುಣಸಹಿತ ಭ್ರಮೆರಹಿತ ನಿರ್ಧಾರ,
ಅಮಿತ ಹರಿತವು ಬೇಕು, ಬುದ್ಧಿಯಾಗೆ ಪ್ರಸಿದ್ಧಿ!
ಸಮಯಕಿಲ್ಲದ ಬುದ್ಧಿ, -ಲದ್ದಿ! ತಂತ್ರಜ್ಞ.
TechnoWise Tripods-461 INTELLECT  DROPPINGS
Along with good perception, ability to make proper decisions,
The Intellect becomes a celebrity when it is very sharp!
If it cannot make timely decisions, it is like droppings! O! TechnoWise!

Tuesday, December 18, 2018

ತಂತ್ರಜ್ಞ ತ್ರಿಪದಿಗಳು-೪೬೦ ಬಾಳೊಂದು ರಾಸಾಯನಿಕ ಸೂಪ


ತಂತ್ರಜ್ಞ ತ್ರಿಪದಿಗಳು-೪೬೦ ಬಾಳೊಂದು ರಾಸಾಯನಿಕ ಸೂಪ
ರಾಸಾಯನಿಕ ಸೂಪ ನೀ ಸಮೆವ ಈ ಬದುಕು!
ಈ ಸೂಪವಿರುವ ಶುಚಿರುಚಿಗೆ ನಿನ್ನದೆ ಅಡುಗೆ!
ಲೇಸಾಗಿ ಮಾಡು ನಳಪಾಕ! ತಂತ್ರಜ್ಞ.
TechnoWise Tripod-460 LIFE IS A CHEMICAL SOUP
The life you make is like a chemical soup!
For the flavour and taste of this soup, only you are responsible!
Be a cook of Nala's caliber! O! TechnoWise!

Monday, December 17, 2018

ತಂತ್ರಜ್ಞ ತ್ರಿಪದಿಗಳು-೪೫೯ ಜ್ಞಾಪನೆ - ಕಲ್ಪನೆ


ತಂತ್ರಜ್ಞ ತ್ರಿಪದಿಗಳು-೪೫೯ ಜ್ಞಾಪನೆ - ಕಲ್ಪನೆ
ಜ್ಞಾಪನೆಯು, ಕಲ್ಪನೆಯು-  ಗೌಪ್ಯಬಲ ನರಗೆರಡು!
ತಾಪ ಜ್ಞಾಪಿಸೆ ನಿನ್ನೆ! ಚಿಂತೆ ಕಲ್ಪಿಸೆ ನಾಳೆ!
ಶಾಪವಾಗದೆ ಇರಲಿ ವರವು! ತಂತ್ರಜ್ಞ.
TechnoWise Tripods-459 MEMORY -  IMAGINATION
For humans, two secret boons are Memory and Imagination!
Brooding over a bad yesterday is misery, and imagining a worse tomorrow is worry!
Let not the boons become curses! O! TechnoWise!

Sunday, December 16, 2018

ತಂತ್ರಜ್ಞ ತ್ರಿಪದಿಗಳು-೪೫೮ ಕ್ರಿಯೆ - ಪ್ರತಿಕ್ರಿಯೆ


ತಂತ್ರಜ್ಞ ತ್ರಿಪದಿಗಳು-೪೫೮ ಕ್ರಿಯೆ - ಪ್ರತಿಕ್ರಿಯೆ
ಕ್ರಿಯೆಗೆ ಸಮವೆದುರು ಪ್ರತಿಕ್ರಿಯೆಯೆಂದ ವಿಜ್ಞಾನಿ!
ನಯನಡೆಗೆ ಎದುರಿಂದ ನಯವೆಂದ ಸುಜ್ಞಾನಿ!
ಕ್ರಿಯೆಯಂತೆ ಜಗದಿ ಪ್ರತಿಕ್ರಿಯೆಯು! ತಂತ್ರಜ್ಞ.
TechnoWise Tripods-458 ACTION - REACTION
Every action has equal and opposite reaction- said a scientist!
If the approach in life is good, so also the response- said a sage!
Reaction is like action in all the worlds! O! TechnoWise!


Thursday, December 13, 2018

ತಂತ್ರಜ್ಞ ತ್ರಿಪದಿಗಳು-೪೫೭ ಪ್ರೀತಿ ಕಸ್ತೂರಿ


ತಂತ್ರಜ್ಞ ತ್ರಿಪದಿಗಳು-೪೫೭ ಪ್ರೀತಿ ಕಸ್ತೂರಿ
ಅಂಚೆಯಲೊ, ಭೇಟಿಯಲೊ, ಮಿಂಚಂಚೆ ನುಡಿಯಲ್ಲೊ
ಹಂಚಿಕೊಳೆ ತುಸು ಪ್ರೀತಿ ಎದೆತುಂಬಿ ನಮಿಸವರ!
ಕೊಂಚವಿದ್ದರು ಅದು ಕಸ್ತೂರಿ! ತಂತ್ರಜ್ಞ.
TechnoWise Tripods-457 A  LITTLE  LOVE
Heartfully salute all those who share their love however small,
Through letters, or visits, or even electronic mails!
Even a small amount of love is fragrant like the musk! O! TechnoWise!


Tuesday, December 11, 2018

ತಂತ್ರಜ್ಞ ತ್ರಿಪದಿಗಳು-೪೫೬ ಚಿಂತನೆಗಳು


ತಂತ್ರಜ್ಞ ತ್ರಿಪದಿಗಳು-೪೫೬ ಚಿಂತನೆಗಳು
ಸಚ್ಚಿಂತನೆಯು ಬರಲು, ಮೆಚ್ಚಿ ಬಹುದಿನ ಉಳಿಸು!
ಹುಚ್ಚು ಯೋಚನೆ ಬರಲು, ಹಾಗೆಯೇ ಹೊರಕಳಿಸು,
ಮುಚ್ಚು ಬಾಗಿಲು ಕಿಟಿಕಿ ಭದ್ರ! ತಂತ್ರಜ್ಞ.
TechnoWise Tripods-456 THOUGHTS
When a good thought comes, welcome it and provide all the comforts!
When a bad thought enters, treat it as an unwanted guest, make it go away,
And keep all the doors and windows closed! O! TechnoWise!

Monday, December 10, 2018

ತಂತ್ರಜ್ಞ ತ್ರಿಪದಿಗಳು-೪೫೫ ಭಾವನೆ - ಭಾವ - ಕಲ್ಪನೆ


ತಂತ್ರಜ್ಞ ತ್ರಿಪದಿಗಳು-೪೫೫ ಭಾವನೆ - ಭಾವ - ಕಲ್ಪನೆ
ಭಾವನೆಯ ರೀತಿಯಲೆ ಜೀವನದಲಾಗುವಿಕೆ!
ಭಾವರಸದಂತೆಯೇ ಭವರಸಾಯನ ಪಾಕ!
ಯಾವ ಕಲ್ಪನೆ? ಅಂತೆ ಸೃಷ್ಟಿ! ತಂತ್ರಜ್ಞ!
TechnoWise Tripods-455 THINK - FEEL - IMAGINE
In whatever way you think, that way only your life happens!
The taste of the salad of life depends on the flavours of the ingredient feelings!
As is your imagination, so is your creation! O! TechnoWise!




Sunday, December 9, 2018

ತಂತ್ರಜ್ಞ ತ್ರಿಪದಿಗಳು-೪೫೪ ದೇವರ ವರ


ತಂತ್ರಜ್ಞ ತ್ರಿಪದಿಗಳು-೪೫೪ ದೇವರ ವರ
ಮರೆಯುವಿರಿ ಹಲವರನು ಹರಿದುಹೋಗಲು ಕಾಲ!
ಮರೆಯುವಿರಿ ಕಾಲವನೆ ಕೆಲಜನರು ಜತೆಗಿರಲು!
ದೊರೆವ ದೇವರ ವರವೆ ಇವರು! ತಂತ್ರಜ್ಞ.
TechnoWise Tripods-454 DIVINE BOON
There are many people whom you forget with time!
There are a few people with whom you forget time!
These, only a few, are verily divine boon! O! technoWise!


Saturday, December 8, 2018

ತಂತ್ರಜ್ಞ ತ್ರಿಪದಿಗಳು-೪೫೩ ಸೃಷ್ಟಿಕರ್ತಗೆ ದ್ವಾರ


ತಂತ್ರಜ್ಞ ತ್ರಿಪದಿಗಳು-೪೫೩ ಸೃಷ್ಟಿಕರ್ತಗೆ ದ್ವಾರ
ದುಷ್ಟ ವ್ಯಾಘ್ರನೊ, ಅತಿ ನಿಕೃಷ್ಟ ಮಣ್ಣಿನ ಹುಳವೊ
ದೃಷ್ಟ ತಾವರೆಯೊ, ಅದೃಷ್ಟ ಎದೆತಾವರೆಯೊ
ಸೃಷ್ಟಿಕರ್ತಗೆ ದ್ವಾರ ಸೃಷ್ಟಿ! ತಂತ್ರಜ್ಞ.
TechnoWise Tripods-453 DOORWAY TO THE CREATOR
May be through a ferocious tiger, or through an ordinary earthworm,
May be through a visible lotus of the pond, or through an invisible lotus of the heart,
The doorway to the creator is his creation! O! TechnoWise!



Sunday, December 2, 2018

ತಂತ್ರಜ್ಞ ತ್ರಿಪದಿಗಳು-452 ಮೃತ್ಯು - ಮೋಕ್ಷ


ತಂತ್ರಜ್ಞ ತ್ರಿಪದಿಗಳು-452 ಮೃತ್ಯು - ಮೋಕ್ಷ
ಶ್ವಾಸ ನಿಲುಗಡೆಗೊಂಡು, ಆಸೆಯುಳಿದಿರೆ- ಮೃತ್ಯು!
ಆಸೆ ನಿಲುಗಡೆಗೊಂಡು, ಶ್ವಾಸ ನಡೆದಿರೆ- ಮೋಕ್ಷ!
ಲೇಸುಯೀ ವ್ಯತ್ಯಾಸ ನೆನೆಯೆ! ತಂತ್ರಜ್ಞ!
TechnoWise Tripods-452 DEATH - MOKSHA
When Breath stops and Desire remains, that is Death!
When Desire stops and Breath remains, that is Moksha!
When we reminisce this difference, that is the Essence! O! TechnoWise!