Tuesday, October 31, 2017

ತಂತ್ರಜ್ಞ ತ್ರಿಪದಿಗಳು-175 ನರನ ಬಲ ನವ್ಯ ಹತ್ಯಾರ

ತಂತ್ರಜ್ಞ ತ್ರಿಪದಿಗಳು-175 ನರನ ಬಲ ನವ್ಯ ಹತ್ಯಾರ
ನರಭಕ್ಷಣವು ಅಂದು! ನರನ ರಕ್ಷಣೆ ಇಂದು!
ಇರುವೆಲ್ಲ ಜೀವಿಗಳ ಹಿಡಿತ ಮಾನವಗೆಂತು?
ನರನ ಬಲ ನವ್ಯ ಹತ್ಯಾರ! ತಂತ್ರಜ್ಞ.
TechnoWise-175 TOOL-WIELDING MAN
Man-eating tigers of yore need human protection now!
How could man get the control over the animals kingdom?
In tools lies the mighty strength of man!

Monday, October 30, 2017

ತಂತ್ರಜ್ಞ ತ್ರಿಪದಿಗಳು-174 ತುಕ್ಕುಹಿಡಿದ ಕಬ್ಬಿಣ-ಕಲೆಯಾಗದ ಉಕ್ಕು

ತಂತ್ರಜ್ಞ ತ್ರಿಪದಿಗಳು-174 ತುಕ್ಕುಹಿಡಿದ ಕಬ್ಬಿಣ-ಕಲೆಯಾಗದ ಉಕ್ಕು
ಸಿಕ್ಕಿ ಕೆಡುಕಿನ ಹವೆಗೆ ತುಕ್ಕಾಗಿ ಬಿಡುವೆ ನೀ,
ಚೊಕ್ಕವಾಗಿರಲು ಉತ್ತಮರ ಸಂಗವ ಸೇರಿ,
ಉಕ್ಕಾಗು ಬೆಳ್ಳಿಯಂತಾಗು, ತಂತ್ರಜ್ಞ.
TechnoWise-174 RUSTED IRON-STAINLESS STEEL
You'll be rusted and destroyed in the company of evil;
For your own good, mix with the good and agreeable,
And become stainless steel, shining like silver

Sunday, October 29, 2017

ತಂತ್ರಜ್ಞ ತ್ರಿಪದಿಗಳು-173 ಹೃದಯ-ಮನಸು-ಕೈಗಳು

ತಂತ್ರಜ್ಞ ತ್ರಿಪದಿಗಳು-173 ಹೃದಯ-ಮನಸು-ಕೈಗಳು
ನಿಲಲಿ ಹೃದಯದಿ ಮನಸು, ಬೆಳಕು ಎದೆಯೊಳಗಿಂದ
ಬೆಳಗಿಸಲಿ ಮತಿಯನ್ನು, ಮತಿ ನಿನ್ನ ಕೈಲಿರಲಿ,
ಒಲವಿನಲಿ ಕೈ ಜೋಡಿಸಿರಲಿ ತಂತ್ರಜ್ಞ.
TechnoWise-173 HEART-HEAD-HANDS
Let the Mind be aware of Heart, and the light within the Heart
Illumine the Intellect, and let the Intellect be in your Hand,
And your Hands folded in obeisance with love.

Saturday, October 28, 2017

ತಂತ್ರಜ್ಞ ತ್ರಿಪದಿಗಳು-172 ಇಳೆಯನೇತಕೆ ಮಾಡೆ ಸ್ವರ್ಗ?

ತಂತ್ರಜ್ಞ ತ್ರಿಪದಿಗಳು-172 ಇಳೆಯನೇತಕೆ ಮಾಡೆ ಸ್ವರ್ಗ?
ತಿಳಿದಿರುವೆ ಅಷ್ಟಿಷ್ಟು! ನಿಲುಕದಿದೆ ಬಹಳಷ್ಟು!
ತಿಳಿದು ನಾಕವ, ಬುವಿಗೆ ಮರಳಿ ಬಂದವರಾರು?
ಇಳೆಯನೇತಕೆ ಮಾಡೆ ಸ್ವರ್ಗ? ತಂತ್ರಜ್ಞ.
TechnoWise-172 WHY NOT MAKE THIS EARTH HEAVEN?
What you know is little, a lot is unknown;
Who has come back to report after going to heaven?
Instead, why not make this earth itself heaven?

Friday, October 27, 2017

ತಂತ್ರಜ್ಞ ತ್ರಿಪದಿಗಳು-171 ಪರಮಹಂಸ-ವಿವೇಕಿ-ಜ್ಞಾನಿ-ಮಾಹಿತಿಗಾರ

ತಂತ್ರಜ್ಞ ತ್ರಿಪದಿಗಳು-171 ಪರಮಹಂಸ-ವಿವೇಕಿ-ಜ್ಞಾನಿ-ಮಾಹಿತಿಗಾರ
ತಿಳಿವ ವಸ್ತುವ ಜ್ಞಾನಿ, ಸಲೆ ವಿವೇಕಿಯು ಜನರ,
ಇಳೆಯಾಗುಹೋಗುಗಳ ಕೊಡುವ ಮಾಹಿತಿಗಾರ,
ತಿಳಿವ ತನ್ನನು ಪರಮಹಂಸ ತಂತ್ರಜ್ಞ.
TechnoWise-171 ENLIGHTENED- WISE-KNOWLEDGEABLE-INFORMED
He who knows things is knowledgeable, and he who knows people is wise;
He is well-informed who knows about world happenings,
And he who knows himself is enlightened.

Thursday, October 26, 2017

ತಂತ್ರಜ್ಞ ತ್ರಿಪದಿಗಳು-170 ಶೂನ್ಯದಿಂದ ಅನಂತದತ್ತ

ತಂತ್ರಜ್ಞ ತ್ರಿಪದಿಗಳು-170 ಶೂನ್ಯದಿಂದ ಅನಂತದತ್ತ
ಗುರಿಗೆ ಹಿರಿಯದು ಬೇಕು; ಹರುಷ ಕಿರಿಯದು ತರಲಿ;
ಇರಲಿ ಶೂನ್ಯವು ಮನದಿ, ಅಹಮಿಗೆ ಋಣಾತ್ಮಕತೆ;
ಅರಿವಿರಲಿ ಒಳಗಡೆ ಅನಂತ ತಂತ್ರಜ್ಞ.
TechnoWise-170 FROM NEGATIVE TO INFINITY
Positive big as aim, and positive small for joy,
Nothingness in the mind, and negativity towards Ego,
And awareness of Infinity inside.

Wednesday, October 25, 2017

ತಂತ್ರಜ್ಞ ತ್ರಿಪದಿಗಳು-169 ಅರ್ಧ ನಾರೀಶ್ವರ

ತಂತ್ರಜ್ಞ ತ್ರಿಪದಿಗಳು-169 ಅರ್ಧ ನಾರೀಶ್ವರ
ಬಲವಲ್ಲ-ಎಡವಲ್ಲ; ಬಲದ ಶಿವ-ಎಡದ ಶಿವೆ;
ಬಲ ಎಡಗಳಲಿ ಧ್ಯಾನ ವಿಜ್ಞಾನವಿರೆ, ಮಹಾ
ಬಲನು ಅರ್ಧ ನಾರೀಶ್ವರನು ತಂತ್ರಜ್ಞ.
TechnoWise-169 ARDHA NAREESHWARA
Not the Right! Not the Left! Shiva on the Right and Shive on the Left;
If Meditation and Science become Right and Left parts,
Ardha Nareeshwara stands verily powerful.


Tuesday, October 24, 2017

ತಂತ್ರಜ್ಞ ತ್ರಿಪದಿಗಳು-168 ಎಡ-ಮಧ್ಯಮ ಮಾರ್ಗ-ಬಲ

ತಂತ್ರಜ್ಞ ತ್ರಿಪದಿಗಳು-168 ಎಡ-ಮಧ್ಯಮ ಮಾರ್ಗ-ಬಲ
ಎಡವಲ್ಲ! ಬಲವಲ್ಲ! ನಡುವೆ ಮಧ್ಯಮ ಮಾರ್ಗ!
ಎಡ ಎಡವಿದನು ಸರಿಸಿ, ಬಲದ ದುರ್ಬಲ ಕಳೆದು,
ಕೂಡು ಅಧ್ಯಾತ್ಮ-ವಿಜ್ಞಾನ ತಂತ್ರಜ್ಞ.
TechnoWise-168 LEFT-MIDDLE PATH-RIGHT
Not the Left! Not the Right! In between is the Middle Path!
Careful where the Left stumbled, and the Right showed debility,
Harmonize Spirituality-Science, O! TechnoWise!


Monday, October 23, 2017

ತಂತ್ರಜ್ಞ ತ್ರಿಪದಿಗಳು-167 ತುಕ್ಕು-ಹಮ್ಮು

ತಂತ್ರಜ್ಞ ತ್ರಿಪದಿಗಳು-167 ತುಕ್ಕು-ಹಮ್ಮು
ಹೊರಶಕ್ತಿ ನಲುಗಿಸದ ಬಿರುಸಾದ ಕಬ್ಬಿಣಕೆ
ಅರಿಯಾಗುವುದು ತುಕ್ಕು! ಮಾನವನ ನಿಜವೈರಿ
ಉರಿಯಾಗಿ ಬಾಧಿಸುವ ಹಮ್ಮು! ತಂತ್ರಜ್ಞ.
TechnoWise-167 RUST-EGO
No outer things can easily destroy the hard iron,
But its own rust can destroy it! Likewise the real enemy of humans
Is the Ego that seethes like wildfire.

Sunday, October 22, 2017

ತಂತ್ರಜ್ಞ ತ್ರಿಪದಿಗಳು-166 ಎದ್ದೇಳು

ತಂತ್ರಜ್ಞ ತ್ರಿಪದಿಗಳು-166 ಎದ್ದೇಳು
ಅಭಿವಂದನಾ ಮನದಿ ಶುಭ ಬರುವುದಿಂದೆಂದು
ನಭವೆ ಮಿತಿ ನಡೆಗೆನುತ, ನಿನ್ನೆ ನಾಳೆಯ ಮರೆತು
ಪ್ರಭುವಾಗಿ ನಿರ್ವಹಿಸಲೇಳು ತಂತ್ರಜ್ಞ.
TechnoWise-166 AWAKE AND ARISE
With a thankful mind, and expecting good to happen,
Thinking that sky is the limit for progress, unaware of yesterday and tomorrow, 
Awake, arise, and rule today as a king.

Saturday, October 21, 2017

ತಂತ್ರಜ್ಞ ತ್ರಿಪದಿಗಳು-೧೬೫ ಕಪ್ಪು-ಬಿಳುಪು ಸಂಮಿಶ್ರ

ತಂತ್ರಜ್ಞ ತ್ರಿಪದಿಗಳು-೧೬೫ ಕಪ್ಪು-ಬಿಳುಪು ಸಂಮಿಶ್ರ
ಬೆಪ್ಪು-ಚಾತರ್ಯಗಳು, ತಪ್ಪೊಪ್ಪುಗಳೆ ಇಲ್ಲ;
ಅಪ್ಪಟದ ಬೆಳಕು-ಕತ್ತಲೆ, ಒಳಿತು-ಕೆಡುಕಿಲ್ಲ;
ಕಪ್ಪು-ಬಿಳುಪಿನ ಮಿಶ್ರ ಬದುಕು ತಂತ್ರಜ್ಞ.
TechnoWise-165 MIX OF BLACK AND WHITE
There's nothing like perfect wise or foolish, and right or wrong;
Absolute light or darkness and good or bad doesn't exist;
Life is always a mix of black and white.

Friday, October 20, 2017

ತಂತ್ರಜ್ಞ ತ್ರಿಪದಿಗಳು-164 ಕತ್ತಲು-ಬೆಳಕು

ತಂತ್ರಜ್ಞ ತ್ರಿಪದಿಗಳು-164 ಕತ್ತಲು-ಬೆಳಕು
ಕತ್ತಲಿರಲೊಳಗೆಲ್ಲ, ಸುತ್ತ ಎರಚುವೆ ಅದನೆ;
ಉತ್ತಮೋತ್ತಮ ದೀಪ್ತಿ ಒಳಗಿರಿಸು ರಸದೊಡನೆ-
ಹತ್ತಿಕೊಳುವುದು ದೀಪ ಸುತ್ತ ತಂತ್ರಜ್ಞ.
TechnoWise-164 DARKNESS- LIGHT
When there's darkness inside, naturally you throw that all around;
So fill the inside with more and more Light and Rasa-
Soon millions of lights lighted up around you.

Thursday, October 19, 2017

ತಂತ್ರಜ್ಞ ತ್ರಿಪದಿಗಳು-163 ಬೆಳಕನೇ ನೋಡು ಪರರಲ್ಲಿ

ತಂತ್ರಜ್ಞ ತ್ರಿಪದಿಗಳು-163 ಬೆಳಕನೇ ನೋಡು ಪರರಲ್ಲಿ
ಇಳೆಯ ಸರ್ವರಲಿಹುದು ಚೆಲು ಅನನ್ಯದ ಬೆಳಕು;
ಬೆಳಕನೇ ನೋಡು ಪರರಲ್ಲಿ, ಕತ್ತಲ ಮರೆತು;
ಬೆಳಕೆ ಸರ್ವರ ಮಧುರ ಕೇಂದ್ರ ತಂತ್ರಜ್ಞ.
TechnoWise-163 See only the Light in others
All beings in this world have a unique and beautiful light about them;
See only the light in others, forgetting all the dark spots;
Only the light is the sweet centre of all.

Wednesday, October 18, 2017

ತಂತ್ರಜ್ಞ ತ್ರಿಪದಿಗಳು-162 ಶುಭದೀವಳಿಗೆ ನಿಮಗೆ

ತಂತ್ರಜ್ಞ ತ್ರಿಪದಿಗಳು-162 ಶುಭದೀವಳಿಗೆ ನಿಮಗೆ
ಸಂಪದವು, ಸಂತಸದ ಕಂಪು, ಸಫಲತೆ, ಶಾಂತಿ
ಇಂಪು ಬಾಳಲಿ, ಸ್ವಸ್ಥಿ, ಸನ್ಮಾನ, ಸಮೃದ್ಧಿ
ಸೊಂಪು ಶುಭದೀವಳಿಗೆ ನಿಮಗೆ ತಂತ್ರಜ್ಞ.
TechnoWise-162 Happy Deepavali
Wish you all a prosperous bon Festival of Light
With opulence, fragrance of joy, success and peace,
Sweetness in life, health, felicitation and profuseness.

Tuesday, October 17, 2017

ತಂತ್ರಜ್ಞ ತ್ರಿಪದಿಗಳು-161 ಒಳಗೆ ದೀಪಾವಳಿ

ತಂತ್ರಜ್ಞ ತ್ರಿಪದಿಗಳು-161 ಒಳಗೆ ದೀಪಾವಳಿ
ಬೆಳಕುಗಳ ಬೆಳಕಿಹುದು ಒಳಗಿನೆದೆ ಹಣತೆಯಲಿ
ಒಳಗೆಳೆದು ಕರಣಗಳ ಮನವ ಕೇಂದ್ರೀಕರಿಸಿ
ಒಳಗೆ ಮೊದಲಾಚರಿಸು ಹಬ್ಬ ತಂತ್ರಜ್ಞ.
TechnoWise-161 Inner festival of Light
Light of Lights is shining in the chamber of your heart;
Witdrawing the senses, fix the mind on this Light,
And celebrate the inner festival of lights.

Monday, October 16, 2017

ತಂತ್ರಜ್ಞ ತ್ರಿಪದಿಗಳು-160 ಗುರಿ ಮತ್ತು ಸ್ವಪ್ನ

ತಂತ್ರಜ್ಞ ತ್ರಿಪದಿಗಳು-160 ಗುರಿ ಮತ್ತು ಸ್ವಪ್ನ
ಇರುವ ಭಿನ್ನತೆಯೊಂದೆ: "ಗುರಿ", "ಸ್ವಪ್ನ"ಗಳ ನಡುವೆ!
ಇರೆ "ಅಯತ್ನದ ನಿದ್ರೆ"-"ಸುಖಸ್ವಪ್ನ"!  "ಗುರಿ" ಮುಟ್ಟ
ಲಿರಬೇಕು "ಅನಿದ್ರಾ ಯತ್ನ"! ತಂತ್ರಜ್ಞ.
TechnoWise-160 AIM and DREAM
There's only one difference between AIM and DREAM;
DREAM requires "EFFORTLESS SLEEP"!
AIM requires "SLEEPLESS EFFORTS"!

Sunday, October 15, 2017

ತಂತ್ರಜ್ಞ ತ್ರಿಪದಿಗಳು-159 ಹಳದಿ ಕೆಂಪು ತಾರಾಮತ್ಸ್ಯ

ತಂತ್ರಜ್ಞ ತ್ರಿಪದಿಗಳು-159 ಹಳದಿ ಕೆಂಪು ತಾರಾಮತ್ಸ್ಯ
ಉಸಿರು ಬರುವುದು ಇಳೆಗೆ ಹೊಸಹನಿಯ ಮಳೆ ಬೀಳೆ
ಹಸಿರುಕಡಲಲಿ ಹಳದಿ ಕೆಂಪು ತಾರಾಮತ್ಸ್ಯ
ಎಸೆಯುತಿವೆ ಕಣ್ಗಿತ್ತು ಹಬ್ಬ ತಂತ್ರಜ್ಞ.
TechnoWise-159 Yellow and Red Star Fish
Mother Earth starts breathing when the first rain drops cool her; 
The green ocean swells with yellow and red star fish,
And verily a feast for the eyes indeed.

Wednesday, October 11, 2017

ತಂತ್ರಜ್ಞ ತ್ರಿಪದಿಗಳು-155 ಮನುಕುಲ-ಸೊಳ್ಳೆಕುಲ

ತಂತ್ರಜ್ಞ ತ್ರಿಪದಿಗಳು-155 ಮನುಕುಲ-ಸೊಳ್ಳೆಕುಲ
ಒಳ್ಳೆಯಾಹಾರ ರುಚಿಯುಳ್ಳ ಬಿಸಿಬಿಸಿ ರಕ್ತ
ಸೊಳ್ಳೆಗಳಿಗಿರಲೆಂದೆ ನರಸೃಷ್ಟಿಯಾಯ್ತೆಂದ
ಮುಳ್ಳುಬಾಯಿಯ ಸೊಳ್ಳೆರಾಯ ತಂತ್ರಜ್ಞ.
TechnoWise-155 Mankind-Mosquitokind
Mankind was created for the sake of mosquitokind,
So that we can have a tasty good food of warm blood:
Said the needle-mouthed mosquito King.

Tuesday, October 10, 2017

ತಂತ್ರಜ್ಞ ತ್ರಿಪದಿಗಳು-154 ಶತಪಥಗಳು

ತಂತ್ರಜ್ಞ ತ್ರಿಪದಿಗಳು-154 ಶತಪಥಗಳು
ಗಿರಿ ಬುಡದಲಿರೆ, ತುದಿಗೆ ಇರುವ ಪಥ ಒಂದೆನುವೆ!
ಗಿರಿಶಿಖರ ತಲಪೆ ಶತಪಥದಿರವ ನೀನರಿವೆ
ಗುರಿ ಸೇರಿದನುಭಾವಿಯಂತೆ ತಂತ್ರಜ್ಞ.
TechnoWise-154 Many Paths
When you start from the bottom of a mountain, you see only path!
When you reach the top, you see hundreds of paths ending there,
Like a mystic who has realised his goal.

Monday, October 9, 2017

ತಂತ್ರಜ್ಞ ತ್ರಿಪದಿಗಳು-153 ಉತ್ತಮೋತ್ತಮ ವೃತ್ತಿ

ತಂತ್ರಜ್ಞ ತ್ರಿಪದಿಗಳು-153 ಉತ್ತಮೋತ್ತಮ ವೃತ್ತಿ
ಉತ್ತಮೋತ್ತಮವಾದ ವೃತ್ತಿಯೇನೆನ್ನುವೆಯ?
ಮುತ್ತಿನಂತಹ ವ್ಯಕ್ತಿಯಾಗುವುದೆ ವರವೃತ್ತಿ!
ಹತ್ತು ದಿಕ್ಕಲು ಕಡಿಮೆ ಸ್ಪರ‍್ಧೆ  ತಂತ್ರಜ್ಞ.
TechnoWise-153 Great Career
Which field could make a great career? That's your question!
Becoming a good Human Being is the best career! That's the answer.
It has very little competition everywhere!

Saturday, October 7, 2017

ತಂತ್ರಜ್ಞ ತ್ರಿಪದಿಗಳು-152 ಮಾತ್ರೆಗಳ ರಹಸ್ಯ

ತಂತ್ರಜ್ಞ ತ್ರಿಪದಿಗಳು-152 ಮಾತ್ರೆಗಳ ರಹಸ್ಯ
ಮಾತ್ರೆಗಳದಿದೆ ಮುಖ್ಯ ಪಾತ್ರವಾರೋಗ್ಯದಲಿ;
ಧಾತ್ರಿಯಲಿ ಹಳೆರೋಗ ಕಳಿಸಿ, ಹೊಸತನು ತರುವ
ಸೂತ್ರವಿವುಗಳ ಒಳರಹಸ್ಯ ತಂತ್ರಜ್ಞ.
TechnoWise-152 The Secret of Pills
Pills play an important role in health issues;
Curing old diseases and bringing new ones
Is their innermost secret formula. 

Friday, October 6, 2017

ತಂತ್ರಜ್ಞ ತ್ರಿಪದಿಗಳು-151 ಮುದ ಮೊದಲ ಹೆಜ್ಜೆ

ತಂತ್ರಜ್ಞ ತ್ರಿಪದಿಗಳು-151 ಮುದ ಮೊದಲ ಹೆಜ್ಜೆ
ಒದಗಿಬರುವುದು ಸೊಗಸು, ಬದಲಾಗುವುದು ರೂಪ;
ಅದಾಗಿ ಸದಭ್ಯಾಸ, ಕೊನೆಗದುವೆ ವ್ಯಕ್ತಿತ್ವ!
ಮುದ ತೋರುವುದೆ ಮೊದಲ ಹೆಜ್ಜೆ ತಂತ್ರಜ್ಞ.
TechnoWise-151Showing yourself happy 
By the accrual of charm, your Look becomes better;
Gradually it becomes your Habit, and then your Personality;
Showing yourself happy is the first step.

Thursday, October 5, 2017

ತಂತ್ರಜ್ಞ ತ್ರಿಪದಿಗಳು-150 ಕಾಲಶ್ರೀ ಸಾಲಿಗ

ತಂತ್ರಜ್ಞ ತ್ರಿಪದಿಗಳು-150 ಕಾಲಶ್ರೀ ಸಾಲಿಗ
ಹೇಳಿ ಅಭಿವಂದನೆಯ, ಕೇಳಿ ಬುದ್ಧಿಯ ವರವ, 
ಕಾಲ ನೀಕೊಡು ಅವಗೆ, ಪ್ರಾರ್ಥನಾವೃದ್ಧಿ ಜತೆ
ಕಾಲಶ್ರೀ ಸಾಲಿಗನೆ ದೇವ! ತಂತ್ರಜ್ಞ.
TechnoWise-150 Time Precious
Talking and saluting respectfully, and asking for wisdom,
Give back some time to him with compound interest of Prayer; 
He is the creator, the loaner of precious Time.

Wednesday, October 4, 2017

ತಂತ್ರಜ್ಞ ತ್ರಿಪದಿಗಳು-149 ಮನಜಾಲ-ಜಲಜಾಲ

ತಂತ್ರಜ್ಞ ತ್ರಿಪದಿಗಳು-149 ಮನಜಾಲ-ಜಲಜಾಲ
ದೂರ ಚಂದಿರನಲ್ಲಿ ನೀರು ಮೊದಲಿಗೆ ಕಂಡ
ಭಾರತದ ವಿಜ್ಞಾನಿಮನಜಾಲ ಬುವಿಗಾಗಿ
ಸೇರಿಸಲಿ ನದಿಯ ಜಲಜಾಲ ತಂತ್ರಜ್ಞ.
TechnoWise-149 Interlinking of Minds-Rivers
Indian scientists were the first to discover water on the distant moon;
Let their tribe be the first to interlink their minds for water here on earth
By interlinking of rivers, veins of mother India.

Tuesday, October 3, 2017

ತಂತ್ರಜ್ಞ ತ್ರಿಪದಿಗಳು-148 ರಂಗೋಲೆ ಬಹುಚಂದ

ತಂತ್ರಜ್ಞ ತ್ರಿಪದಿಗಳು-148 ರಂಗೋಲೆ ಬಹುಚಂದ
ಅಂಗಳದ ವರ್ಣಮಯ ರಂಗೋಲೆ ಬಹುಚಂದ;
ಬೆಂಗದಿರ ಹೂಗಿಡದಿ, ಪೂರ್ವಪಶ್ಚಿಮ ನಭದಿ
ಸಿಂಗರಿಸೆ ಚಂದ ಅತ್ಯಂತ! ತಂತ್ರಜ್ಞ.
TechnoWise-148 Colorful Rangole
Decorative colorful Rangole on the yard is beautiful indeed!
But, in the flowering plants and skies, East and West,
The Rangole paintings by the Sun are matchless!

Monday, October 2, 2017

ತಂತ್ರಜ್ಞ ತ್ರಿಪದಿಗಳು-147 ಸೂತ್ರದ ಗೊಂಬೆಗಳೆ?

ತಂತ್ರಜ್ಞ ತ್ರಿಪದಿಗಳು-147 ಸೂತ್ರದ ಗೊಂಬೆಗಳೆ?
ಗೊಂಬೆಗಳೆ ನಾವು? ಜಗದಂಬೆ ಎಳೆವಳೆ ಸೂತ್ರ?
ತುಂಬಿದೆಯೆ ಪೂರ್ಣ ನಮ್ಮಲಿ ಪೂರ್ಣದಿಂದಾಗಿ?
ನಂಬು! ಬಹು ಪ್ರಶ್ನೆಗಳನೆತ್ತಿ! ತಂತ್ರಜ್ಞ.
TechnoWise-147 Are we Puppets?
Are we puppets? Is Mother Universe a puppeteer manipulating the strings?
Are we perfect emanating from a divine perfection?
Have a belief! but only after questioning and knowing.

Sunday, October 1, 2017

ತಂತ್ರಜ್ಞ ತ್ರಿಪದಿಗಳು-೧೪೬ ಬೋನ್ಸಾಯಿ  ಕುಬ್ಜ
ನೂರಡಿಗೆ ಬೇರಿಳಿಸು, ಏರಿ ಮುಗಿಲನು ಮುಟ್ಟು,
ದಾರಿಗಗೆ ಪಕ್ಷಿಗಾಸರೆಯಾಗು; ಆಗದಿರು
ಮೂರಡಿಯ ಬೋನ್ಸಾಯಿ ಕುಬ್ಜ ತಂತ್ರಜ್ಞ.
TechnoWise-146 Bonsai Dwarf
Send your roots hundreds of feet down, and grow up to touch the clouds,
Be the cool shelter for weary travellers and birds,
Don't be a three feet Bonsai dwarf.