Thursday, August 31, 2017

ತಂತ್ರಜ್ಞ ತ್ರಿಪದಿಗಳು-120 ಮಹಾಭಾರತ ಕೊಡುವ ಕಲಿಕೆ

ತಂತ್ರಜ್ಞ ತ್ರಿಪದಿಗಳು-120 ಮಹಾಭಾರತ ಕೊಡುವ ಕಲಿಕೆ
ಬೇಕೆಷ್ಟು ನೆಲದಗಲ? ಸಾಕಿರದೆ ಛಲ ಮನಕೆ?
ಭೀಕರವು ಜೂಜಾಟ! ನಿಷ್ಕಾಮವಿಡು ಕರ್ಮ!
ನಾಕು ಭಾರತ ಕೊಡುವ ಕಲಿಕೆ ತಂತ್ರಜ್ಞ. 
TechnoSmart-120 Mahabharatha teaches
How much land one needs?
Is there no limit for obstinacy?
Dangerous really is Gambling!
Karma should be Desireless!
Four lessons from Mahabharatha.



Tuesday, August 29, 2017

ತಂತ್ರಜ್ಞ ತ್ರಿಪದಿಗಳು-119 ಹಸುರಿಂದ ಹರಿವು

ತಂತ್ರಜ್ಞ ತ್ರಿಪದಿಗಳು-119 ಹಸುರಿಂದ ಹರಿವು
ಹರಿವ ನದಿ ಚರಿತ್ರೆಯಲಿರದೆ ಸರಸ್ವತಿಯಂತೆ
ಹರಿಯೆ ಹಸುರಿರಬೇಕು - ಜಲದಿಂದ ಹಸುರಲ್ಲ,
ಸಿರಿಯ ಹಸುರಿಂದ ನದಿಹರಿವು ತಂತ್ರಜ್ಞ.
TECHNOSMART-119 WATER FROM GREENERY
Unlike River Saraswathi, which exists only in history,
If our rivers are to flow in future,
Greenery is needed, which doesn't come from water,
But from greeery comes the flowing water.


ತಂತ್ರಜ್ಞ ತ್ರಿಪದಿಗಳು-118 ರಾಮಾಯಣದಿಂದ ಕಲಿಕೆ

ತಂತ್ರಜ್ಞ ತ್ರಿಪದಿಗಳು-118 ರಾಮಾಯಣದಿಂದ ಕಲಿಕೆ
ದಾಶರಥಿ ಆತ್ಮಬಲ, ದಶಶಿರನು ಆಸೆಫಲ,
ದಶರಥರು ನಡೆನುಡಿಯ ಎಚ್ಚರಿಕೆ ಕಲಿಸುವರು,
ಯಶಕೆ ರಾಮಾಯಣದ ಪಾಠ! ತಂತ್ರಜ್ಞ.
TECHNOSMART-118 Lessons from ramayana
Power of the soul from Rama,
Knowledge of misery from evil desire,
Caution in words and deeds from Dasharata,
Are the success lessons from Ramayana.

Sunday, August 27, 2017

ತಂತ್ರಜ್ಞ ತ್ರಿಪದಿಗಳು-117 ಮುಗುಳುನಗು

ತಂತ್ರಜ್ಞ ತ್ರಿಪದಿಗಳು-117 ಮುಗುಳುನಗು
ಮುಗುಳುನಗು! ಆತ್ಮಸುಮ ಮಗಮಗಿಸಿ ಅರಳಿಸಲು,
ಬಿಗಿದ ನರಮಂಡಲವ ಸಡಿಲಿಸಲು ಮುಗುಳುನಗು!
ಜಗದಿ ಪಸರಿಸಲು ನಗುಮುಗುಳು, ತಂತ್ರಜ್ಞ!
SMILE
Smile! to blossom the fragrant flowers of the soul;
To relax the strained nervous system, you Smile!
To spread the buds of Smile everywhere.


ತಂತ್ರಜ್ಞ ತ್ರಿಪದಿಗಳು-116 ಬೇಕುಬೇಕು! ಸಾಕು!

ತಂತ್ರಜ್ಞ ತ್ರಿಪದಿಗಳು-116 ಬೇಕುಬೇಕು! ಸಾಕು!
ಬೇಕು ಸಾವಿರ ಕೋಟಿ ಬೇಕುಬೇಕೆನೆ ಮನಸು,
ಬೇಕು ಪದವಿ ಪ್ರತಿಷ್ಠೆ ಬೇಕುಬೇಕೆನೆ ಹಮ್ಮು,
ಸಾಕೆನ್ನುವುದು ಹೊಟ್ಟೆಯೊಂದೆ! ತಂತ್ರಜ್ಞ.
MORE! MORE! ENOUGH!
When Mind desires more and more crores of money,
And Ego demands more and more Position and Superiority, 
That which says Enough is Enough is Stomach only!

Saturday, August 26, 2017

ತಂತ್ರಜ್ಞ ತ್ರಿಪದಿಗಳು-115 ನಿರಂತರ ಕಲಿಕೆ

ತಂತ್ರಜ್ಞ ತ್ರಿಪದಿಗಳು-115 ನಿರಂತರ ಕಲಿಕೆ
ಬಾಣಬಿಲ್ಲಿನ ಪಾಠ ದ್ರೋಣನಿಂದರ್ಜುನಗೆ,
ಕೃಷ್ಣನಿಂದೆರಡು ಸಲ ಆತ್ಮಮನಸಿನ ಪಾಠ,
ಜಾಣ! ಕಲಿ! ಸತತ! ಕಲಿಯುಗದಿ! ತಂತ್ರಜ್ಞ.
LIFELONG LEARNING:
Arjuna learnt the art of archery from Guru Drona,
And from Krishna about soul and mind;
In this era cutes learn lifelong.

Friday, August 25, 2017

ತಂತ್ರಜ್ಞ ತ್ರಿಪದಿಗಳು-114 ಮೆದುಳು-ಹೃದಯ

ತಂತ್ರಜ್ಞ ತ್ರಿಪದಿಗಳು-114 ಮೆದುಳು-ಹೃದಯ
ಮೆದುಳಿನಲ್ಲಿರುವಂತೆ ಎದುರಾಳಿ ವೈರಿಗಳು
ಹದುಳಿಗರು ಸಖರಿರದೆ, ಹೃದಯವೆಲ್ಲವು ಬೆಳಕು;
ಮೆದುಳು ಶುಚಿ, ಹೃದಯ ರುಚಿಯಿರಿಸು ತಂತ್ರಜ್ಞ.
BRAIN-HEART:
Heart has divine light, unlike the brain which
Has both harmful foes and well-wishing friends;
So keep the Brain clean and the Heart bright.


Thursday, August 24, 2017

ತಂತ್ರಜ್ಞ ತ್ರಿಪದಿಗಳು-113 ಶುದ್ಧ ಪ್ರಾರ್ಥನೆ

ತಂತ್ರಜ್ಞ ತ್ರಿಪದಿಗಳು-113 ಶುದ್ಧ ಪ್ರಾರ್ಥನೆ
ಗುಡಿಚರ್ಚುಗಳ ಗೋಡೆ ನಡುವೆ ನುಡಿವುದಕಿಂತ
ಕಡುದುಃಖ ಭರಿತ ಆಸ್ಪತ್ರೆ ಕೋಣೆಗಳಿಂದ
ನುಡಿವ ಪ್ರಾರ್ಥನೆಯಧಿಕ ಶುದ್ಧ ತಂತ್ರಜ್ಞ.
SINCERE PRAYER:
More sincere prayers come
From sorrow filled rooms of hospitals
Than from inside the temples and churches. 

Wednesday, August 23, 2017

ತಂತ್ರಜ್ಞ ತ್ರಿಪದಿಗಳು-112 ದೃಷ್ಟಿ-ಸೃಷ್ಟಿ

ತಂತ್ರಜ್ಞ ತ್ರಿಪದಿಗಳು-112 ದೃಷ್ಟಿ-ಸೃಷ್ಟಿ
ಸೃಷ್ಟಿಯಲಿ ವೈವಿಧ್ಯ; ವ್ಯಷ್ಟಿಯಲಿ ವೈಶಿಷ್ಟ್ಯ;
ನಷ್ಟಲಾಭಗಳು, ಸಂತುಷ್ಟಿ ಸಂತಾಪಗಳು
ದೃಷ್ಟಿಕೋನದ ಸೃಷ್ಟಿದೃಶ್ಯ ತಂತ್ರಜ್ಞ.
PERSPECTIVES:
Creation is full of variety, and individuals have particularity;
Loss and gain, joy and sorrow
Are perspective specific views of creation.

Tuesday, August 22, 2017

ತಂತ್ರಜ್ಞ ತ್ರಿಪದಿಗಳು-111 ಬಾಂಧವ್ಯ ತೆರಿಗೆ

ತಂತ್ರಜ್ಞ ತ್ರಿಪದಿಗಳು-111 ಬಾಂಧವ್ಯ ತೆರಿಗೆ
ನಡೆತಂದ ಎದುರಿನವನೊಡನೆ ಮನುಕುಲದಲ್ಲಿ
ಪಡೆದ ಬಾಂಧವ್ಯಕ್ಕೆ ಮುಗುಳುನಗು ದಯೆಯ ನುಡಿ
ಕೊಡುವ ಅಕ್ಕರೆಯ ಕಿರುತೆರಿಗೆ ತಂತ್ರಜ್ಞ.
RELATIONSHIP TAX
A sweet smile and a kind word
Are the loving taxes we pay
for the human relationship we have 
With everyone whom we meet on the way. 

Monday, August 21, 2017

ತಂತ್ರಜ್ಞ ತ್ರಿಪದಿಗಳು-110 ನಿನ್ನಮ್ಮ-ನೆಲದಮ್ಮ

ತಂತ್ರಜ್ಞ ತ್ರಿಪದಿಗಳು-110 ನಿನ್ನಮ್ಮ-ನೆಲದಮ್ಮ
ನಿನ್ನನ್ನು ಹೆತ್ತಾಗ ಬನ್ನದಲಿ ಹೊರಕಳಿಸಿ
ನಿನ್ನಮ್ಮ ಹರ್ಷಿಸಿರೆ, ನೆಲದಮ್ಮ ದುಃಖಿಸಲಿ
ತನ್ನೊಳಗೆ ಎಳೆವಾಗ ನಿನ್ನ ತಂತ್ರಜ್ಞ.
YOUR MOTHER and MOTHER EARTH:
When you were born your mother rejoiced
After pushing you out of her womb;
When you die let the mother earth cry
While taking you inside her womb.


Sunday, August 20, 2017

ತಂತ್ರಜ್ಞ ತ್ರಿಪದಿಗಳು-109 ನೆಲತಾಯ ಜಲಬ್ಯಾಂಕು

ತಂತ್ರಜ್ಞ ತ್ರಿಪದಿಗಳು-109 ನೆಲತಾಯ ಜಲಬ್ಯಾಂಕು
ನೆಲತಾಯ ಬ್ಯಾಂಕಿಂದ ಜಲಸಾಲ ಪಡೆವ ಜನ 
ಸುಲಭಕಂತಿನ ಸರಳ ಜಲಬಡ್ಡಿ ಕೊಡದಿರಲು
ಜಲನಿಧಿಯ ಬ್ಯಾಂಕಿನ ದಿವಾಳಿ ತಂತ್ರಜ್ಞ.
WATER BANK OF MOTHER EARTH:
People who take water loans from the Bank of Mother Earth,
Don't pay small simple water interest, and 
The Water Bank is becoming bankrupt.

Friday, August 18, 2017

ತಂತ್ರಜ್ಞ ತ್ರಿಪದಿಗಳು-108 ಅಪರಿಪೂರ್ಣ

ತಂತ್ರಜ್ಞ  ತ್ರಿಪದಿಗಳು-108 ಅಪರಿಪೂರ್ಣ
ಪರಿತಪಿಸದಿರು ಬಾಳು ಪರಿಪೂರ್ಣವಿಲ್ಲೆನುತ!
ಪರಿಪೂರ್ಣವಿರೆ ಅರಳುವಿಕೆ ವಿಕಾಸಗಳಿಲ್ಲ,
ಇರಿಸಲೆಡೆ ನಾವೀನ್ಯಕಿಲ್ಲ ತಂತ್ರಜ್ಞ.
IMPERFECTION:
Don't be upset because life is Imperfect!
No Blossoming and Evolution in Perfection,
And no Space for Novelty.

Thursday, August 17, 2017

ತಂತ್ರಜ್ಞ ತ್ರಿಪದಿಗಳು-107 ಕೊಡದವರಿಲ್ಲ

ತಂತ್ರಜ್ಞ ತ್ರಿಪದಿಗಳು-107 ಕೊಡದವರಿಲ್ಲ
ಮುದ ಕೊಡುವರೊಳ್ಳಿದರು, ಅಧಮರನುಭವಗಳನು,
ಅಧಮಾಧಮರು ಪಾಠ, ನರವರರು ಸವಿನೆನಪು
ಬದುಕಿನಲಿ ಕೊಡದವರ ಕಾಣೆ ತಂತ್ರಜ್ಞ.
Good people give joy, bad people experience,
Worst people give lessons, best people sweet memories;
There are none who don't give anything.

Monday, August 14, 2017

ತಂತ್ರಜ್ಞ ತ್ರಿಪದಿಗಳು-106 ಇಳಿದಳಿದು ಬೆಳೆಯಾಗು

ತಂತ್ರಜ್ಞ ತ್ರಿಪದಿಗಳು-106 ಇಳಿದಳಿದು ಬೆಳೆಯಾಗು
ನೆಲಕೆ ಇಳಿಯುವ ಬೀಜ ಮೊಳೆತು ಕೊಡುವುದು ಫಸಲು;
ನೆಲವ ಬಯಸದ ಬೀಜ ಬೀಸುಕಲ್ಲಲಿ ಹಿಟ್ಟು;
ನೆಲಕಿಳಿದು ಅಳಿದು ಬೆಳೆಯಾಗು ತಂತ್ರಜ್ಞ.
The corn that enters the earth germinates and gives good crop;
That which does not dare, gets grinded by the stone;
So enter the earth, lose yourself, and become a bumper crop.

Sunday, August 13, 2017

ತಂತ್ರಜ್ಞ ತ್ರಿಪದಿಗಳು-105 ಮನದಳವು ಸಾಗರಕೆ ಭರತ

ತಂತ್ರಜ್ಞ ತ್ರಿಪದಿಗಳು-105 ಮನದಳವು ಸಾಗರಕೆ ಭರತ
ದಿನದೆಚ್ಚರದ ಕಾಲ, ಮನದಿ ಸಂತಸವುಕ್ಕಿ
ಮಿನುಗಿರಲು ಮುಗುಳುನಗು ಹುಣ್ಣಿಮೆಯು ಮುಖ ತುಂಬ
ಮನದಳವು ಸಾಗರಕೆ ಭರತ ತಂತ್ರಜ್ಞ.
HIGH TIDE
If the mind is full of joy when one is awake,
And if smile continues to shine like full moon in the face,
Then it's high tide for the ocean of Mind Power.

Saturday, August 12, 2017

ತಂತ್ರಜ್ಞ ತ್ರಿಪದಿಗಳು-104 ಸಮಸ್ಯಾಹೇತು

ತಂತ್ರಜ್ಞ ತ್ರಿಪದಿಗಳು-104 ಸಮಸ್ಯಾಹೇತು
ಒಂದಿಷ್ಟು ಯೋಚಿಸದೆ ಮುಂದಿರಿಸುವುದು ಹೆಜ್ಜೆ;
ಮುಂದಿನದಕಂಜುವುದು ಯೋಚಿಸುತಲೇ ಕುಳಿತು;
ಇಂದಿನ ಸಮಸ್ಯೆಗಿವು ಹೇತು ತಂತ್ರಜ್ಞ.
CAUSE OF PROBLEMS:
We simply act without thinking at all;
We go on thinking without acting at all;
These two reasons are the cause of all our problems.


Tuesday, August 8, 2017

ತಂತ್ರಜ್ಞ ತ್ರಿಪದಿಗಳು-103 ಹೆಗ್ಗುರಿ ಸೊಡರು

ತಂತ್ರಜ್ಞ ತ್ರಿಪದಿಗಳು-103 ಹೆಗ್ಗುರಿ ಸೊಡರು
ಗುರಿ ಕ್ಷಿಪಣಿಗಿರಬೇಕು, ಹೊರಟ ನೌಕೆಗು ಬೇಕು;
ಹೊರಗಿನೊಳಗಿನ ಶಕ್ತಿ ಬಳಸಿ ಬೆಳಗಲು ಬಾಳು
ನರಗೆ ಹೆಗ್ಗುರಿಸೊಡರು ಬೇಕು ತಂತ್ರಜ್ಞ.
LIGHT OF LOFTY AIM
A missile has a destination, so also a departed ship;
To have an enlightened life, using powers internal and external,
one needs the light of a lofty aim.

Monday, August 7, 2017

ತಂತ್ರಜ್ಞ ತ್ರಿಪದಿಗಳು-102 ಹಣಮೌಲ್ಯ-ಕ್ಷಣಮೌಲ್ಯ

ತಂತ್ರಜ್ಞ ತ್ರಿಪದಿಗಳು-102 ಹಣಮೌಲ್ಯ-ಕ್ಷಣಮೌಲ್ಯ
ಹಣ ಕಳೆದು, ಸಿಗಬಹುದ; ಹಣ ದ್ವಿಗುಣಗೊಳಬಹುದು;
ಕ್ಷಣ ಮಾತ್ರ ಸಿಗದು! ತಿಳಿ! ಹಣವೆಷ್ಟು ನೀಡಿದರು!
ಹಣಕಿಂತ ಕ್ಷಣಮೌಲ್ಯ ಅಧಿಕ ತಂತ್ರಜ್ಞ.
TIME AND MONEY
The lost money, and more money, you can always get;
But you can't get more time for whatever cost;
More valuable than money is Time.

Sunday, August 6, 2017

ತಂತ್ರಜ್ಞ ತ್ರಿಪದಿಗಳು-101 ಮನದ ದನಿ-ಎದೆಬೆಳಕು

ತಂತ್ರಜ್ಞ ತ್ರಿಪದಿಗಳು-101 ಮನದ ದನಿ-ಎದೆಬೆಳಕು
ಮನದ ಸಾವಿರದ ಯೋಚನೆದನಿಯ ಬದಿಗೊತ್ತು;
ತನಿಬೆಳಕು ಕೊಡುವ ಹೃದಯದ ದಾರಿಯಲಿ ಸಾಗು;
ದನಿಗಿಂತ ಬೆಳಕು ಬಹು ಶಕ್ತ ತಂತ್ರಜ್ಞ.
SOUND AND LIGHT
Brushing aside thousands of voices of thoughts,
just go where the light of your heart leads you,
for light is more powerful than voice.

Friday, August 4, 2017

ತಂತ್ರಜ್ಞ ತ್ರಿಪದಿಗಳು-100 ಬಾಯ್ತುಂಬ ನಗು

ತಂತ್ರಜ್ಞ ತ್ರಿಪದಿಗಳು-100 ಬಾಯ್ತುಂಬ ನಗು
ನಗುವಾಗ ಬಾಯ್ತುಂಬ, ಬಗೆವ ಯೋಚನೆ ಶೂನ್ಯ;
ಜಗಳ ಪಶ್ಚಾತ್ತಾಪ ಕೋಪ ಚಿಂತೆಗಳಳಿದು
ನಗುವು ಸಂತಸದ ಸಹಯೋಗ ತಂತ್ರಜ್ಞ.
A HEARTY LAUGH
All the thoughts vanish during a hearty laugh;
Hassles, remorse, anger and worry disappear;
A good laugh is a liaison with joy.

Wednesday, August 2, 2017

ತಂತ್ರಜ್ಞ ತ್ರಿಪದಿಗಳು-99 ಮರಳಿ ಯತ್ನವ ಮಾಡು

ತಂತ್ರಜ್ಞ ತ್ರಿಪದಿಗಳು-99 ಮರಳಿ ಯತ್ನವ ಮಾಡು
ಒರಸಿ ಹಳೆ ತಪ್ಪುಗಳ, ಅರಸಿ ಹೊಸ ದಾರಿಗಳ,
ಅರಿವು ವಿಸ್ತರಗೊಳಿಸಿ, ಗುರಿಯ ತಲಪುವ ತನಕ
ಮರಳಿ ಯತ್ನವ ಮಾಡು, ಕಲಿತು, ತಂತ್ರಜ್ಞ.
TRY AGAIN AND AGAIN
Erasing old mistakes, searching new ways,
Expanding periphery of knowledge, till you reach the goal,
Try, Learn, and Try again.