ಬದುಕಿಗೆ ಸಂಬಂಧಿಸಿದ ಒಂದು ವಿಶೇಷ ಘಟನೆ(ಕಿರುಗತೆ), ಅದು ಬೀರುವ ಬೆಳಕು, ಇವುಗಳಿಗೆ ಸಂಬಂಧಿಸಿದ ಒಂದು ತಂತ್ರಜ್ಞ ತ್ರಿಪದಿ(ಚುಟುಕು) ಇವು ಇಲ್ಲಿ ಪ್ರತಿ ವಾರವೂ ಮೂಡಿಬರುತ್ತವೆ. ಇವು ಅಂಕಣ(ಕಿರುಲೇಖನ)ಗಳಾಗಿ ಕಸ್ತೂರಿ, ಮಂಜುವಾಣಿ, ಕನ್ನಡ ಟೈಮ್ಸ್, ವಿವೇಕಪ್ರಭಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ/ಆಗುತ್ತಿವೆ.
"ಅಚ್ಚಗನ್ನಡದ ನುಡಿವಣಿ" ಪುಟವು ಅಚ್ಚಗನ್ನಡದಲ್ಲೇ ೩ ಕೃತಿಗಳನ್ನು (ಅಚ್ಚಗನ್ನಡ ನುಡಿಕೋಶ, ಕಾಲೂರ ಚೆಲುವೆ, ನುಡಿವಣಿಗಳು) ಬರೆದ ನಮ್ಮ ತಂದೆ ಕೊಳಂಬೆ ಪುಟ್ಟಣ್ಣಗೌಡರ "ನುಡಿವಣಿಗಳು" ಪುಸ್ತಕದಿಂದ ಆಯ್ದವು.
ಓದಲು ದಯವಿಟ್ಟು ಕ್ಲಿಕ್ ಮಾಡಿ: ಸಂಪುಟ-೧ / ಸಂಪುಟ-೨ / ಅಚ್ಚಗನ್ನಡದ ನುಡಿವಣಿ
ತಂತ್ರಜ್ಞ ತ್ರಿಪದಿಗಳು-೪೫೧ ಕಜ್ಜ - ಬೀಜ ಒಂದೊಂದು ಕಜ್ಜವೂ ಒಂದೊಂದು ಬೀಜವದು! ಚಂದ ಹೂಗಿಡವೊ ಮುಳ್ಳಿನ ಗಿಡವೊ ಆ ಬೀಜ ದಿಂದ ಸಾಧ್ಯತೆಯಿರಲು, ಜೋಕೆ! ತಂತ್ರಜ್ಞ. TechnoWise Tripod-451 DEED - SEED Each deed you do is like a seed! As a flower plant or a thorny plant may emerge from that seed, Be careful in your choice! O! TechnoWise!
ತಂತ್ರಜ್ಞ ತ್ರಿಪದಿಗಳು-೪೫೦ ಸೊಗಸಕ್ಕರೆಯ ಕಾಫಿ! ಕುಡಿದು ಸಪ್ಪೆಯ ಕಾಫಿ, ಅಡಿಯ ಸಕ್ಕರೆ ಕಂಡು, ಚಡಪಡಿಸಲೇನು ಫಲ? ಕದಡಿ ಸೊಗಸಕ್ಕರೆಯ, ಕುಡಿ ಬಿಸಿಯ ಶುಚಿರುಚಿಯ ಕಾಫಿ! ತಂತ್ರಜ್ಞ! TechnoWise Tripods-450 COFFEE WITH SUGAR OF JOY! After tasting bitter coffee, if you find sugar lying at the bottom of the cup, What is the use of repenting? Stir the sugar of Joy well! And relish a drink of steaming fine coffee! O! TechnoWise!
ತಂತ್ರಜ್ಞ ತ್ರಿಪದಿಗಳು-೪೪೯ ಬೆಳಕು ಉತ್ಸಾಹಪ್ರವಾಹ ವಿದ್ಯುತ್ತು ಹರಿಯುವ ಪರಿಯೆ! ಪ್ರೀತಿಯಾಕರ್ಷಣೆಯು ಅಯಸ್ಕಾಂತಗಳಂತೆ! ದ್ಯುತಿಯಿಹುದು ಎಲ್ಲದರ ಹಿಂದೆ! ತಂತ್ರಜ್ಞ. TechnoWise Tripods-449 LIGHT Enthusiasm is like the flow of electricity! Love is like the attractions in magnetism! Behind everything there is light! O! TechnoWise!
ತಂತ್ರಜ್ಞ ತ್ರಿಪದಿಗಳು-೪೪೮ ದೀಪಾವಳಿಯ ಶುಭಾಶಯಗಳು ಕೋಪ, ಹಳೆಯದಕೆ ಪರಿತಾಪ, ನಾಳೆಯ ಚಿಂತೆ- ಈ ಪರಿಯ ಮೊಬ್ಬಳಿದು ಎದೆದೀಪ ಬೆಳಗುವುದೆ ದೀಪಾವಳಿಯ ಸುಸಂದೇಶ! ತಂತ್ರಜ್ಞ. TechnoWise Tripods-448 DEEPAVALI GREETINGS Making the light the lamp of the heart to dispel the darkness Of Anger, anguish for the past, and worry of the future Is the auspicious message of Deepavali! O! TechnoWise!
ತಂತ್ರಜ್ಞ ತ್ರಿಪದಿಗಳು-೪೪೭ ಮನುಜಸಂಬಂಧ ಹರಣಹೋಗುವುದೊತ್ತೆ! ಹಾರಿ ಕಣ್ಮರೆ ಬಿಡಲು! ಸರಿಯಾಗಿ ಹಿಡಿದಾಗ ಚಿರವಾಗಿ ಉಳಿಯುವುದು! ಮರಿಹಕ್ಕಿ ಪರಿಯೆ ಸಂಬಂಧ! ತಂತ್ರಜ್ಞ. TechnoWise Tripods-447 HUMAN REATIONSHIPS It dies if you hold very tight! Flies away if loosely held! Remains with you forever if held with care! Delicate as a baby bird is human relationship! O! TechnoWise!