ಬದುಕಿಗೆ ಸಂಬಂಧಿಸಿದ ಒಂದು ವಿಶೇಷ ಘಟನೆ(ಕಿರುಗತೆ), ಅದು ಬೀರುವ ಬೆಳಕು, ಇವುಗಳಿಗೆ ಸಂಬಂಧಿಸಿದ ಒಂದು ತಂತ್ರಜ್ಞ ತ್ರಿಪದಿ(ಚುಟುಕು) ಇವು ಇಲ್ಲಿ ಪ್ರತಿ ವಾರವೂ ಮೂಡಿಬರುತ್ತವೆ. ಇವು ಅಂಕಣ(ಕಿರುಲೇಖನ)ಗಳಾಗಿ ಕಸ್ತೂರಿ, ಮಂಜುವಾಣಿ, ಕನ್ನಡ ಟೈಮ್ಸ್, ವಿವೇಕಪ್ರಭಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ/ಆಗುತ್ತಿವೆ.
"ಅಚ್ಚಗನ್ನಡದ ನುಡಿವಣಿ" ಪುಟವು ಅಚ್ಚಗನ್ನಡದಲ್ಲೇ ೩ ಕೃತಿಗಳನ್ನು (ಅಚ್ಚಗನ್ನಡ ನುಡಿಕೋಶ, ಕಾಲೂರ ಚೆಲುವೆ, ನುಡಿವಣಿಗಳು) ಬರೆದ ನಮ್ಮ ತಂದೆ ಕೊಳಂಬೆ ಪುಟ್ಟಣ್ಣಗೌಡರ "ನುಡಿವಣಿಗಳು" ಪುಸ್ತಕದಿಂದ ಆಯ್ದವು.
ಓದಲು ದಯವಿಟ್ಟು ಕ್ಲಿಕ್ ಮಾಡಿ: ಸಂಪುಟ-೧ / ಸಂಪುಟ-೨ / ಅಚ್ಚಗನ್ನಡದ ನುಡಿವಣಿ
ತಂತ್ರಜ್ಞ ತ್ರಿಪದಿಗಳು-೩೭೯ ಹರುಷ ಹರುಷಪಡದಿರಲು ಕನಿಕರಿಸಿ ಕಾಣುವ ಬಾಳು, ಹರುಷದಿಂದಿರೆ ನೀನು ಮುಗುಳುನಗು ಬೀರುವುದು! ಹರಸುವುದು ಹರಡೆ ನೀ ಹರುಷ! ತಂತ್ರಜ್ಞ! TechnoWise Tripods-379 HAPPINESS The Life that shows pity on you when you don't enjoy, Smiles at you when you are happy! And blesses you when you make others happy! O! TechnoWise!
ತಂತ್ರಜ್ಞ ತ್ರಿಪದಿಗಳು-೩೭೮ ಗಿರಿಯು ಬೆಳೆಯುವುದಿಲ್ಲ! ಗಿರಿಯನೇರಲು ಸೋತ ವರ ಸಾಹಸಿಯು ಬೆಳೆದು ಮರುವರುಷ ಗೆಲ್ಲುವನು, ಗಿರಿಯ ನೆತ್ತಿಯನೇರಿ! ಗಿರಿಯಲ್ಲ! ಬೆಳೆವವನು ನರನು! ತಂತ್ರಜ್ಞ! TechnoWise Tripods-378 MOUNTAINS GROW NOT! After failing to climb to the top, the mountaineer strived to grow! He came back next year and conquered the mountain peak! Mountains grow not! but humans can! O! TechnoWise!
Saturday, July 28, 2018
ತಂತ್ರಜ್ಞ ತ್ರಿಪದಿಗಳು-೩೭೭ ಅಂತರಂಗವೆ ನ್ಯಾಯಾಲಯ ಅಂತರಂಗದಿ ವ್ಯಾಜ್ಯ! ಅಂತಸ್ಥ ಎದೆ ಸಾಕ್ಷಿ! ನಿಂತು ಹೋರುವ ಮನಸು ಮತಿ ನ್ಯಾಯವಾದಿಗಳು! ಅಂತರಾತ್ಮವೆ ನ್ಯಾಯಮೂರ್ತಿ! ತಂತ್ರಜ್ಞ! TechnoWise Tripods-377 INNER COURT OF LAW Litigation in the inner Court of Law! Witness is the voice of the Heart! Mind and Intellect are the two Lawyers arguing for and against! The Honourable Judge is the inner Soul! O! TechnoWise!
ತಂತ್ರಜ್ಞ ತ್ರಿಪದಿಗಳು-೩೭೬ ಸಮಸ್ಯೆಯ ಸಹಿ ಇಹಸಮಸ್ಯೆಗಳೆಲ್ಲ ಬಹುಪಾಠಗಳ ಕಲಿಸಿ, ಸಹಿಮಾಡಿ ಅನುಭವದ ಪುಸ್ತಕದಿ ತೆರಳುತಿರೆ, ಸಹನೆಯಲಿ ಬಲಗೊಂಡು ಬಾಳು! ತಂತ್ರಜ್ಞ! TechnoWise Tripods-376 SIGNATURE OF PROBLEMS Problems of life come to teach valuable lessons! After putting the signature in the experience book of your life, they depart! Have patience, get stronger, and live well! O! TechnoWise!
ತಂತ್ರಜ್ಞ ತ್ರಿಪದಿಗಳು-೩೭೫ ಕಿಡಿಯ ಕುಡಿ ಕಿಡಿಕುಡಿಯು ಉರಿದೇಳೆ ಸುಡುಗಾಡು ಕಗ್ಗಾಡು! ಕಿಡಿ ಲಕ್ಷ ಸೊಡರಾಗೆ ಶುಭಗಳಿಗೆ ದೀವಳಿಗೆ! ಕಿಡಿಯಲ್ಲ! ಜತೆಯ ಮನ ಮುಖ್ಯ! ತಂತ್ರಜ್ಞ! TechnoWise Tripods-375 A TINY SPARK A tiny spark may become a wild fire and turn a great forest into ashes! A tiny spark may also light millions of lamps and gift us a festival of lights! Important is not the spark! But the mind behind! O! TechnoWise!
ತಂತ್ರಜ್ಞ ತ್ರಿಪದಿಗಳು-೩೭೪ ಸದವಕಾಶ ಸದವಕಾಶವು ಬರಲು, ಅದೃಷ್ಟವಂತ ದಿಟ! ಚದುರ ಮತಿವಂತನದ ಬಿಗಿಹಿಡಿವ! ಗುಣವಂತ ಒದಗಿಸುವ ಪರರಿಗವಕಾಶ! ತಂತ್ರಜ್ಞ. TechnoWise Tripod-374 OPPORTUNITY If opportunity knocks on his door, he's really a fortunate one! If he's clever and intelligent, he'll grasp and hold it tight! If he's virtuous, he'll also create opportunity for others! O! technoWise!
ತಂತ್ರಜ್ಞ ತ್ರಿಪದಿಗಳು-೩೭೩ ಪ್ರವರ್ಧನಕೆ ಆಮೆನಡಿಗೆ ರವಿಯುದಿಸಿ ನೆತ್ತಿ ತಲಪುವ ನಿಧಾನದಲೇರಿ! ಜವವಿರದೆ ಶಶಿರೇಖೆಯಾಗುವುದು ಪೂರ್ಣಶಶಿ! ಪ್ರವರ್ಧನಕೆ ಆಮೆನಡಿಗೆ! ತಂತ್ರಜ್ಞ. TechnoWise Tripods-373 RISE IS SLOW After sunrise, sun takes time to ascend to the zenith in the sky! The crescent moon takes time to become the beautiful full moon! Rise to the peak of success is like the movement of a tortoise! O! TechnoWise!
ತಂತ್ರಜ್ಞ ತ್ರಿಪದಿಗಳು-೩೭೨ ಮಾನಸಿಕ ನಿಲುವು ಹರುಷಿಸುವ ಮನವಿರಲು ಸಿರಿಬಾಳು! ಹೋಲಿಸಲು ಪರರೊಡನೆ ಖಿನ್ನತೆಯು! ಶಪಿಸುತಿರೆ ಬಲು ಗೋಳು! ಇರುವ ನಿಲುವಿನ ಪರಿಯೆ ಬಾಳು! ತಂತ್ರಜ್ಞ! TechnoWise Tripods-372 ATTITUDE Life is a festival if you have the mind to enjoy! Depression if you compare with others, and hell if you critisize! Your own attitude makes or breaks your life! O! TechnoWise!
ತಂತ್ರಜ್ಞ ತ್ರಿಪದಿಗಳು-೩೭೧ ಚಂದದ ಮನಸು ಚಂದವಿರೆ ಮನದನ್ನೆ ಮುಂದೆ ಸೊಗವೆಂದು ಆ ನಂದ ಪಡೆಯಲು ಸೋತೆ, ಚಂದವಿರಿಸಲು ಮರೆತು ಹಿಂದಿರುವ ನಿನ್ನ ಮನವನ್ನೆ! ತಂತ್ರಜ್ಞ! TechnoWise Tripos-371 BEAUTIFUL MIND You failed by presuming that a beautiful spouse Would bring you immense happiness Because you forgot to keep your own mind beautiful! O! TechnoWise!
ತಂತ್ರಜ್ಞ ತ್ರಿಪದಿಗಳು-೩೭೦ ಸ್ವಾತಂತ್ರ್ಯ - ಹೊಣೆ ಇರುವ ಸಾಧ್ಯತೆಗಳಲಿ, ಸರಿ ಆಯ್ದುಕೊಳುವಲ್ಲಿ ಇರುವ ಸ್ವಾತಂತ್ರ್ಯ ಮುಂದಿರದು ತಪ್ಪಿಸಿಕೊಳಲು ಪರಿಣಾಮಗಳ ಹೊರೆಯ ಹೊಣೆಯ! ತಂತ್ರಜ್ಞ! TechnoWise Tripods-370 FREEDOM - RESPONSIBILITY Among all the possibilities, you are free to choose any one of them! But remember this! you are not free to escape from shouldering- The responsibilities of the consequences of your choice! O! TechnoWise!
ತಂತ್ರಜ್ಞ ತ್ರಿಪದಿಗಳು-೩೬೯ ಜೀವನವೆ ಜೇನು ಏನ ಬಹು ಪ್ರೀತಿಸುವೆ, ನೀನದನೆ ಮಾಡುತಿರೆ, ಏನನ್ನು ಮಾಡುವೆಯೊ, ಅದನು ಪ್ರೀತಿಸೆ ಪೂರ್ಣ, ಜೇನ ಝರಿ ಜೀವನದ ಹರಿವು! ತಂತ್ರಜ್ಞ. TechnoWise Tripods-369 LIFE IS HONEY If you do what you love, And love what you do, Then the flow of life will be a stream of honey! O! TechnoWise!
ತಂತ್ರಜ್ಞ ತ್ರಿಪದಿಗಳು-೩೬೮ ಬೈಸಿಕಲ್ ಈಸಿ ಜಯಿಸಲು ಜಗದಿ, ಬೈಸಿಕಲ್ಲಿನ ರೀತಿ ಲೇಸಾದ ತೋಲನಕೆ ಮುಂದೆ ಚಾಲನೆ ಬೇಕು! ಘಾಸಿ ದಿಟ! ಇದ್ದಲ್ಲೆ ನಿಲಲು! ತಂತ್ರಜ್ಞ. TechnoWise Tripods-368 BICYCLE Living and winning in life is like riding a bicycle! You must move continuously in order to keep your balance! Otherwise, you will fall down and get hurt! O! TechnoWise!
ತಂತ್ರಜ್ಞ ತ್ರಿಪದಿಗಳು-೩೬೭ ಈರುಳ್ಳಿ ಎಸಳು ಈರುಳ್ಳಿ ಎಸಳನ್ನು ಜಾರಿಸುತ ಬಂದಂತೆ ತೋರದೇನೂ ಕೊನೆಗೆ! ಎಸಳದರ ಸರ್ವಸ್ವ! ಈರುಳ್ಳಿ ಎಸಳೆ ಪ್ರತಿದಿನವು! ತಂತ್ರಜ್ಞ. TechnoWise Tripods-367 ONION As we go on removing the petals of the onion, At the end, nothing remains! Petals only make up the onion whole! Like a petal of an onion is each day of our life! O! TechnoWise!
ತಂತ್ರಜ್ಞ ತ್ರಿಪದಿಗಳು-೩೬೬ ನಿನ್ನಂಥವರು ಬೇಕು! ಶಕ್ತಿ ನಿನಗಿರಲೊಬ್ಬ ವ್ಯಕ್ತಿಗೀಯಲು ಹರುಷ, ಹೊತ್ತುಕಳೆಯದೆ ನೀಡು! ನಿನ್ನಂಥವರು ಬೇಕು ಹತ್ತು ಜನ ದುಃಖಾರ್ತ ಜಗಕೆ! ತಂತ್ರಜ್ಞ. TechnoWise Tripods-366 YOU ARE NEEDED If you have the power to make someone happy, Without wasting further time, do it! The miserable world needs more people like you! O! TechnoWise!
ತಂತ್ರಜ್ಞ ತ್ರಿಪದಿಗಳು-೩೬೫ ಪರಿಪಕ್ವತೆ ಗಿರಿಗಾತ್ರ ವಸ್ತುಗಳ ಕುರಿತು ವಾದದೊಳಿಲ್ಲ! ಕಿರಿಯ ವಸ್ತುವ ತಿಳಿವ ಪ್ರಕ್ರಿಯೆಯಲಡಗಿಹುದು ಪರಿಪಕ್ವತೆಯ ಹಿರಿಮೆ! ಗರಿಮೆ! ತಂತ್ರಜ್ಞ. TechnoWise Tripods-365 MATURITY It is not in the scholarly discussions of big things! Only when you start understanding small things, You'll find the greatness and importance of maturity! O! TechnoWise.
ತಂತ್ರಜ್ಞ ತ್ರಿಪದಿಗಳು-೩೬೪ ಕನಸು - ನನಸು ದಿನ-ಕಾಲ ಖಚಿತವಿರೆ, ಕನಸು -ಗುರಿಯೆನಿಸುವುದು! ಅನುಕ್ರಮದಿ ವಿಭಜಿಸಲು ಗುರಿಗೆ ಯೋಜನೆ ಸಿದ್ಧ! ನನಸು -ಯೋಜನೆಯ ಫಲಿತಾಂಶ! ತಂತ್ರಜ್ಞ. TechnoWise Tripods-364 DREAM - REALITY A dream enjoined with a specific time-frame becomes a goal! A goal becomes a Plan when broken down into steps! A plan followed by action makes the Dream a Reality! O! TechnoWise!
ತಂತ್ರಜ್ಞ ತ್ರಿಪದಿಗಳು-೩೬೩ ಮಂದಹಾಸ??? ಜರಿಯ ಕಂಚೀ ಚೀರ! ಕೊರಳ ವಜ್ರದ ಹಾರ! ಕರದ ಬಳೆ ಬಂಗಾರ! ಕೊನೆಗೊಳದು ಶೃಂಗಾರ- ಇರದೆ ಮೊಗದಲಿ ಮಂದಹಾಸ! ತಂತ್ರಜ್ಞ! TechnoWise Tripods-363 WEAR A SMILE! Kanchi Saree full of gold lace! around the neck diamond necklace! Shining bangles of gold! still adornment is incomplete- Till she wears a smile in the face! O! TechnoWise!
ತಂತ್ರಜ್ಞ ತ್ರಿಪದಿಗಳು-362 ಅಮೂಲ್ಯ ಸಂದರ್ಭ ಎರಡರಲಿ ಒಂದೊಂದು ಬಹು ಮೂಲ್ಯ! ಒಂದು-ಪಡೆಯುವ ಮೊದಲು! ಎರಡು-ಕಳಕೊಂಡಾಗ! ಚಂದ ಜೀವನ ನೆನೆಯೆ ನಡುವೆ! ತಂತ್ರಜ್ಞ. TechnoWise Tripods-362 VERY VALUABLE In life, many things are very valuable in two situations! First-before getting it! and Second-after losing it! Life is beautiful, if you reminisce this in between! O! TechnoWise!
ತಂತ್ರಜ್ಞ ತ್ರಿಪದಿಗಳು-೩೬೧ ಮಾಹಿತಿ - ಮಹಾಸ್ಫೂರ್ತಿ ನರಗುರುವೆ ಬೇಕಿಲ್ಲ, ಬರಿಯ ಮಾಹಿತಿ ಕೊಡಲು! ಗುರುತರದ ತಜ್ಞ ಕಂಪ್ಯೂಟರೇ ಸಾಕದಕೆ! ಗುರು ಬೇಕು ಸ್ಫೂರ್ತಿಖನಿಯಾಗಿ! ತಂತ್ರಜ್ಞ. TechnoWise Tripods-361 INFORMATION - INSPIRATION Not at all required a human teacher to give mere Information! A computer, well networked, will do it in a more efficient and better way! A teacher is required as a perennial spring of Inspiration! O! TechnoWise!
ತಂತ್ರಜ್ಞ ತ್ರಿಪದಿಗಳು-೩೬೦ ಮೊಂಡರನು ತಿದ್ದುವುದು ಮೊಂಡರನು ತಿದ್ದುವುದು ದಂಡಕಾರಣ್ಯದಲಿ ಜೊಂಡುಹುಲ್ಲಿನ ಪಂಜು ಹಿಡಿದು ಬೆಳಗಿಸುವಂತೆ ದಂಡ ಪ್ರಯತ್ನವದು ತಿಳಿಯೊ! ತಂತ್ರಜ್ಞ. TechnoWise Tripods-360 CORRECTING THE STUBBORNS Striving to correct stubborn persons Is like trying to illuminate a deep and dark jungle Using a torch of lighted bundle of elephant grass! O! TechnoWise.
ತಂತ್ರಜ್ಞ ತ್ರಿಪದಿಗಳು-೩೫೯ ಬ್ರಹ್ಮಾಂಡ ಪಿಂಡಾಂಡ ಸುತ್ತಿ ತಿರುಗುತ ಭೂಮಿ ಎತ್ತಲೋ ಧಾವಿಸಿರೆ, ಅತ್ತ ಮೇಲೂ ಇಲ್ಲ! ಇತ್ತ ಕೆಳಗೂ ಇಲ್ಲ! ಮತ್ತೇನು? ಹೊರಗೊಳಗೆ ವಿಶ್ವ! ತಂತ್ರಜ್ಞ. TechnoWise Tripods-359 MACRO MICRO WORLDS As mother earth is hurrying in space, rotating and revolving, There's nothing like Up there! or Down here! Then what? Macro outside and Micro inside! O! TechnoWise!